ಚಿನ್ನದ ಬೆಲೆ ಮತ್ತಷ್ಟು ಏರಿಕೆ: 62,000 ರುಪಾಯಿ ಗಡಿ ಮುಟ್ಟಿದ ಬೆಳ್ಳಿ ದರ
ನವದೆಹಲಿ, ಜುಲೈ 23: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಗುರುವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 250 ರುಪಾಯಿ ಏರಿಕೆಗೊಂಡು 49,000 ರುಪಾಯಿ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 50,200 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 3,050 ರುಪಾಯಿ ಹೆಚ್ಚಾಗಿದ್ದು 62,000 ರುಪಾಯಿ ಗಡಿ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 23: 47,620-51,920 (350 ರುಪಾಯಿ ಏರಿಕೆ)
ಜುಲೈ 22: 47,270-51,570
ಜುಲೈ 21: 46,510-50,710
ಜುಲೈ 20: 46,360-50,560

ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 23: 49,000-50,200 (250 ರುಪಾಯಿ ಏರಿಕೆ)
ಜುಲೈ 22: 48,750-49,950
ಜುಲೈ 21: 47,900-49,100
ಜುಲೈ 20: 47,850-49,050

ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 23: 48,150-52,200 (300 ರುಪಾಯಿ ಏರಿಕೆ)
ಜುಲೈ 22: 47,850-52,200
ಜುಲೈ 21: 47,090-51,370
ಜುಲೈ 20: 46,950-51,240

ಮುಂಬೈ ಚಿನ್ನದ ಬೆಲೆ
ಜುಲೈ 23: 49,200-50,200 (500 ರುಪಾಯಿ ಏರಿಕೆ)
ಜುಲೈ 22: 48,700-49,700
ಜುಲೈ 21: 48,100-49,100
ಜುಲೈ 20: 47,930-48,930

ಜೈಪುರ ಚಿನ್ನದ ಬೆಲೆ
ಜುಲೈ 23: 49,000-50,200 (250 ರುಪಾಯಿ ಏರಿಕೆ)
ಜುಲೈ 22: 48,750-49,950
ಜುಲೈ 21: 47,900-49,100
ಜುಲೈ 20: 47,850-49,050

ಚಂಡೀಗಡ ಚಿನ್ನದ ಬೆಲೆ
ಜುಲೈ 23: 48,300-51,200 (400 ರುಪಾಯಿ ಏರಿಕೆ)
ಜುಲೈ 22: 47,900-50,800
ಜುಲೈ 21: 47,000-49,050
ಜುಲೈ 20: 47,000-49,050

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications