ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಡಾಫೋನ್ ನಿಂದ 9 ರುಗಳ ರೀಚಾರ್ಜ್ ಯೋಜನೆ!

By Mahesh
|
Google Oneindia Kannada News

ಬೆಂಗಳೂರು, ಜೂನ್ 04: ಟೆಲಿಕಾಂ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ವೋಡಾಫೋನ್ ಸಂಸ್ಥೆ ಕೂಡಾ ಹೊಸ ಹೊಸ ಯೋಜನೆಗಳನ್ನು ಹೊರ ತರುತ್ತಿದೆ. ಜಿಯೋ ಹಾಗೂ ಏರ್ ಟೆಲ್ ಗೆ ಪೈಪೋಟಿ ನೀಡಲು ಹೊಸ ಪ್ರೀಪೇಯ್ಡ್ ಯೋಜನೆಯನ್ನು ಹೊರ ತಂದಿದೆ.

9 ರೂಪಾಯಿಯ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 100 ಎಸ್ಎಂಎಸ್ ಜೊತೆ 100 ಎಂಬಿ ಡೇಟಾ(ಮಧ್ಯರಾತ್ರಿ 12ರ ತನಕ) ಸಿಗಲಿದೆ. ಈ ರೀತಿಯ ಅಗ್ಗದ ದರದ ಯೋಜನೆಯನ್ನು ಗ್ರಾಮೀಣ ಮಟ್ಟದಲ್ಲಿ ಜನಪ್ರಿಯಗೊಳಿಸಲು ವೋಡಾಫೋನ್ ಮುಂದಾಗಿದೆ.

ಮುಂಗಾರು ಆಫರ್ : ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ಹಬ್ಬ!ಮುಂಗಾರು ಆಫರ್ : ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ಹಬ್ಬ!

ಗ್ರಾಹಕರಿಗೆ ಅನಿಯಮಿತ ವಾಯ್ಸ್ ಕಾಲ್, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳನ್ನು ಮಾಡಬಹುದಾಗಿದೆ. ಸದ್ಯಕ್ಕೆ ಈ ಸೌಲಭ್ಯವು ಉತ್ತರ ಪ್ರದೇಶದ ಗ್ರಾಹಕರಿಗೆ ಮಾತ್ರ ಲಭ್ಯವಿದೆ.

Vodafone Rs.9 Prepaid Recharge Pack Takes On Jio

ಮಿಕ್ಕಂತೆ ವೋಡಾಫೋನ್ ನಲ್ಲಿ 21 ರು ನಿಂದ 458 ರ ತನಕ ಅಗತ್ಯಕ್ಕೆ ತಕ್ಕಂತೆ ಪ್ರೀಪೇಯ್ಡ್ ಯೋಜನೆಗಳಿವೆ. ಶೇ 74ರಷ್ಟು ಗ್ರಾಹಕರು ಗ್ರಾಮೀಣ ಭಾಗದಲ್ಲಿದ್ದಾರೆ ಹೀಗಾಗಿ ಈ ರೀತಿ ಯೋಜನೆ ಹೊರ ತರಲಾಗಿದೆ, ಈ ಯೋಜನೆ ಸಫಲಗೊಂಡರೆ, ಭಾರತದೆಲ್ಲೆಡೆ ಇದನ್ನು ವಿಸ್ತರಿಸಲಾಗುವುದು ಎಂದು ವೋಡಾಫೋನ್ ವ್ಯವಹಾರಿಕ ಮುಖ್ಯಸ್ಥ(ಉತ್ತರ ಪ್ರದೇಶ) ನಿಪುಣ್ ಶರ್ಮ ಹೇಳಿದ್ದಾರೆ.

English summary
Vodafone recently launched Rs 9 prepaid recharge plan, which enables users to make an unlimited number of phone calls during the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X