UPI Charges: ₹2,000 ಮೇಲ್ಪಟ್ಟ ಯುಪಿಐ ಪಾವತಿಗೆ ಶುಲ್ಕ: ಕೇಂದ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

UPI Charges: ದೇಶದಲ್ಲಿ ವ್ಯಾಪಾರಿಗಳಿಗೆ ಮಾಡಲಾಗುವ 2,000 ರೂಪಾಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರವು ಹೊಸದಾಗಿ ನಿರ್ದಿಷ್ಟ ಶುಲ್ಕ ವಿಧಿಸಲು ಮುಂದಾಗಿದೆ. ಕಳೆದ ಆರು ವರ್ಷಗಳಿಂದ ಉಚಿತವಾಗಿ ಲಭ್ಯವಿದ್ದ ಈ ಸೇವೆಗೆ ಅಕ್ಟೋಬರ್ 15ರಿಂದ ಶುಲ್ಕ ವಿಧಿಸಲು ನಿರ್ಧರಿಸಿದ್ದು, ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅಡ್ವೊಕೇಟ್ ಅಂಜನ್ ದತ್ತಾ ಅವರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಪೀಠವು ಸೋಮವಾರ (ಸೆಪ್ಟೆಂಬರ್ 28) ನಡೆಸಲಿದೆ.

UPI Charges 0 4 MDR on Payments Above Rs 2 000 From October 15 2026 Plea in Supreme Court

ಕೇಂದ್ರ ಸರ್ಕಾರದ ಹೊಸ ನಿಯಮಗಳು

* 2,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ವ್ಯಾಪಾರಿಗಳಿಗೆ ಯುಪಿಐ ಮೂಲಕ ಪಾವತಿಸಿದಾಗ ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗುತ್ತದೆ. ಆದರೆ ದೊಡ್ಡ ಮಟ್ಟದ ಪಾವತಿಗಳಿಗೆ (₹75,000 ಮತ್ತು ಅದಕ್ಕಿಂತ ಹೆಚ್ಚು) ಗರಿಷ್ಠ ಶುಲ್ಕದ ಮಿತಿಯನ್ನು ₹300ಕ್ಕೆ ನಿಗದಿಪಡಿಸಲಾಗಿದೆ.

* ಸಾಮಾನ್ಯ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ (Person to Person) ನಡೆಯುವ ದಿನನಿತ್ಯದ ಹಣದ ವರ್ಗಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ. ಎಷ್ಟು ಮೊತ್ತ ರವಾನಿಸಿದರೂ ಇದು ಸಂಪೂರ್ಣ ಉಚಿತವಾಗಿರುತ್ತದೆ.

* ರೈಲ್ವೇ, ಟೆಲಿಕಾಂ, ಇನ್ಶೂರೆನ್ಸ್, ಪೆಟ್ರೋಲ್-ಡೀಸೆಲ್ ಹಾಗೂ ಕೃಷಿ ವಲಯದಂತಹ ಕಡಿಮೆ ಲಾಭಾಂಶವಿರುವ ಕ್ಷೇತ್ರಗಳಲ್ಲಿ ₹2,000 ಮೇಲ್ಪಟ್ಟ ವಹಿವಾಟಿಗೆ ₹5 ರೂಪಾಯಿನಷ್ಟು ಫ್ಲಾಟ್ ಶುಲ್ಕ ಇರಲಿದೆ.

* ಮ್ಯೂಚುವಲ್ ಫಂಡ್, ಸೆಕ್ಯುರಿಟೀಸ್ ಮತ್ತು ಸ್ಟಾಕ್ ಬ್ರೋಕರ್‌ಗಳಿಗೆ ಮಾಡುವ ಪಾವತಿಗೆ ಶೇಕಡಾ 0.02 ರಷ್ಟು ಶುಲ್ಕ ಅನ್ವಯಿಸಲಿದ್ದು, ಗರಿಷ್ಠ ಮಿತಿ 300 ರೂಪಾಯಿ ಆಗಿರಲಿದೆ.

ಅರ್ಜಿದಾರರ ಪ್ರಮುಖ ಆಕ್ಷೇಪಗಳು

ಸೆಪ್ಟೆಂಬರ್ 14 ಮತ್ತು 15 ರಂದು ಸರ್ಕಾರ ಹೊರಡಿಸಿದ ಈ ಹೊಸ ನಿಯಮಗಳಿಗೆ ಅರ್ಜಿಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ. ಯಾವುದೇ ಸಾರ್ವಜನಿಕ ಸಮಾಲೋಚನೆ ನಡೆಸದೆ, ಪಾರದರ್ಶಕತೆ ಕಾಯ್ದುಕೊಳ್ಳದೆ ಕೇವಲ ಪತ್ರಿಕಾ ಪ್ರಕಟಣೆ ಅಥವಾ ಎಫ್‌ಎಕ್ಯೂ ಆಧಾರದ ಮೇಲೆ ಶುಲ್ಕ ವಿಧಿಸುವುದು ಕಾನೂನುಬಾಹಿರ ಎಂಬುದು ಅರ್ಜಿದಾರರ ವಾದವಾಗಿದೆ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007ರ ತಿದ್ದುಪಡಿ ಮಾಡಿದ ವಿಭಾಗ 10A ರ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಅಷ್ಟೇ ಅಲ್ಲದೆ ಇದರ ಜೊತೆಗೆ ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೆ ಯಾವುದೇ ಮಿತಿ ಇಲ್ಲದೆ ಉಚಿತ ಸೇವೆ ಮುಂದುವರಿಸಲಾಗಿದ್ದು, ಯುಪಿಐಗೆ ಮಾತ್ರ ಶುಲ್ಕ ವಿಧಿಸುತ್ತಿರುವುದು ತಾರತಮ್ಯದಿಂದ ಕೂಡಿದೆ ಎಂದು ಅರ್ಜಿದಾರರ ವಾದವಾಗಿದೆ.

ಸಣ್ಣ ವ್ಯಾಪಾರಿಗಳಿಗೆ ಆತಂಕ

ಈ ಹೊಸ ಶುಲ್ಕ ನಿಯಮವು ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳ ಮೇಲೆ ಭಾರಿ ಹೊಡೆತ ನೀಡಲಿದೆ. ಅತ್ಯಂತ ಕಡಿಮೆ ಲಾಭಾಂಶದಲ್ಲಿ ವ್ಯಾಪಾರ ನಡೆಸುವ ಸಣ್ಣ ಉದ್ಯಮಿಗಳಿಗೆ ಈ ಶುಲ್ಕ ಭರಿಸುವುದು ಕಷ್ಟಕರವಾಗಲಿದ್ದು, ಕೊನೆಯಲ್ಲಿ ಈ ಹಣಕಾಸಿನ ಹೊರೆ ಪರೋಕ್ಷವಾಗಿ ಗ್ರಾಹಕರ ಮೇಲೆಯೇ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಈ ಶುಲ್ಕ ಪದ್ಧತಿಯನ್ನು ತಕ್ಷಣವೇ ತಡೆಹಿಡಿಯಬೇಕು ಅಥವಾ ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಸೂಕ್ತ ದತ್ತಾಂಶ, ವ್ಯಾಪಾರಿಗಳ ವಹಿವಾಟು ಸಾಮರ್ಥ್ಯ ಮತ್ತು ಸಣ್ಣ ಉದ್ಯಮಗಳ ಪರಿಸ್ಥಿತಿಯನ್ನು ಆಧರಿಸಿ ಮರುಸಮೀಕ್ಷೆ ನಡೆಸಿದ ನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಬೇಕೆಂದು ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಅನ್ನು ಪ್ರತಿವಾದಿಗಳನ್ನಾಗಿ ಮಾಡಿ ಅರ್ಜಿಯಲ್ಲಿ ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+