• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೊಡಾಫೋನ್ ಐಡಿಯಾ ಹೊಸ ಲೋಗೊ ಅನಾವರಣ: Vi ಎಂಬ ಹೆಸರು

|

ನವದೆಹಲಿ, ಸೆಪ್ಟೆಂಬರ್ 07: ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್-ಐಡಿಯಾ ಸಂಯೋಜನೆಗೊಂಡು ಎರಡು ವರ್ಷಗಳ ಬಳಿಕ ಹೊಸ ಲೋಗೊವೊಂದನ್ನ ಲಾಂಚ್ ಮಾಡಿದ್ದು, ಅದಕ್ಕೆ 'Vi' ಎಂದು ನಾಮಕರಣ ಮಾಡಲಾಗಿದೆ.

ವೊಡಾಫೋನ್ ಐಡಿಯಾ ಸೋಮವಾರ ತನ್ನ ಎಲ್ಲಾ ಉತ್ಪನ್ನಗಳನ್ನು ಹೊಸ ಹೆಸರುಲೋಗೋ "ವಿ" ಅಡಿಯಲ್ಲಿ ಮರುಹೆಸರಿಸುವ ಮೂಲಕ ತನ್ನ ಹೊಸ ಏಕೀಕೃತ ಬ್ರಾಂಡ್ ಗುರುತನ್ನು ಪ್ರಕಟಿಸಿದೆ.

ಶೇ. 20 ಕ್ಕಿಂತ ಹೆಚ್ಚು ಜಿಗಿತ ಕಂಡ ವೊಡಾಫೋನ್ ಐಡಿಯಾ ಷೇರು

''ವಿಲೀನ ಎರಡು ವರ್ಷಗಳ ಹಿಂದೆ ನಡೆದಿತ್ತು. ಅಂದಿನಿಂದ ನಾವು ನಮ್ಮ ತಂಡ ಮತ್ತು ಪ್ರಕ್ರಿಯೆಯ ಎರಡು ದೊಡ್ಡ ನೆಟ್‌ವರ್ಕ್‌ಗಳನ್ನು ಸಂಯೋಜಿಸುವ ಕೆಲಸ ಮಾಡುತ್ತಿದ್ದೇವೆ. ಇಂದು ನಾವು Vi ಬ್ರಾಂಡ್ ಅನ್ನು ಪರಿಚಯಿಸಲು ತುಂಬಾ ಸಂತೋಷವಾಗಿದೆ. ಭಾರತೀಯರು ಆಶಾವಾದಿಗಳು ಮತ್ತು ಜೀವನದಲ್ಲಿ ಮುಂದೆ ಬರಲು ಬಯಸುತ್ತಾರೆ ಎಂದು ವೊಡಾಫೋನ್ ಐಡಿಯಾ ಎಂಡಿ ಮತ್ತು ಸಿಇಒ ರವೀಂದರ್ ತಕ್ಕರ್ ಹೊಸ ಬ್ರಾಂಡ್ ಅನ್ನು ಬಿಡುಗಡೆ ಮಾಡುವ ವೇಳೆ ತಿಳಿಸಿದರು.

ಇದೇ ವೇಳೆ ಸುಂಕವನ್ನು ಹೆಚ್ಚಿಸಲು ಕಂಪನಿ ಸಿದ್ಧವಾಗಿದೆ ಎಂದು ರವೀಂದರ್ ಹೇಳಿದ್ದಾರೆ. ಹೊಸ ಸುಂಕವು ಕಂಪನಿಯು ARPU ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಪ್ರಸ್ತುತ 114 ರೂ., ಏರ್‌ಟೆಲ್ ಮತ್ತು ಜಿಯೋನ ARPU ಕ್ರಮವಾಗಿ 157 ಮತ್ತು 140 ರೂ. ಇದೇ ಎಂಬುದು ಗಮನಾರ್ಹವಾಗಿದೆ.

ನೆಟ್‌ವರ್ಕ್ ಅನುಭವ, ಗ್ರಾಮೀಣ ಸಂಪರ್ಕ, ಗ್ರಾಹಕ ಸೇವೆ ಮತ್ತು ಎಂಟರ್‌ಪ್ರೈಸ್ ಮೊಬಿಲಿಟಿ ಪರಿಹಾರಗಳಲ್ಲಿ ವೊಡಾಫೋನ್ ಮತ್ತು ಐಡಿಯಾ ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ ಎಂದು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದರು.

ಇನ್ನು ಉದ್ದೇಶಿತ ನಿಧಿಸಂಗ್ರಹವು ನಿಯಂತ್ರಕ ಮತ್ತು ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ. ಸೆಪ್ಟೆಂಬರ್ 30 ರಂದು ನಡೆಯುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವೊಡಾಫೋನ್ ಐಡಿಯಾ ಈ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳಲಿದೆ.

English summary
Vodafone Idea on Monday announced its new unified brand identity by renaming all its products under a new name and logo “Vi”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X