ಟಿಕ್‌ಟಾಕ್‌ನ ಮಾರಾಟದ ಬೆಲೆಯಲ್ಲಿ ಸರ್ಕಾರಕ್ಕೂ ಪಾಲು ಕೊಡಬೇಕು: ಟ್ರಂಪ್

ವಾಷಿಂಗ್ಟನ್, ಆಗಸ್ಟ್‌ 05: ಜನಪ್ರಿಯ ಕಿರು-ವಿಡಿಯೋ ಆ್ಯಪ್ ಟಿಕ್‌ಟಾಕ್‌ನ ಅಮೆರಿಕಾ ಕಾರ್ಯಾಚರಣೆಗಳ ಮಾರಾಟದ ಬೆಲೆಯಲ್ಲಿ ಅಮೆರಿಕಾ ಸರ್ಕಾರಕ್ಕೂ 'ಗಣನೀಯ ಪಾಲನ್ನು' ನೀಡಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಈಗಾಗೇ ಸೆಪ್ಟೆಂಬರ್ 15ರೊಳಗೆ ಅಮೆರಿಕಾದ ಯಾವುದೇ ಕಂಪನಿಗೆ ಟಿಕ್‌ಟಾಕ್ ಮಾರಾಟವಾಗದಿದ್ದರೆ ಸೇವೆಯನ್ನು ನಿಷೇಧಿಸುವುದಾಗಿ ಟ್ರಂಪ್ ಎಚ್ಚರಿಸಿದ್ದರು. ಚೀನಾದ ಬೈಟ್‌ಡಾನ್ಸ್ ಒಡೆತನದ ಟಿಕ್‌ಟಾಕ್ ಖರೀದಿಗೆ ಮೈಕ್ರೋಸಾಫ್ಟ್‌ ಮಾತುಕತೆಯನ್ನು ನಡೆಸಿದ್ದು, ಆ ಬಳಿಕ ಟ್ರಂಪ್‌ರಿಂದ ಈ ಹೇಳಿಕೆ ಬಂದಿದೆ.

ಮೈಕ್ರೋಸಾಫ್ಟ್ ಕಂಪನಿಯ ಭಾರತೀಯ ಮೂಲದ ಸಿಇಒ ಸತ್ಯ ನಾಡೆಲ್ಲಾ ಅವರೊಂದಿಗೆ ಫೋನ್ ಸಂಭಾಷಣೆ ಮೂಲಕ ನಡೆಸಿದ ಟ್ರಂಪ್ 'ನ್ಯಾಯಯುತ ಪಾಲು' ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಬಿಬಿಸಿ ವರದಿಯಲ್ಲಿ ತಿಳಿಸಲಾಗಿದೆ.

US Should Get Substantial Portion Of TikToks Sale Price: Donald Trump

ತಂತ್ರಜ್ಞಾನದ ಪ್ರಮುಖ ಮೈಕ್ರೋಸಾಫ್ಟ್ ಗೆ ಟಿಕ್ ಟಾಕ್ ಕೊಂಡುಕೊಳ್ಳುವ ವ್ಯವಹಾರವನ್ನು 45 ದಿನಗಳ ಮುಗಿಸುವಂತೆ ತಿಳಿಸಲಾಗಿದ್ದು, ಈ ವೇಳೆ ಖರೀದಿಸಲು ಸಾಧ್ಯವಾಗದೇ ಇದ್ದರೆ ಚೀನಾದಲ್ಲಿ ಆ್ಯಪ್ ಅನ್ನು ಅಮೆರಿಕದಲ್ಲಿ ನಿಷೇಧಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.

ರಾಯಿಟರ್ಸ್‌ ವರದಿ ಪ್ರಕಾರ ಕೆಲವು ಹೂಡಿಕೆದಾರರು ಟಿಕ್‌ಟಾಕ್ ಅನ್ನು ಸುಮಾರು 50 ಶತಕೋಟಿ ಡಾಲರ್‌ ಮೌಲ್ಯದಲ್ಲಿರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+