ಡೊಕೊಮೊದಿಂದ 350 ರುಗಳಿಗೆ, ಪೋಸ್ಟ್-ಪೇ ಆಫರ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 21: ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಡೊಕೊಮೊ ಕರ್ನಾಟಕ ಮಾರುಕಟ್ಟೆಯ ತನ್ನ ಗ್ರಾಹಕರಿಗಾಗಿ ಒಂದು ವಿನೂತನವಾದ ಪೋಸ್ಟ್-ಪೇ ಯೋಜನೆಯಾದ ಸಿಂಪಲ್ ಈಸ್ ದಿ ಬೆಸ್ಟ್' ಯೋಜನೆಯನ್ನು ಪ್ರಕಟಿಸಿದೆ.

'ಸಿಂಪಲ್ ಈಸ್ ದಿ ಬೆಸ್ಟ್' ಯೋಜನೆಗಳು ಕೇವಲ 350 ರೂಪಾಯಿ ಕನಿಷ್ಠ ಬಾಡಿಗೆ ದರದಲ್ಲಿ 5ಜಿಬಿ ಡಾಟಾ ಮತ್ತು 1500 ನಿಮಿಷಗಳ ಟಾಕ್ ಟೈಮ್ ಸೇವೆಯನ್ನು ಒದಗಿಸಲಿವೆ. ಗ್ರಾಹಕರು ತಮ್ಮ ಧ್ವನಿ ಮತ್ತು ಡಾಟಾ ಅಗತ್ಯಕ್ಕೆ ತಕ್ಕಂತೆ ಎರಡು ವಿಧದ ಕೊಡುಗೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.[ಟಾಟಾದಿಂದ 1 ಜಿಬಿ ಡಾಟಾಗೆ 91 ರು ಯೋಜನೆ]

Tata Docomo offers voice and data at Rs 350 to postpaid users

1) ಅತಿ ಹೆಚ್ಚು ಡಾಟಾ ಯೋಜನೆ:- 5 ಜಿಬಿ ಡಾಟಾ ಮತ್ತು 1000 ನಿಮಿಷಗಳ ಸ್ಥಳೀಯ ಮತ್ತು ಎಸ್ಟಿಡಿ ಟಾಕ್ ಟೈಮ್ ಲಾಭ ಪಡೆಯಬಹುದು. 5ಜಿಬಿ ಡಾಟಾ ಕೊಡುಗೆ ಮೊದಲ ಆರು ತಿಂಗಳವರೆಗೆ ಲಭ್ಯವಾಗಿರುತ್ತದೆ. ಅದೇ ರೀತಿ ಧ್ವನಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

2) ಅತಿ ಹೆಚ್ಚು ಧ್ವನಿ ಯೋಜನೆ:- 2 ಜಿಬಿ ಡಾಟಾದೊಂದಿಗೆ ಸ್ಥಳೀಯ ಮತ್ತು ಎಸ್‍ಟಿಡಿಯ 1500 ನಿಮಿಷಗಳ ಟಾಕ್ ಟೈಮ್ ಲಭ್ಯ. ಈ ಸೇವೆ ಮೊದಲ ಆರು ತಿಂಗಳವರೆಗೆ ಲಭ್ಯವಿದ್ದು, ನಂತರ ಧ್ವನಿಯ ಲಾಭ 1000 ನಿಮಿಷಗಳಿಗೆ ಪರಿಷ್ಕರಣೆ ಆಗಲಿದ್ದು, 2 ಜಿಬಿ ಡಾಟಾದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗ್ರಾಹಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯದವರೆಗೆ ಮಾತನಾಡಲು ಮತ್ತು ಹೆಚ್ಚು ಇಂಟರ್ನೆಟ್ ಬ್ರೌಸಿಂಗ್ ಸೌಲಭ್ಯ ಪಡೆಯುವಂತಾಗಲಿ ಎಂಬ ಕಾರಣಕ್ಕೆ ಈ ಯೋಜನೆಗಳನ್ನು ರೂಪಿಸಲಾಗಿದೆ.

ಪೋಸ್ಟ್ ಪೇ ಗ್ರಾಹಕರು ಸ್ಥಳೀಯ ಕರೆಗಳನ್ನು 30 ಪೈಸೆ ಮತ್ತು ಎಸ್ಟಿಡಿ ಕರೆಗಳನ್ನು 40 ಪೈಸೆಯ ಫ್ಲಾಟ್ ವಾಯ್ಸ್ ದರದಲ್ಲಿ ಪಡೆಯಬಹುದಾಗಿದೆ. ಇದರ ಜತೆಗೆ ಅತ್ಯುತ್ತಮವಾದ ಡಾಟಾ ಲಾಭಗಳನ್ನೂ ಪಡೆಯಲಿದ್ದಾರೆ ಎಂದು ಟಾಟಾ ಟೆಲಿ ಸರ್ವೀಸಸ್ ಲಿಮಿಟೆಡ್‍ನ ಕರ್ನಾಟಕ-ಕೇರಳ ವೃತ್ತದ ಗ್ರಾಹಕ ವ್ಯವಹಾರಗಳ ಮುಖ್ಯಸ್ಥ ಶ್ರೀ ಬಾಲಾಜಿ ಪ್ರಕಾಶ್ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Telecom operator Tata Docomo on Tuesday launched ‘Simple is the Best’ postpaid plans that offer upto 1500 minutes talktime and 5 GB data at a rental for Rs 350.
Please Wait while comments are loading...