ಟ್ವಿಟ್ಟರ್ ಮಂಡಳಿಗೆ ಎಲೋನ್ ಮಸ್ಕ್ ಸೇರ್ಪಡೆ; ಪರಾಗ್, ಡಾರ್ಸೆ ಪ್ರತಿಕ್ರಿಯೆ
ನವದೆಹಲಿ, ಏಪ್ರಿಲ್ 5: ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್‌ನ ನಿರ್ದೇಶಕರ ಮಂಡಳಿ (ಬೋರ್ಡ್ ಆಫ್ ಡೈರೆಕ್ಟರ್ಸ್)ಗೆ ಸೇರ್ಪಡೆ ಆಗಲಿದ್ದಾರೆ ಎಂದು ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮಂಗಳವಾರ ಘೋಷಿಸಿದರು. 2024ರ ವಾರ್ಷಿಕ ಷೇರುದಾರರ ಸಭೆಯಲ್ಲಿ ಅಗರವಾಲ್ ಅವರ ಅವಧಿ ಮುಕ್ತಾಯಗೊಳ್ಳಲಿದೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಶೇ.9ರಷ್ಟು ಪಾಲನ್ನು ತೆಗೆದುಕೊಂಡ ಮರುದಿನವೇ ಈ ಬೆಳವಣಿಗೆ ನಡೆದಿದೆ. "ನಾವು ಎಲೋನ್ ಮಸ್ಕ್ ಅವರನ್ನು ನಮ್ಮ ಮಂಡಳಿಗೆ ನೇಮಿಸುತ್ತಿದ್ದೇವೆ ಎಂಬುದನ್ನು ಹಂಚಿಕೊಳ್ಳುವುದಕ್ಕೆ ನಾನು ಉತ್ಸುಕನಾಗಿದ್ದೇನೆ! ಇತ್ತೀಚಿನ ವಾರಗಳಲ್ಲಿ ಎಲೋನ್ ಜೊತೆಗಿನ ಮಾತುಕತೆ ನಂತರದಲ್ಲಿ ಅವರಿಂದ ನಮ್ಮ ಮಂಡಳಿಗೆ ಗೌರವ ಹೆಚ್ಚಾಗಲಿದೆ ಎಂಬುದು ನಮಗೆ ಸ್ಪಷ್ಟವಾಯಿತು," ಎಂದು ಅಗರವಾಲ್ ಟ್ವೀಟ್ ಮಾಡಿದ್ದಾರೆ.
ಅವರು ವಿಶ್ವಾಸಾರ್ಹ ಮತ್ತು ಸೇವೆಯ ತೀವ್ರ ವಿಮರ್ಶಕರಾಗಿದ್ದಾರೆ. ದೀರ್ಘಾವಧಿಯಲ್ಲಿ ಟ್ವಿಟರ್ ಮತ್ತು ಮಂಡಳಿಯನ್ನು ಬಲಪಡಿಸುವ ಅಗತ್ಯವಿದೆ. ಎಲೋನ್ ಸ್ವಾಗತ!," ಎಂದು ಪರಾಗ್ ಅಗರವಾಲ್ ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಎಲೋನ್ ಮಸ್ಕ್ ಪ್ರತಿಕ್ರಿಯೆ:
ಟ್ವಿಟ್ಟರ್‌ನ ನಿರ್ದೇಶಕ ಮಂಡಳಿಗೆ ಸೇರ್ಪಡೆ ಕುರಿತು ಘೋಷಣೆ ಬೆನ್ನಲ್ಲೇ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. "ಮುಂಬರುವ ತಿಂಗಳುಗಳಲ್ಲಿ ಟ್ವಿಟ್ಟರ್‌ನಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡುವ ನಿಟ್ಟಿನಲ್ಲಿ ಪರಾಗ್ ಮತ್ತು ಟ್ವಿಟ್ಟರ್ ಮಂಡಳಿಯೊಂದಿಗೆ ಕೆಲಸ ಮಾಡುವುದಕ್ಕಾಗಿ ಎದುರು ನೋಡುತ್ತಿದ್ದೇನೆ!" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್‌ನ ಮಾಜಿ ಸಿಇಒ ಜ್ಯಾಕ್ ಡೋರ್ಸೆ ಟ್ವೀಟ್:
"ಎಲೋನ್ ಮಸ್ಕ್ ಟ್ವಿಟ್ಟರ್ ಬೋರ್ಡ್‌ಗೆ ಸೇರುತ್ತಿರುವುದು ನನಗೆ ನಿಜವಾಗಿಯೂ ಸಂತೋಷವಾಗಿದೆ! ಅವರು ನಮ್ಮ ಜಗತ್ತಿನ ಬಗ್ಗೆ ಮತ್ತು ಅದರಲ್ಲಿ ಟ್ವಿಟ್ಟರ್‌ನ ಪಾತ್ರದ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ. ಪರಾಗ್ ಮತ್ತು ಎಲೋನ್ ಇಬ್ಬರೂ ತಮ್ಮ ಹೃದಯಪೂರ್ವಕವಾಗಿ ನಮ್ಮ ಅಭೂತಪೂರ್ವ ತಂಡವನ್ನು ಮುನ್ನೆಡೆಸುತ್ತಾರೆ," ಎಂದು ಡೋರ್ಸೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಶೇ.14.90ರಷ್ಟು ಷೇರು ಹೊಂದುವಂತಿಲ್ಲ:
ಟ್ವಿಟ್ಟರ್ ಮಂಡಳಿಯ ಸದಸ್ಯರಾಗಿ ಹಾಗೂ ಗುಂಪಿಗೆ ಸೇರ್ಪಡೆಯಾದ ನಂತರದಲ್ಲಿ ಎಲೋನ್ ಮಸ್ಕ್ ಒಬ್ಬರೇ ಶೇ.14.90ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದುವುದಕ್ಕೆ ಅನುಮತಿ ನೀಡಲಾಗುವುದಿಲ್ಲ. 80 ಮಿಲಿಯನ್ ಟ್ವಿಟ್ಟರ್ ಅನುಯಾಯಿಗಳನ್ನು ಹೊಂದಿರುವ ಮಸ್ಕ್, ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ 73.5 ಮಿಲಿಯನ್ ಷೇರುಗಳನ್ನು ಖರೀದಿಸಿದ್ದಾರೆ. ಅವರು ತಮ್ಮ ಬೃಹತ್ ಮತ್ತು ನಿಷ್ಠಾವಂತ ಟ್ವಿಟ್ಟರ್ ಅನುಸರಣೆಯೊಂದಿಗೆ ಅವರು ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್ ಅನ್ನು ರಚಿಸುವ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ.












Click it and Unblock the Notifications