ಇಂದೂ ವಿಜಯ್ ಮಲ್ಯ ಬರಲಿಲ್ಲ, ಮುಂದೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 09 : ಉದ್ಯಮಿ ವಿಜಯ್ ಮಲ್ಯ ಅವರು ಇಂದೂ ಸಹ ವಿಚಾರಣೆಗೆ ಹಾಜರಾಗಿಲ್ಲ. ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಲು ಅವರು ಮೇ ತಿಂಗಳ ತನಕ ಕಾಲಾವಕಾಶ ಕೋರಿದ್ದಾರೆ.

ವಿಜಯ್ ಮಲ್ಯ ವಿರುದ್ಧ ಬ್ಯಾಂಕ್‌ಗಳಿಂದ ಸಾಲ ಪಡೆದು ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪವಿದೆ. ಜಾರಿ ನಿರ್ದೇಶನಾಲಯ ಈ ಆರೋಪದ ತನಿಖೆ ನಡೆಸುತ್ತಿದೆ. ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಮೂರು ಬಾರಿ ಸಮನ್ಸ್ ನೀಡಲಾಗಿದೆ. ಆದರೆ, ಮಲ್ಯ ಖುದ್ದಾಗಿ ಹಾಜರಾಗಿಲ್ಲ. [ಸಾಲ ಮರುಪಾವತಿಗೆ ವಿಜಯ್ ಮಲ್ಯ ಬಗ್ಗಿದ್ದು ಹೇಗೆ?]

vijay mallya

ಏ.9ರ ಶನಿವಾರ ಖುದ್ದಾಗಿ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ, ಸಮನ್ಸ್‌ಗೆ ಉತ್ತರ ನೀಡಿರುವ ಮಲ್ಯ ಅವರು ಮೇ ತಿಂಗಳ ತನಕ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. [ಮಲ್ಯ ಆಸ್ತಿ ಘೋಷಣೆ ಮಾಡಲು ಸುಪ್ರೀಂ ಆದೇಶ]

ವಿಜಯ್ ಮಲ್ಯ ಅವರು ಲಂಡನ್‌ನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಹಲವು ಬಾರಿ ಸಮನ್ಸ್‌ ಜಾರಿ ಮಾಡಿದೆ. ಏಪ್ರಿಲ್‌ 9ರ ಸಮನ್ಸ್‌ ಬಹುತೇಕ ಮಲ್ಯ ಅವರ ವಿಚಾರಣೆಗೆ ನೀಡುತ್ತಿರುವ ಕೊನೆಯ ಗಡುವು ಎನ್ನಲಾಗಿತ್ತು. ಈ ಗಡುವನ್ನೂ ಅವರು ಮೀರಿದ್ದಾರೆ.

ಬ್ಯಾಂಕುಗಳ ತಿರಸ್ಕಾರ : 9000 ಕೋಟಿ ರೂ.ಗಳ ಸಾಲದಲ್ಲಿ 4 ಸಾವಿರ ಕೋಟಿ ಸಾಲವನ್ನು ಈಗ ಮರುಪಾವತಿ ಮಾಡುವೆ ಎಂದು ವಕೀಲರ ಮೂಲಕ ಮಲ್ಯ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬ್ಯಾಂಕ್‌ಗಳು ಏ.4ರಂದು ತಿರಸ್ಕರಿಸಿದ್ದವು.

ವಿಜಯ್ ಮಲ್ಯ ಅವರು ಏ.21ರೊಳಗೆ ತಮ್ಮ, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿರುವ ಆಸ್ತಿಯನ್ನು ಘೋಷಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vijay Mallya former chairman of the UB group has yet again failed to appear before the Enforcement Directorate. Mallya who was to appear today before the ED has sought time till May.
Please Wait while comments are loading...