ಅಲಿ ಬಾಬಾಗೆ ಹೊಡೆತ, ಗೂಗಲ್ ನಿಂದ ಯುಸಿ ಬ್ರೌಸರ್ ಔಟ್!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ಚೀನಾ ಮೂಲದ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಅಲಿ ಬಾಬಾ ಒಡೆತನದ UC ಬ್ರೌಸರ್ ಗೆ ಗೂಗಲ್ ಪ್ಲೇ ಸ್ಟೋರ್ ಕೊಕ್ ನೀಡಲಾಗಿದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅತಿ ಹೆಚ್ಚು ಡೌನ್ ಲೋಡ್ ಆಗುವ ಬ್ರೌಸರ್ ಆಪ್ಲಿಕೇಷನ್ ಆಗಿರುವ ಯುಸಿ ಬ್ರೌಸರ್ ಈಗ ಸರ್ಚ್ ನಲ್ಲಿ ಸಿಗುತ್ತಿಲ್ಲ.

UC Browser removed from Google Play Store

ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಸುಮಾರು 420 ಮಿಲಿಯನ್ ಬಳಕೆದಾರರಿದ್ದಾರೆ. 100 ಮಿಲಿಯನ್ ಬಳಕೆದಾರರು ಕೇವಲ ಭಾರತದಲ್ಲಿದ್ದಾರೆ. ಆದರೆ, ಈಗ UC ಬ್ರೌಸರ್ ಆ್ಯಪನ್ನು ಗೂಗಲ್ ಪ್ಲೇ ಸ್ಟೋರ್ ಡಿಲಿಟ್ ಮಾಡಿದೆ. ಈ ಬಗ್ಗೆ ಗೂಗಲ್ ಯಾವುದೇ ಮಾಹಿತಿ ನೀಡಿಲ್ಲ.

ಬಳಕೆದಾರರಿಗೆ ತಿಳಿಯದಂತೆ UC ಬ್ರೌಸರ್ ನಲ್ಲಿ ಡೇಟಾ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಗೂಗಲ್ ಪ್ಲೇ ಸ್ಟೋರ್ ನಲ್ಲಿ UC Browser Mini ಮತ್ತು New UC Browser ಎರಡು ಅಪ್ಲಿಕೇಷನ್ ಲಭ್ಯವ್ವಿತ್ತು. ಆದರೆ, ಈಗ UC Browser app ಸಿಗ್ತಿಲ್ಲ. ಸದ್ಯದಲ್ಲೆ ಗೂಗಲ್ ನಿಂದ ಈ ಬಗ್ಗೆ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.

UCWeb Inc. (ಯುಸಿವೆಬ್) ಮೊಬೈಲ್ ಇಂಟರ್ನೆಟ್ ಸಾಫ್ಟ್ ವೇರ್ ಮತ್ತು ಸೇವೆಯನ್ನು ನೀಡುವ ಅಗ್ರಗಣ್ಯ ಸಂಸ್ಥೆಯಾಗಿದೆ. 2004ರಲ್ಲಿ ಸ್ಥಾಪನೆಯಾದಂದಿನಿಂದ ವಿಶ್ವದಾದ್ಯಂತ ಇರುವ ಮೊಬೈಲ್ ಬಳಕೆದಾರರಿಗೆ ಅತ್ಯುತ್ಕೃಷ್ಟ ಸೇವೆಯನ್ನು ನೀಡುವ ಗುರಿಯನ್ನು ಯುಸಿವೆಬ್ ಬೆನ್ನತ್ತಿದೆ.

ಯುಸಿವೆಬ್‌ನ ಅಗ್ರ ಉತ್ಪನ್ನವಾಗಿರುವ ಯುಸಿ ಬ್ರೌಸರ್, 200ಕ್ಕೂ ಹೆಚ್ಚು ಉತ್ಪಾದಕರ 3 ಸಾವಿರಕ್ಕೂ ಹೆಚ್ಚು ಮೊಬೈಲ್ ಮಾಡೆಲ್ ಗಳಲ್ಲಿ ಲಭ್ಯವಿದ್ದು, ಎಲ್ಲ ಪ್ರಮುಖ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕಂಪ್ಯಾಟಿಬಲ್ ಆಗಿದೆ. ವಿಶ್ವದಾದ್ಯಂತ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 500 ಮಿಲಿಯನ್ ಬಳಕೆದಾರರಿಗೆ ಸೇವೆ ಒದಗಿಸುತ್ತಿರುವ UC Browser, ಇಂಗ್ಲಿಷ್, ರಷ್ಯಾ, ಇಂಡೋನೇಷಿಯಾ, ವಿಯೆಟ್ನಾಂ ಭಾಷೆ ಸೇರಿದಂತೆ ಈಗ 10 ಭಾಷೆಗಳಲ್ಲಿ ಲಭ್ಯವಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Google has pulled down UC Browser, the Alibaba Group-owned mobile web browser, from its Play Store amid alleged unethical data sharing by the Chinese app.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ