• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸ್ಕ್ ಎಫೆಕ್ಟ್; ಟ್ವಿಟ್ಟರ್‌ನಲ್ಲಿ ಶುರುವಾಯ್ತು ಲೇ ಆಫ್

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಜುಲೈ 8: ಇತ್ತೀಚೆಗೆ ವಿವಿಧ ಕಾರಣಗಳಿಗೆ ಸದಾ ಸುದ್ದಿಯಲ್ಲಿರುವ ಟ್ವಿಟ್ಟರ್ ಸಂಸ್ಥೆಯಲ್ಲಿ ಈಗ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ದಟ್ಟವಾಗುತ್ತಿದೆ. ಈಗಾಗಲೇ ಹಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ ಟ್ವಿಟ್ಟರ್‌ನ ಟ್ಯಾಲೆಂಟ್ ಅಕ್ವಿಸಿಶನ್ ಟೀಮ್‌ನಲ್ಲಿ (ಎಚ್ ಆರ್ ತಂಡ) ಶೇ. 30ರಷ್ಟು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಸಿಕ್ಕಿದೆ. ನೂರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿರುವ ವಿಚಾರವನ್ನು ಸ್ವತಃ ಟ್ವಿಟ್ಟರ್ ಖಚಿತಪಡಿಸಿದೆ.

ಅಪ್ಪನ ಗುರುತೇ ಬೇಡ; ಎಲಾನ್ ಮಸ್ಕ್ ಮಗ ಅಲ್ಲ ಮಗಳ ಲಿಂಗ ಪರಿವರ್ತನೆ, ನಾಮ ಬದಲಾವಣೆಅಪ್ಪನ ಗುರುತೇ ಬೇಡ; ಎಲಾನ್ ಮಸ್ಕ್ ಮಗ ಅಲ್ಲ ಮಗಳ ಲಿಂಗ ಪರಿವರ್ತನೆ, ನಾಮ ಬದಲಾವಣೆ

ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಇರುವಂತೆಯೇ ಈ ಸೋಷಿಯಲ್ ಮೀಡಿಯಾ ಕಂಪನಿಯಲ್ಲಿ ಗಮನಾರ್ಹ ಬದಲಾವಣೆ ಆಗುವ ನಿರೀಕ್ಷೆ ಹೆಚ್ಚಿದೆ. ಸಂಸ್ಥೆಯ ಕಾರ್ಯನಿರ್ವಹಣೆಯ ರೀತಿಯಲ್ಲಿ ಬದಲಾವಣೆ ಆಗುವುದರ ಜೊತೆಗೆ ವೆಚ್ಚಕ್ಕೆ ಕಡಿವಾಣ ಹಾಕುವುದಾಗಿ ಮಸ್ಕ್ ಹಲವು ಬಾರಿ ಹೇಳಿಕೊಂಡಿದ್ದು ಉಂಟು.

ಎಲಾನ್ ಮಸ್ಕ್ ಸಂಪೂರ್ಣವಾಗಿ ಟ್ವಿಟ್ಟರ್ ಆಡಳಿತ ನಿರ್ವಹಣೆಗೆ ಇಳಿಯುವ ಮುನ್ನವೇ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಇತ್ತೀಚೆಗಷ್ಟೇ ಟ್ವಿಟ್ಟರ್ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಇದೀಗ ಉದ್ಯೋಗಿಗಳ ಭೀತಿ ನಿಜವಾಗಿದೆ.

 ಸುಳಿವು ನೀಡಿದ್ದ ಮಸ್ಕ್

ಸುಳಿವು ನೀಡಿದ್ದ ಮಸ್ಕ್

ಜೂನ್ ತಿಂಗಳಲ್ಲಿ ಎಲಾನ್ ಮಸ್ಕ್ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಸಭೆ ನಡೆಸಿದ್ದರು. ಅದರಲ್ಲಿ ಅವರು ಟ್ವಿಟ್ಟರ್‌ನ ವೆಚ್ಚಕ್ಕೆ ಕಡಿವಾಣ ಹಾಕಿ ಲಾಭದಾಯಕ ಸಂಸ್ಥೆಯಾಗಿ ರೂಪಿಸುವ ಕೆಲಸಕ್ಕೆ ಆದ್ಯತೆ ಕೊಡಲಾಗುತ್ತದೆ ಎಂದು ಹೇಳಿದ್ದರು. ಆಗ ಕೆಲ ಉದ್ಯೋಗಿಗಳು ಕೆಲಸ ಹೋಗುವ ಸಾಧ್ಯತೆ ಇದೆಯಾ ಎಂದೂ ಕೇಳಿದ್ದರು. ಅದಕ್ಕೆ ಎಲಾನ್ ಮಸ್ಕ್ ಸ್ಪಷ್ಟ ಉತ್ತರ ಹೇಳದಿದ್ದರೂ ಆ ಬಗ್ಗೆ ಸುಳಿವು ನೀಡಿದ್ದರು: "ಗೊತ್ತಿಲ್ಲ, ಅದರೆ ಕಂಪನಿ ಉತ್ತಮ ಸ್ಥಿತಿಗೆ ಬರುವುದು ಮುಖ್ಯ" ಎಂದು ಹೇಳಿದ್ದರು.

ಸರಿಯಾದ ಮಾಹಿತಿ ಕೊಡದಿದ್ದರೆ ಟ್ವಿಟ್ಟರ್ ಖರೀದಿಸುವುದಿಲ್ಲ: ಎಲಾನ್ ಮಸ್ಕ್ ಎಚ್ಚರಿಕೆಸರಿಯಾದ ಮಾಹಿತಿ ಕೊಡದಿದ್ದರೆ ಟ್ವಿಟ್ಟರ್ ಖರೀದಿಸುವುದಿಲ್ಲ: ಎಲಾನ್ ಮಸ್ಕ್ ಎಚ್ಚರಿಕೆ

 ಹಿರಿಯ ಉದ್ಯೋಗಿಗಳಿಗೆ ಬಾಧೆ

ಹಿರಿಯ ಉದ್ಯೋಗಿಗಳಿಗೆ ಬಾಧೆ

ಟ್ವಿಟ್ಟರ್‌ನಲ್ಲಿ ಈಗ ಕೆಲಸ ಕಳೆದುಕೊಂಡವರಲ್ಲಿ ಬಹುತೇಕರು ಹಿರಿಯ ಉದ್ಯೋಗಿಗಳಾಗಿದ್ದಾರೆ. ಅನೇಕ ವರ್ಷಗಳಿಂದ ಅವರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ಈ ವಿಚಾರವನ್ನು ಹೆಚ್‌ಆರ್ ಟೀಮ್‌ನ ಹಿರಿಯ ಉದ್ಯೋಗಿ ಇಂಗ್ರಿಡ್ ಜಾನ್ಸನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

"ಟ್ವಿಟ್ಟರ್ ಲೇ ಆಫ್ ಇವತ್ತು ಶುರುವಾಗಿದೆ. ದಶಕಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿರುವ ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನಿಜಕ್ಕೂ ಬಹಳ ಕಠಿಣವಾದ ದಿನ ಇದು" ಎಂದು ಈಕೆ ಲಿಂಕಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

 ಸಾವಿರಾರು ಜನರಿಗೆ ಉದ್ಯೋಗನಷ್ಟ?

ಸಾವಿರಾರು ಜನರಿಗೆ ಉದ್ಯೋಗನಷ್ಟ?

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ 2006ರಲ್ಲಿ ಅರಂಭಗೊಂಡ ಟ್ವಿಟ್ಟರ್‌ನಲ್ಲಿ ಇದೀಗ 7 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಆದಾಯ ಹೆಚ್ಚು ಇದ್ದರೂ ಕಂಪನಿ ನಷ್ಟದಲ್ಲಿ ನಡೆಯುತ್ತಿದೆ. ಟ್ವಿಟ್ಟರ್‌ಗೆ ಲಾಭದಾಯಕ ಅದಾಯ ಮೂಲ ಇಲ್ಲ. ಲಾಭವಿಲ್ಲದೇ ಸಂಸ್ಥೆ ನಡೆಯಬೇಕೆನ್ನುವ ಉದ್ದೇಶದಿಂದ ಇದು ಇಲ್ಲಿಯವರೆಗೆ ಬಂದು ನಿಂತಿದೆ. ಅನೇಕ ಬಾರಿ ಸಂಸ್ಥೆಯನ್ನು ಮುಚ್ಚುವ ಪ್ರಮೇಯ ಬಂದರೂ ಕುಂಟುತ್ತಾ ಸಾಗುತ್ತಿದೆ. ಈಗ ಮಸ್ಕ್ ಬಂದ ಬಳಿಕ ಟ್ವಿಟ್ಟರ್ ಅನ್ನು ಲಾಭದ ಹಳಿಗೆ ತರುವ ಪ್ರಯತ್ನ ಆರಂಭವಾಗಿದೆ. ಅದರ ಭಾಗವಾಗಿ ಸಿಬ್ಬಂದಿವರ್ಗದ ಸಂಖ್ಯೆಯ ಕಡಿತ ಮಾಡುವ ಯೋಜನೆ ಇದೆ. ಒಂದು ಅಂದಾಜು ಪ್ರಕಾರ ಟ್ವಿಟ್ಟರ್‌ನಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.

 ಮಸ್ಕ್ ಇನ್ನೂ ಟ್ವಿಟ್ಟರ್ ಖರೀದಿಸಿಲ್ಲ

ಮಸ್ಕ್ ಇನ್ನೂ ಟ್ವಿಟ್ಟರ್ ಖರೀದಿಸಿಲ್ಲ

ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಇನ್ನೂ ಖರೀದಿ ಮಾಡಿಲ್ಲ. ಖರೀದಿಸುವ ಪ್ರಕ್ರಿಯೆಯಲ್ಲಿದ್ದಾರೆ ಅಷ್ಟೇ. ಟ್ಟಿಟ್ಟರ್‌ನಲ್ಲಿರುವ ಸ್ಪ್ಯಾಮ್ ಬೋಟ್‌ಗಳು (Spam Bot) ಬಹಳ ಇವೆ ಎಂದಿರುವ ಎಲಾನ್ ಮಸ್ಕ್, ಈ ಬಾಟ್‌ಗಳ ಬಗ್ಗೆ ಮಾಹಿತಿ ನೀಡಬೇಕೆಂದು ಕೇಳಿದ್ದರು. ಆದರೆ, ಅದಕ್ಕೆ ಟ್ವಿಟ್ಟರ್ ಇನ್ನೂ ಉತ್ತರ ಕೊಟ್ಟಿಲ್ಲ. ಇದರಿಂದ ಕೆಂಡಾಮಂಡಲವಾಗಿರುವ ಇಲಾನ್ ಮಸ್ಕ್, ತಾನು ಕೇಳಿದ ಮಾಹಿತಿ ಸಿಗದೇ ಹೋದರೆ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯಿಂದ ನಿರ್ಗಮಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ನಿನ್ನೆ ಗುರುವಾರ ಟ್ವಿಟ್ಟರ್ ನೀಡಿರುವ ಮಾಹಿತಿ ಪ್ರಕಾರ, ಪ್ರತೀ ದಿನ 10 ಲಕ್ಷದಷ್ಟು ಸ್ಪ್ಯಾಮ್ ಅಕೌಂಟ್‌ಗಳನ್ನು ತೆಗೆದುಹಾಕಲಾಗುತ್ತಿದೆಯಂತೆ.

(ಒನ್ಇಂಡಿಯಾ ಸುದ್ದಿ)

Recommended Video

   Dinesh Karthik ವಿಚಾರದಲ್ಲಿ Rohit Sharma ನಿರ್ಧಾರ ಸರೀನಾ? | *Cricket | OneIndia Kannada
   English summary
   Twitter has reportedly layed off more than 100 employees as part of its plans to cut the expenditure. These employees were mostly from HR Team.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X