ನಂಬರ್ ಪೋರ್ಟೆಬಿಲಿಟಿ ಶುಲ್ಕದಲ್ಲಿ ಭಾರಿ ಇಳಿಕೆ!
ಬೆಂಗಳೂರು, ಫೆಬ್ರವರಿ 01: ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಶುಲ್ಕವನ್ನು ಟೆಲಿಕಾಂ ನಿಯಂತ್ರಣ ಮಂಡಳಿ(ಟ್ರಾಯ್) ಇಳಿಸಿದೆ. ಮೊಬೈಲ್ ಪೋರ್ಟೆಬಿಲಿಟಿ ಶುಲ್ಕ 19 ರೂಪಾಯಿ ಈಗ ಶೇ.79ರಷ್ಟು ಇಳಿಕೆಯಾಗಿ 4 ರೂಪಾಯಿ ನಿಗದಿಪಡಿಸಲಾಗಿದೆ.
ಯಾವುದೇ ನೆಟ್ವರ್ಕ್ ನಿಂದ ಬೇರೆ ನೆಟ್ವರ್ಕ್ ಗೆ ಪೋರ್ಟ್ ಮಾಡಲು ಮೊಬೈಲ್ ಬಳಕೆದಾರರಿಗೆ 4 ರೂಪಾಯಿಗಿಂತ ಹೆಚ್ಚಿನ ಶುಲ್ಕ ತೆರಬೇಕಾಗಿಲ್ಲ. ಆದರೆ, 4 ರೂಪಾಯಿಗಿಂತ ಕಡಿಮೆ ಶುಲ್ಕವನ್ನು ಪಡೆಯಬಹುದು. ಚಂದಾದಾರರು ಈಗ ಕಡಿಮೆ ಮೊತ್ತಕ್ಕೆ ಮೊಬೈಲ್ ನೆಟ್ವರ್ಕ್ ಬದಲಾಯಿಸಬಹುದು.

ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸರ್ವೀಸ್ ಪ್ರೊವೈಡರ್ ಗಳ ವೆಚ್ಚ ಕಡಿಮೆಯಾಗಿದೆ. ಹೀಗಾಗಿ ಟ್ರಾಯ್ ಪೋರ್ಟೆಬಿಲಿಟಿ ಶುಲ್ಕವನ್ನು ಇಳಿಕೆ ಮಾಡಿದೆ.
ಸೇವಾದಾರರು ಬದಲಾದರೂ ಅದೇ ಲೈಸನ್ಸ್ಡ್ ಸರ್ವೀಸ್ ಏರಿಯಾದಲ್ಲಿ ಅದೇ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಳ್ಳಲು ಅವಕಾಶವಿದೆ.












Click it and Unblock the Notifications