ಟಾಟಾ ಸಮೂಹ ತೆಕ್ಕೆಗೆ ಬಿಗ್ ಬ್ಯಾಸ್ಕೆಟ್ ಸೂಪರ್ ಮಾರ್ಕೆಟ್

ಮುಂಬೈ, ಫೆಬ್ರವರಿ 17: ಭಾರತದ ಅತಿದೊಡ್ಡ ಆನ್‌ಲೈನ್ ಕಿರಾಣಿ ಕಂಪನಿಯಾದ ಬಿಗ್ ಬಾಸ್ಕೆಟ್‌ನ ಶೇ 68ರಷ್ಟು ಪಾಲನ್ನು ಟಾಟಾ ಸಮೂಹ ಸಂಸ್ಥೆ ಖರೀದಿಸುತ್ತಿದೆ. ಈ ಒಪ್ಪಂದದ ಮೌಲ್ಯ ಸುಮಾರು 9,300 ರಿಂದ 9,500 ಕೋಟಿ ರು ಎಂದು ಸುದ್ದಿ ಬಂದಿದೆ.

ಬೆಂಗಳೂರು ಮೂಲದ ಸರಿ ಸುಮಾರು 13,500 ಕೋಟಿ (ಸುಮಾರು 1.85 ಬಿಲಿಯನ್ ಡಾಲರ್) ಮೌಲ್ಯದ ಬಿಗ್ ಬ್ಯಾಸ್ಕೆಟ್ ಇತ್ತೀಚೆಗೆ 1 ಬಿಲಿಯನ್ ಡಾಲರ್ ಮೌಲ್ಯ ದಾಟಿ ಯೂನಿಕಾರ್ನ್ ಎನಿಸಿಕೊಂಡಿತ್ತು. ಹರಿ ಮೆನನ್ ಒಡೆತನದ ಸಂಸ್ಥೆಯ ಹೂಡಿಕೆದಾರರಾದ ಅಲಿಬಾಬಾ, ಅಬ್ರಾಜ್ ಗ್ರೂಪ್ ಹಾಗೂ ಐಎಫ್ ಸಿ ಹೊರ ನಡೆಯಬೇಕಾಗುತ್ತದೆ.

ಟಾಟಾ ಸಮೂಹ ಒಡೆತನ ಬಂದ ಮೇಲೂ ಹರಿ ಮೆನನ್ ಸೇರಿದಂತೆ ಸಂಸ್ಥೆ ಸ್ಥಾಪಕರು ಬೋರ್ಡ್ ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಗ್ ಬ್ಯಾಸ್ಕೆಟ್ ವಾರ್ಷಿಕ ಪ್ರಗತಿಶೇ 57ರಷ್ಟಿದ್ದು, 2024ರ ವೇಳೆಗೆ 18 ಬಿಲಿಯನ್ ಡಾಲರ್ ಮೌಲ್ಯಕ್ಕೇರಲಿದೆ ಎಂದು ಅಂದಾಜಿಸಲಾಗಿದೆ.

Tatas to buy 68% in BigBasket for Rs 9,500 cr, deal likely in 4-5 weeks

ಇ-ಕಿರಾಣಿ ಕ್ಷೇತ್ರದಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್, ಉಡಾನ್ , ರಿಲಯನ್ಸ್ ಜೊತೆಗೆ ಟಾಟಾ ಕೂಡಾ ಸೇರ್ಪಡೆಯಾಗಲಿದೆ. ಕೊವಿಡ್ 19 ಕಾಲದಲ್ಲಿ ಬಿಗ್ ಬ್ಯಾಸ್ಕೆಟ್ ಶೇ 84ರಷ್ಟು ಹೆಚ್ಚುವರಿ ಗ್ರಾಹಕರನ್ನು ಸೆಳೆದಿದ್ದು, 20 ಮಿಲಿಯನ್ ಆರ್ಡರ್ ಪ್ರತಿ ತಿಂಗಳಿನಂತೆ ಪಡೆದುಕೊಂಡು ಯೂನಿಕಾರ್ನ್ ಕಂಪನಿ ಪಟ್ಟಕ್ಕೇರಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+