ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕಕ್ಕೆ ಇನ್ನು ಆಧಾರ್ ಬೇಕಿಲ್ಲ

ನವದೆಹಲಿ, ಡಿಸೆಂಬರ್ 17: ನಿಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಸಂಪರ್ಕ ಮಾಡಲೇಬೇಕಾಗಿಲ್ಲ. ಮೊಬೈಲ್ ಸಿಮ್ ಕಾರ್ಡ್ ಸಂಪರ್ಕ ಪಡೆದುಕೊಳ್ಳಲು ಸಹ ಆಧಾರ್ ಕಡ್ಡಾಯವಲ್ಲ.

ಸುಪ್ರೀಂಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ನಿಯಮಾವಳಿಗಳಲ್ಲಿ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಈ ಹೊರೆಗಳಿಂದ ಜನರನ್ನು ಮುಕ್ತಗೊಳಿಸಿದೆ.

ಕೇಂದ್ರ ಸಂಪುಟವು ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಸಂಪರ್ಕಕ್ಕೆ ಅಗತ್ಯವಾಗಿದ್ದ ಆಧಾರ್ ಜೋಡಣೆಯ ನಿಯಮವನ್ನು ಸೋಮವಾರ ತೆಗೆದುಹಾಕಿದೆ.

union cabinet aadhar link to bank accounts mobile phones supreme court

ಈ ಸೇವೆಗಳನ್ನು ಪಡೆದುಕೊಳ್ಳಲು ಇದ್ದ ಆಧಾರ್ ಸಂಖ್ಯೆಯನ್ನು ಡಿಲಿಂಕ್ ಮಾಡಲು ಇದ್ದ ನಿಯಮಾವಳಿಗಳ ತಡೆಯನ್ನು ತೆರವುಗೊಳಿಸಿದೆ.

ಆಧಾರ್ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸಿ ಸೆಪ್ಟೆಂಬರ್ 26ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿತ್ತು. ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಸಂಪರ್ಕಕ್ಕೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದು ಹೇಳಿತ್ತು. ಆದರೆ, ಆದಾಯ ತೆರಿಗೆ ಪಾವತಿಗೆ ಆಧಾರ್ ಕಡ್ಡಾಯವಾಗಿರುತ್ತದೆ ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+