ಭಾರತ ಸೇನೆ ಮತ್ತಷ್ಟು ಬಲಿಷ್ಠ, 5,94,585 ಕೋಟಿ ರೂಪಾಯಿಗೆ ಬಜೆಟ್ ವಿಸ್ತರಣೆ... Union Budget
ಬಲಿಷ್ಠ ಭಾರತ ಇಂದು ತನ್ನ ಮತ್ತೊಂದು ಬೃಹತ್ ಬಜೆಟ್ ಮಂಡನೆ ಮಾಡಿದ್ದು, ಈ ಮೂಲಕ ಜಗತ್ತಿಗೇ ತನ್ನ ಶಕ್ತಿ ಏನು ಎಂಬುದನ್ನು ತೋರಿಸಿದೆ. ಬರೋಬ್ಬರಿ 54 ಲಕ್ಷ ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್ ಮಂಡನೆ ಆಗಿದ್ದು, ನಿರ್ಮಲಾ ಸೀತಾರಾಮನ್ ಅವರು ತಮ್ಮ 9ನೇ ಬಜೆಟ್ ಮಂಡಿಸಿ ಹೊಸ ದಾಖಲೆಯನ್ನೇ ಇದೀಗ ಸೃಷ್ಟಿ ಮಾಡಿದ್ದಾರೆ.
ಒಟ್ಟು 85 ನಿಮಿಷಗಳ ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ 1 ವರ್ಷದ ಆರ್ಥಿಕ ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಹೆಚ್ಚು ಗಮನ ಸೆಳೆದಿರುವುದು ರಕ್ಷಣಾ ಕ್ಷೇತ್ರದ ಖರ್ಚು ವೆಚ್ಚಗಳು. ಹಾಗಾದ್ರೆ ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ಎಷ್ಟು ಲಕ್ಷ ಕೋಟಿ ರೂಪಾಯಿ ಹಣ ನೀಡಲಾಗಿದೆ? ಶತ್ರುಗಳಿಂದ ದೇಶವನ್ನ ರಕ್ಷಿಸಲು ಏನೆಲ್ಲಾ ಹೊಸದು ಬರಲಿದೆ? ಬನ್ನಿ ತಿಳಿಯೋಣ.

ಸಿಂಧೂರ್ ನಂತರ ಭಾರಿ ವೆಚ್ಚ!
ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ಭೀಕರ ಕದನ ಆರಂಭ ಆಗಿತ್ತು, ಅದರಲ್ಲೂ ಆಪರೇಷನ್ ಸಿಂಧೂರ್ ನಂತರ ಪರಮಾಣು ಯುದ್ಧ ಭೀತಿ ಕೂಡ ಮೂಡಿತ್ತು. ಹೀಗಿದ್ದಾಗಲೇ ದಿಢೀರ್ ಎರಡೂ ದೇಶಗಳ ನಡುವೆ ಚರ್ಚೆ ನಂತರ ಕದನ ನಿಂತಿತ್ತು. ಆದರೆ ಇದೀಗ ಭಾರತದ ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದೇ ಕಾರಣಕ್ಕಾಗಿ ಡಿಫೆನ್ಸ್ ಬಜೆಟ್ ಎಂದರೆ ರಕ್ಷಣಾ ಕ್ಷೇತ್ರದ ಬಜೆಟ್ ಗಾತ್ರವನ್ನು ಈಗ ಬರೋಬ್ಬರಿ 5,94,585 ಕೋಟಿ ರೂಪಾಯಿಗೆ ಏರಿಸಲಾಗಿದೆ. ಈ ಮೂಲಕ ಭಾರತದ ಶತ್ರು ದೇಶಗಳಿಗೆ ಒಂದು ಖಡಕ್ ಸಂದೇಶ ಅದರಲ್ಲೂ ಪಾಪಿ ಪಾಕಿಸ್ತಾನಕ್ಕೆ ಭರ್ಜರಿ ವಾರ್ನಿಂಗ್ ಹೋಗಿದೆ. ಭಾರತೀಯ ಸೇನೆಗೆ ಇಷ್ಟು ದೊಡ್ಡ ಮಟ್ಟದ ಬಜೆಟ್ ಸಿಕ್ಕಿರುವುದು ದೇಶ ರಕ್ಷಣೆ ವಿಚಾರದಲ್ಲಿ ಇನ್ನಷ್ಟು ಬಲ ತುಂಬಲಿದೆ.
'ಆಕಾಶತೀರ್' ವಾಯು ರಕ್ಷಣಾ ವ್ಯವಸ್ಥೆ
ಅದು 2025 ಏಪ್ರಿಲ್ ತಿಂಗಳು, ಆಗ ಪಹಲ್ಗಾಮ್ ಭಾಗದಲ್ಲಿ ಪಾಪಿ ಪಾಕಿಸ್ತಾನ ಕಡೆಯಿಂದ ಬಂದ ಉಗ್ರರು ರಕ್ತದ ಕೋಡಿ ಹರಿಸಿದ್ದರು. ಈ ಘಟನೆ ನಂತರ ಭಾರತ ಆಪರೇಷನ್ ಸಿಂಧೂರ್ ಮೂಲಕ ಉಗ್ರರ ಹುಟ್ಟಡಗಿಸಿ ಧೂಳ್, ಧೂಳ್ ಮಾಡಿತ್ತು. ಈ ಯುದ್ಧದ ನಂತರ ಮಂಡನೆ ಆಗುತ್ತಿರುವ ಮೊದಲ ಬಜೆಟ್ ಇದಾಗಿದ್ದು, 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕಾಗಿಯೇ 5,94,585 ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ಈ ಹಣದಲ್ಲಿ ಪ್ರಮುಖವಾಗಿ ಎಐ-ಆಧಾರಿತ 'ಆಕಾಶತೀರ್' ವಾಯು ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ. ಎದುರಾಳಿ ದೇಶಗಳಿಗೆ ಈ ಮೂಲಕ ಭರ್ಜರಿ ವಾರ್ನಿಂಗ್ ಕೊಡುವ ಉದ್ದೇಶ ಕೂಡ ಇದರಲ್ಲಿದೆ.
1.12 ಲಕ್ಷ ಕೋಟಿ ರೂಪಾಯಿ ದೇಶದಲ್ಲೇ ವೆಚ್ಚ
ಇದೀಗ ಎಐ-ಆಧಾರಿತ 'ಆಕಾಶತೀರ್' ವಾಯು ರಕ್ಷಣಾ ವ್ಯವಸ್ಥೆಯ ಒಟ್ಟು 107 ಯುನಿಟ್‌ಗಳು ಇದ್ದು, ಅದನ್ನು ಬರೋಬ್ಬರಿ 500ಕ್ಕೆ ಏರಿಸುವ ಗುರಿಯನ್ನು ಭಾರತ ಹೊಂದಿದೆ. ಇದರ ಜೊತೆ ಮತ್ತೊಂದು ಪ್ರಮುಖ ವಿಚಾರ ಏನೆಂದರೆ, ಹೊಸ ಯುದ್ಧವಿಮಾನ ಹಾಗೂ ಜಲಾಂತರ್ಗಾಮಿಗಳ ಎಂಟ್ರಿ ಕೂಡ ಆಗಲಿದೆ. ಹಾಗೇ ಡ್ರೋನ್ ಡಿಫೆನ್ಸ್ ಸಿಸ್ಟಮ್ ಅಭಿವೃದ್ಧಿಗೆ 1.80 ಲಕ್ಷ ಕೋಟಿಯ ಬೃಹತ್ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಮತ್ತೊಂದು ವಿಶೇಷತೆ ಏನೆಂದರೆ ಈ ರಕ್ಷಣಾ ಬಜೆಟ್ ಪೈಕಿ ಸುಮಾರು 1.12 ಲಕ್ಷ ಕೋಟಿ ರೂಪಾಯಿ ಹಣವನ್ನು ಭಾರತದಲ್ಲೇ ಬಳಕೆ ಮಾಡಲಾಗುತ್ತದೆ. ಹಾಗೇ ಈ ಇನ್ನುಳಿದ ಹಣದಲ್ಲಿ ಭಾರತದ ವಾಯು ರಕ್ಷಣೆಯನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದ್ದು, ರಷ್ಯಾ ಜೊತೆಗೆ ಈ ವರ್ಷವೂ ಮತ್ತಷ್ಟು ರಕ್ಷಣಾ ಒಪ್ಪಂದ ನಡೆಯುವ ನಿರೀಕ್ಷೆ ಇದೆ.












Click it and Unblock the Notifications