Get Updates
Get notified of breaking news, exclusive insights, and must-see stories!

ಜೇಟ್ಲಿ ಬಜೆಟ್ ನಂತರ ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ?

ನವದೆಹಲಿ, ಫೆಬ್ರವರಿ 01: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2018-19ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಬಳದಾರರಿಗೆ ಏನು ನೀಡಿದರು? ಸ್ಟಾಂಡರ್ಡ್ ಡಿಡಕ್ಷನ್ ಮತ್ತೆ ಪರಿಚಯಿಸುವ ಮೂಲಕ ಏನೆಲ್ಲ ಗೊಂದಲ ಮೂಡಿದೆ? ಈ ಬಗ್ಗೆ ವಿವರಣೆ ಇಲ್ಲಿದೆ.

ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಬದಲಾಯಿಸಿಲ್ಲ. ಆದರೆ, ಸ್ಟಾಂಡರ್ಡ್ ಡಿಡಕ್ಷನ್ ಮತ್ತೆ ಪರಿಚಯಿಸಲಾಗಿದೆ. 2005ರ ಬಜೆಟ್ ನಂತರ standard deduction ತೆಗೆದು ಹಾಕಲಾಗಿತ್ತು.

Union Budget 2018: Standard deduction reintroduced, How to calculate Tax now

ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು 30 ಸಾವಿರ ರುಪಾಯಿ ಅಥವಾ (ಸಂಬಳದ ಶೇ40 ರಷ್ಟು- 5 ಲಕ್ಷ ರು ಸಂಬಳ ಮಿತಿ ತನಕ)ಯಿಂದ 40 ಸಾವಿರ ರುಪಾಯಿಗೆ ಏರಿಸಲಾಗಿದೆ.

ಆದರೆ, ಇದರಲ್ಲಿ ಸಾರಿಗೆ ಭತ್ಯೆ 19,200 ಹಾಗೂ ವೈದ್ಯಕೀಯ ಮರುಪಾವತಿ ಭತ್ಯೆ(medical reimbursement) 15,000 ರು ಸೇರಿಸಲಾಗಿಲ್ಲ.

standard deduction ಜಾರಿಗೆ ತಂದ ಬಳಿಕ 5 ಲಕ್ಷ ರು(ತೆರಿಗೆಗೆ ಒಳಪಡುವ) ಹಾಗೂ 15 ಲಕ್ಷ ರು ಆದಾಯಯುಳ್ಳವರಿಗೆ ಎಷ್ಟು ತೆರಿಗೆ ಹೊರೆ ಬೀಳಲಿದೆ. ಎಂಬುದಕ್ಕೆ ಕೆಳಗೆ ಉದಾಹರಣೆ ಇದೆ ನೋಡಿ...

5 ಲಕ್ಷ ತೆರಿಗೆಗೆ ಒಳಪಡುವ ಸಂಬಳವುಳ್ಳವರಿಗೆ (ವಾರ್ಷಿಕ ಲೆಕ್ಕ ಎಲ್ಲವೂ ರುಪಾಯಿಯಂತೆ)
ಅಂಶಗಳು ಹಾಲಿ ಲೆಕ್ಕಾಚಾರ ಬಜೆಟ್ 2018 ನಂತರ
ಮೂಲ ವೇತನ + ತುಟ್ಟಿಭತ್ಯೆ (ಡಿಎ) 3,10,533 3,10,533
Conveyance Allownace (non -taxable) 19,200 -
Medical Reimbursement (non -taxable) 15,000 -
ಇತರೆ ತೆರಿಗೆ ಭತ್ಯೆ 1,89,467 2,23,667
ಒಟ್ಟಾರೆ ಸಂಬಳ(Gross Salary) 5,00,000 5,34,200

________________________________

Standard Deduction- 40,000
ಮುಖ್ಯ ಸಂಬಳದಿಂದ ಆದಾಯ
5,00,00 4,94,200
ಆದಾಯ ತೆರಿಗೆ 12,500 12,210
87ಎ ಅಡಿಯಲ್ಲಿ ರಿಬೇಟ್ - -
ರಿಬೇಟ್ ನಂತರ ಪಾವತಿಸಬೇಕಾದ ಒಟ್ಟಾರೆ ತೆರಿಗೆ 12,500 12,210
ಸರ್ ಚಾರ್ಜ್ 10%/15%
- -
ಶಿಕ್ಷಣ ಸೆಸ್ 3%/4%
375 488
ಸೆಸ್, ಸರ್ ಚಾರ್ಜ್ ಸೇರಿ ಒಟ್ಟಾರೆ ತೆರಿಗೆ 12,875 12,698
ತೆರಿಗೆ ಉಳಿತಾಯ - 177
ತೆರಿಗೆ ಪಾವತಿದಾರರಿಗೆ ಇದು ಅತಿ ಕಡಿಮೆ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ.
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+