Union Budget 2025: ಕೇಂದ್ರ ಬಜೆಟ್‌ನಲ್ಲಿ ರಿಯಲ್ ಎಸ್ಟೇಟ್ ವಯಲದ ಪ್ರಮುಖ ನಿರೀಕ್ಷೆಗಳೇನು?
Union Budget 2025: ಕೇಂದ್ರ ಬಜೆಟ್ ಮಂಡನೆ ಸಮೀಪಿಸುತ್ತಿದ್ದು, ಈ ಹಿನ್ನೆಲೆ ದೇಶದ ಜನರ ಕಣ್ಣು ಈ ಬಜೆಟ್ ಮೇಲಿದೆ. ಅದರಲ್ಲೂ ಮಧ್ಯಮ ವರ್ಗದವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹಾಗೆಯೇ ರಿಯಲ್ ಎಸ್ಟೇಟ್ ಉದ್ಯಮ ಏನೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2025ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು, ಇದು ಅವರು ಮಂಡನೆ ಮಾಡಲಿರುವ 8ನೇ ಬಾರಿ ಬಜೆಟ್ ಆಗಲಿದೆ. ಈ ಮೂಲಕ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ಕೀರ್ತಿಗೂ ಪಾತ್ರರಾಗಲಿದ್ದಾರೆ. ಈ ಬಾರಿ ರಿಯಲ್ ಎಸ್ಟೇಟ್ ಉದ್ಯಮವು ಬಜೆಟ್ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ರಿಯಲ್ ಎಸ್ಟೇಟ್ ವಲಯದ ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಈ ಬಜೆಟ್ ಉತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2024ರ ದ್ವಿತೀಯಾರ್ಧದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಚಟುವಟಿಕೆಯಲ್ಲಿ ತುಂಬಾ ಕುಂಟಿತ ಆಗಿದೆ. ಈ ಹಿನ್ನೆಲೆ ಒಟ್ಟಾರೆ ಬಳಕೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ರಿಯಲ್ ಎಸ್ಟೇಟ್ ಉದ್ಯಮದ ವಲಯವು ನಿರೀಕ್ಷೆಯನ್ನಿಟ್ಟುಕೊಂಡಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಇನ್ನು ಮನೆ ಖರೀದಿದಾರರು ಮತ್ತು ಡೆವಲಪರ್‌ಗಳು ಎದುರಿಸುತ್ತಿರುವ ಹಣಕಾಸಿನ ಸವಾಲುಗಳನ್ನು ನಿವಾರಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಜಾರಿಗೊಳಿಸಬೇಕು. ಇದರಲ್ಲಿ ತೆರಿಗೆ ವಿನಾಯಿತಿ, ಹಣಕಾಸಿನ ಸುಲಭ ಲಭ್ಯತೆ ಮತ್ತು ಮಾರುಕಟ್ಟೆಯಲ್ಲಿ ಹಣದ ಚಲಾವಣೆಯನ್ನು ಹೆಚ್ಚಿಸಲು ಪ್ರೋತ್ಸಾಹಗಳು ಸೇರಿವೆ ಎಂದು ಕಾನ್ಸಿಯೆಂಟ್ ಇನ್‌ಫ್ರಾಸ್ಟ್ರಕ್ಚರ್‌ನ ಬ್ಯುಸಿನೆಸ್ ಹೆಡ್ ಮೋಹಿತ್ ಅಗರ್‌ವಾಲ್ ಹೇಳಿದ್ದಾರೆ ಅಂತಾ ದಿ ಎಕನಾಮಿಕ್ಸ್ ಆಫ್ ಟೈಮ್ಸ್ ವರದಿ ಮಾಡಿದೆ.
* ರಿಯಲ್ ಎಸ್ಟೇಟ್ ವಲಯಕ್ಕೆ, ಪ್ರಮುಖ ನಿರೀಕ್ಷೆಗಳಲ್ಲಿ ಉದ್ಯಮದ ಸ್ಥಾನಮಾನದ ಗುರುತಿಸುವಿಕೆ ಮತ್ತು ಕೈಗೆಟುಕುವ ವಸತಿ ವಿಭಾಗದ ಪುನರುಜ್ಜೀವನ ಸೇರಿವೆ ಎಂದು ತಜ್ಞರು ಹೇಳಿದ್ದಾರೆ. ಒಂದು ಸಮಯದಲ್ಲಿ ಭರವಸೆಯ ವಲಯ ಆಗಿದ್ದ, ₹40 ಲಕ್ಷಕ್ಕಿಂತ ಕಡಿಮೆ ಬೆಲೆಯ ಮನೆಗಳು-ಕೈಗೆಟುಕುವ ವಸತಿ -ಸಾಂಕ್ರಾಮಿಕ ರೋಗದ ನಂತರ ಸಾಕಷ್ಟು ಹೋರಾಟ ನಡೆಸುತ್ತಿದೆ.
* ಬೇಡಿಕೆ ಮತ್ತು ಪೂರೈಕೆ ಗಣನೀಯವಾಗಿ ಕುಗ್ಗುತ್ತಿದೆ. ವಸತಿ ಬೇಡಿಕೆಯನ್ನು ಹೆಚ್ಚಿಸಲು, ವಿಶೇಷವಾಗಿ ಗೃಹ ಸಾಲದ ಬಡ್ಡಿ ಮೇಲಿನ ಕಡಿತದ ಮಿತಿಯನ್ನ ಹೆಚ್ಚಿಸಲು ಮನೆ ಖರೀದಿದಾರರಿಗೆ ಉತ್ತಮ ತೆರಿಗೆ ಪ್ರಯೋಜನಗಳನ್ನ ಉದ್ಯಮವು ಬಯಸುತ್ತದೆ ಎಂದು ವೈಟ್‌ಲ್ಯಾಂಡ್ ಕಾರ್ಪೊರೇಷನ್‌ನ ತಂತ್ರ ನಿರ್ದೇಶಕ ಸುದೀಪ್ ಭಟ್ ಹೇಳಿದ್ದಾರೆ.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಿಯಲ್ ಎಸ್ಟೇಟ್ ವಲಯವು ಬೆಳವಣಿಗೆ ಮತ್ತು ಸಮರ್ಥನೀಯತೆಯನ್ನು ಹೆಚ್ಚಿಸಲು ಪರಿಣಾಮಕಾರಿ ಕ್ರಮಗಳಿಗಾಗಿ ಕಾತರದಿಂದ ಕಾಯುತ್ತಿದೆ. ವಿವಿಧ ಸ್ಥಳಗಳಲ್ಲಿ ವಸತಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಮನೆ ಖರೀದಿದಾರರಿಗೆ ತೆರಿಗೆ ವಿನಾಯಿತಿಗಳು ಮತ್ತು ವಸತಿ ವಲಯಕ್ಕೆ ಪ್ರೋತ್ಸಾಹಗಳು ನಿರ್ಣಾಯಕವಾಗಿವೆ ಎಂದು ಹೇಳಲಾಗುತ್ತಿದೆ.
* ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ ಜಿಎಸ್‌ಟಿ ದರಗಳ ತರ್ಕಬದ್ಧಗೊಳಿಸುವಿಕೆ ಮತ್ತು ಹಸಿರು ಮತ್ತು ಸುಸ್ಥಿರ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಪ್ರೋತ್ಸಾಹವನ್ನು ನಿರೀಕ್ಷಿಸಲಾಗಿದೆ. ಹೆಚ್ಚುವರಿಯಾಗಿ ಡೆವಲಪರ್‌ಗಳಿಗೆ ಹಣದ ಚಲಾವಣೆಯನ್ನು ಹೆಚ್ಚಿಸಲು, ವ್ಯಾಪಾರ ಮಾಡುವ ಸುಲಭತೆಯನ್ನು ಉತ್ತೇಜಿಸಲು ಮತ್ತು ಸಡಿಲವಾದ ಎಫ್‌ಡಿಐ ನಿಯಮಗಳ ಮೂಲಕ ಖಾಸಗಿ ಮತ್ತು ವರ್ಗಾವಣೆಗಳನ್ನ ಸಂಯೋಜಿಸಲು ನೀತಿಗಳು ನಿರ್ಣಾಯಕ.
* ಈ ಬಜೆಟ್ ರಿಯಲ್ ಎಸ್ಟೇಟ್ ವಲಯದ ಸಾಮರ್ಥ್ಯವನ್ನು ವೇಗವರ್ಧಿಸುತ್ತದೆ. ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಪ್ರಮುಖ ಅಂಶವಾಗಿಸುತ್ತದೆ. ಯೋಜನೆಯ ವಿಳಂಬಗಳು ಮತ್ತು ಸಂಬಂಧಿತ ವೆಚ್ಚಗಳನ್ನು ಕಡಿತಗೊಳಿಸಲು ಸರಳೀಕೃತ ಏಕ-ವಿಂಡೋ ಕ್ಲಿಯರೆನ್ಸ್ ಕಾರ್ಯವಿಧಾನಗಳು ಅವಶ್ಯಕ. ಈ ಗುರಿಗಳನ್ನು ಪೂರೈಸುವ ಮೂಲಕ, ಬಜೆಟ್ ಟೈರ್ 2 ನಗರಗಳು ಸ್ವಾವಲಂಬಿ ಬೆಳವಣಿಗೆಯ ಕೇಂದ್ರಗಳಾಗಲು ಅನುವು ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications