ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯ ನೆಚ್ಚಿನ ಆಸ್ತಿ ಕೊನೆಗೂ ಮಾರಾಟ, ಕಿಂಗ್ ಫಿಷರ್ ಹೌಸ್ ಸೋಲ್ಡ್

|
Google Oneindia Kannada News

ಮುಂಬೈ, ಆಗಸ್ಟ್ 16: ಉದ್ದೇಶಪೂರ್ವಕ ಸುಸ್ತಿದಾರ, ದೇಶ ಭ್ರಷ್ಟ ಎನಿಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ನೆಚ್ಚಿನ ಬಂಗಲೆ ಕೊನೆಗೂ ಮಾರಾಟವಾಗಿದೆ. ಐದಾರು ವರ್ಷಗಳಿಂದ ಹಲವು ಬಾರಿ ಹರಾಜು ಮಾಡಲು ಯತ್ನಿಸಿದರೂ ಯಾರೊಬ್ಬರೂ ಖರೀದಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕೊನೆಗೂ ಮುಂಬೈನ ಐಷಾರಾಮಿ ಬಡಾವಣೆಯಲ್ಲಿರುವ ಕಿಂಗ್ ಫಿಷರ್ ಹೌಸ್ ಹರಾಜಾಗಿದೆ.

ಸಾಲ ವಸೂಲಾತಿ ನ್ಯಾಯಾಧಿಕರಣ (DRT) ನಡೆಸಿಕೊಟ್ಟ ಹರಾಜಿನಲ್ಲಿ ಪಾಲ್ಗೊಂಡಿದ್ದ ಹೈದರಾಬಾದ್ ಮೂಲದ ಸ್ಯಾಟ್ರನ್ ರಿಯಲ್ಟರ್ಸ್ ಸಂಸ್ಥೆ ಈ ಬಂಗಲೆಯನ್ನು 52.25 ಕೋಟಿ ರು ಗೆ ಖರೀದಿಸಿದೆ. ದಿವಾಳಿಯಾಗಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಕೇಂದ್ರ ಕಚೇರಿಯನ್ನು ಇದೇ ಕಿಂಗ್ ಫಿಷರ್ ಹೌಸ್ ಹೊಂದಿತ್ತು. ಸುಸ್ತಿದಾರನಾಗಿ ದೇಶಭ್ರಷ್ಟ ಎನಿಸಿಕೊಂಡಿರುವ ಮಲ್ಯ ಅವರ ಆಸ್ತಿ ಹರಾಜಿಗೆ ಕೋರ್ಟ್ ಅನುಮತಿ ಸಿಕ್ಕ ಬಳಿಕ ಸರಿ ಸುಮಾರು 9 ಬಾರಿ ಈ ಹೌಸ್ ಹರಾಜಿಗೆ ಬಂದಿತ್ತು. ಆದರೆ, ಮಾರಾಟವಾಗಿರಲಿಲ್ಲ. ರಿಸರ್ವ್ಡ್ ಬೆಲೆ 135 ಕೋಟಿ ರು ಗಿಂತ ಕಡಿಮೆ ಬೆಲೆಗೆ 52.25 ಕೋಟಿ ರುಗೆ ಮಾರಾಟವಾಗಿದೆ.

ಹರಾಜಿನಿಂದ ಬಂದ ಮೊತ್ತವನ್ನು ಸಾಲ ಕೊಟ್ಟ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಲಾಗುತ್ತದೆ. ಸೋಮವಾರದಂದು ಸದ್ಯ ಯುಕೆಯಲ್ಲಿರುವ ಮಲ್ಯರನ್ನು ದಿವಾಳಿ ಎಂದು ಅಲ್ಲಿನ ನ್ಯಾಯಾಲಯ ಘೋಷಿಸಿದ್ದನ್ನು ಸ್ಮರಿಸಬಹುದು.

ಇದಕ್ಕೂ ಮುನ್ನ ಸಾಲ ವಸೂಲಿಗೆ ಬಂದ ನ್ಯಾಯಾಧಿಕರಣವು ಮಲ್ಯಗೆ ಸೇರಿದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಸಂಸ್ಥೆಯ 5,800 ಕೋಟಿ ರು ಮೌಲ್ಯ ಷೇರುಗಳನ್ನು ಮಾರಾಟ ಮಾಡಿತ್ತು.

Vijay Mallyas Kingfisher House sold for just Rs 52 crore in 9th attempt

ಅನೇಕ ವರ್ಷಗಳ ಹಿಂದೆಯೇ ವಶಕ್ಕೆ

ಅನೇಕ ವರ್ಷಗಳ ಹಿಂದೆಯೇ ವಶಕ್ಕೆ

ಮುಂಬೈನ ಸಾಂತಾಕ್ರೂಜ್ ಏರ್​ಪೋರ್ಟ್​ನಲ್ಲಿರುವ 17 ಸಾವಿರ ಚದರ ಅಡಿಯ ಕಿಂಗ್​ಫಿಷರ್ ಹೌಸ್ ಕಟ್ಟಡವನ್ನು ಬ್ಯಾಂಕ್​ಗಳು ಅನೇಕ ವರ್ಷಗಳ ಹಿಂದೆಯೇ ವಶಕ್ಕೆ ಪಡೆದಿದ್ದವು. ಅಂದಿಗೆ ಕಟ್ಟಡದ ಮೌಲ್ಯ 150 ಕೋಟಿ ರು ಎಂದು ಅಂದಾಜಿಸಲಾಗಿತ್ತು. ಇದಲ್ಲದೆ ಗೋವಾದಲ್ಲಿರುವ 90 ಕೋಟಿ ರು ಮೌಲ್ಯದ ವಿಲ್ಲಾ ಕೂಡಾ ಬ್ಯಾಂಕ್ ಪಾಲಾಗಿತ್ತು. ಜೊತೆಗೆ ಕಿಂಗ್ ಫಿಷರ್ ಏರ್​ಲೈನ್ಸ್​ಗೆ ಸೇರಿದ ಟೆಂಪೊ, ಟ್ರ್ಯಾಕ್ಟರ್, ಕಾರುಗಳು, ಎಸ್​ಯುುವಿ, ಏರ್​ಕ್ರಾಫ್ಟ್ ಪುಲ್ಲರ್ಸ್, ಲಗೇಜ್ ಟ್ರಾಲಿ ಮತ್ತಿತರ ಚರ ಆಸ್ತಿಗಳನ್ನುಇ ಹರಾಜು ಹಾಕಲಾಗಿತ್ತು. ಹರಾಜಿನ ಆರಂಭಿಕ ಮೊತ್ತವನ್ನು ಕನಿಷ್ಠ 65 ಲಕ್ಷ ರೂ.ಗೆ ನಿಗದಿಪಡಿಸಲಾಗಿತ್ತು. ಮಲ್ಯಗೆ ನೀಡಲಾಗಿರುವ ಸಾಲದ ಮೊತ್ತದ ಮೇಲಿನ ಚಕ್ರ ಬಡ್ಡಿ 15.5 ರಷ್ಟಿದ್ದು, ಮಲ್ಯ ಅವರು ಬಡ್ಡಿ ಸಮೇತ ಸಾಲ ತೀರಿಸುವುದಾಗಿ ಅನೇಕ ಬಾರಿ ಘೋಷಿಸಿದ್ದನ್ನು ಸ್ಮರಿಸಬಹುದು.

ಸಮಸ್ತ ಆಸ್ತಿಯನ್ನು ಮುಟ್ಟುಗೋಲು

ಸಮಸ್ತ ಆಸ್ತಿಯನ್ನು ಮುಟ್ಟುಗೋಲು

ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಗಳನ್ನು ಸಾಲದ ರೂಪದಲ್ಲಿ ಪಡೆದು, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಬಳಿಕ ತನಿಖಾ ಸಂಸ್ಥೆಗಳು ಮಲ್ಯಗೆ ಸೇರಿದ ಆಸ್ತಿ ಜಪ್ತಿ ಕಾರ್ಯವನ್ನು ಮುಂದುವರೆಸಿವೆ. PMLA ಪ್ರಕಾರ ದೇಶಭ್ರಷ್ಠ ಆರ್ಥಿಕ ಅಪರಾಧಿ ಎಂದು ಘೋಷಣೆಯಾದರೆ, ಮಲ್ಯ ಅವರ ಸಮಸ್ತ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅನುಕೂಲವಾಗಲಿದೆ.

MLAT ಎಂಬ ಒಪ್ಪಂದ

MLAT ಎಂಬ ಒಪ್ಪಂದ

MLAT ಎಂಬ ಒಪ್ಪಂದ A mutual legal assistance treaty (MLAT) ಎಂದು ಕರೆಯುವ ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಂಡ್ 1995ರಲ್ಲಿ ಸಹಿ ಮಾಡಿವೆ. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತರ ಮಾಡಿಕೊಳ್ಳಲು ಅವಕಾಶ ಇದೆ. ಇಲ್ಲಿ ತನಕ ಈ ಒಪ್ಪಂದ ಬಳಸಿಕೊಂಡು ಒಬ್ಬರನ್ನು ಮಾತ್ರ ಇಂಗ್ಲೆಂಡಿನಿಂದ ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ವಿನುಭಾಯಿ ಪಟೇಲ್ ಅವರು ಗಡಿಪಾರು ಮಾಡಿದರೂ ನನ್ನ ಅಭ್ಯಂತರವಿಲ್ಲ ಎಂದಿದ್ದರಿಂದ ಕೆಲಸ ಸುಲಭವಾಗಿತ್ತು. ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರಲು ಇಲ್ಲಿನ ತನಿಖಾ ಸಂಸ್ಥೆಗಳಿಗೆ ಕನಿಷ್ಟ 10 ರಿಂದ 15 ವರ್ಷಗಳಾದರೂ ಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕಾನೂನಿನಲ್ಲಿ ಬದಲಾವಣೆ ತರಲಾಗಿದ್ದು, ಮಲ್ಯ ಭಾರತಕ್ಕೆ ಬರುವ ಕಾಲ ಸನ್ನಿಹಿತ ಎಂಬ ಸುದ್ದಿಯೂ ಇದೆ.

Recommended Video

ಬಾಲ್ಯದಲ್ಲಿ ಗನ್ ಜೊತೆ ಆಟ, ಈಗ ತಾಲಿಬಾನ್ ಉಗ್ರರ ಮಕ್ಕಳಾಟ ನೋಡಿ | Oneindia Kannada
ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ

ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ

ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟೇಟ್ ಕೋರ್ಟ್ ಆದೇಶಿಸಿತ್ತು.ಎಸ್ ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟದ ಮಾಡಿಕೊಂಡಿರುವ ಮನವಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಲಂಡನ್ ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿದೆ. ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿ ಹಿನ್ನೆಲೆ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮವಾಗಲಿದೆ.

English summary
Fugitive businessman Vijay Mallya's Kingfisher House, located in Mumbai's posh Vile Parle, has been sold to the Hyderabad-based Saturn Realtors for Rs 52.25 crore by the Debt Recovery Tribunal (DRT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X