ದಾಖಲೆ ಇಲ್ಲದೇ ಒಂದು ಲಕ್ಷದವರೆಗೆ ಸಾಲ, ಟಾಟಾದಲ್ಲಿ ಮಾತ್ರ

ಟಾಟಾ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ಟಾಟಾ ಕ್ಯಾಪಿಟಲ್ ಕಡುಬಡವರಿಗೆ ಸ್ವಯಂ ಉದ್ಯೋಗ ಸ್ಥಾಪಿಸಲು 'ಸಲಾಮ್ ಲೋನ್ಸ್ ಎಂಬ ವಿನೂತನವಾದ ಯೋಜನೆಯನ್ನು ಪ್ರಕಟಿಸಿದೆ.

ಬೆಂಗಳೂರು, ಮೇ 09: ಟಾಟಾ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ಟಾಟಾ ಕ್ಯಾಪಿಟಲ್ ಕಡುಬಡವರಿಗೆ ಸ್ವಯಂ ಉದ್ಯೋಗ ಸ್ಥಾಪಿಸಲು 'ಸಲಾಮ್ ಲೋನ್ಸ್ ಎಂಬ ವಿನೂತನವಾದ ಯೋಜನೆಯನ್ನು ಪ್ರಕಟಿಸಿದೆ.

ಕಂಪನಿಯ ಒಳ್ಳೆಯ ಕೆಲಸ (ಡೂ ರೈಟ್) ಉಪಕ್ರಮದಡಿ ಈ ಯೋಜನೆಯನ್ನು ಪ್ರಕಟಿಸಿದ್ದು, ಇದರ ಮೂಲಕ ಸಂಘಟಿತ ಕ್ಷೇತ್ರದಲ್ಲಿ ಸಾಲ ಪಡೆಯಲು ಸಾಧ್ಯವಾಗದ ವ್ಯಕ್ತಿಗಳಿಗೆ ಸಾಲ ಸೌಲಭ್ಯವನ್ನು ನೀಡಲಿದೆ.

ಇದು ದೇಶದಲ್ಲೇ ವಿನೂತನವಾದ ಮತ್ತು ಮೊದಲ ಯೋಜನೆಯಾಗಿದೆ. ಇಲ್ಲಿ ಯಾವುದೇ ವ್ಯಕ್ತಿಯಿಂದ ದಾಖಲೆ-ಪತ್ರಗಳನ್ನು ಪಡೆಯದೇ ಸಾಲ ನೀಡಲಾಗುತ್ತದೆ. ಇದಕ್ಕೆ ಅವರು ಮಾಡಬೇಕಾದದ್ದು ತುಂಬಾ ಸುಲಭದ ಕೆಲಸ.

ಕಂಪನಿಯ ಅಧಿಕಾರಿಗಳ ಬಳಿ ತಾವು ಸ್ಥಾಪಿಸಲು ಉದ್ದೇಶಿಸಿರುವ ವ್ಯಾಪಾರ, ಗುಡಿ ಕೈಗಾರಿಕೆ ಸೇರಿದಂತೆ ಮತ್ತಿತರೆ ಸ್ವಯಂ ಉದ್ಯೋಗ ಕ್ರಮಗಳು ಅಥವಾ ಯೋಜನೆಗಳ ಬಗ್ಗೆ ವಿವರಣೆ ನೀಡಬೇಕು. ಇದರಲ್ಲಿ ಅರ್ಹರಾದವರನ್ನು ಆಯ್ಕೆ ಮಾಡಿ ಸಾಲ ನೀಡಲಾಗುತ್ತದೆ. ಅದೂ ಕೂಡ ಭಾರೀ ರಿಯಾಯ್ತಿ ದರದಲ್ಲಿ ಈ ಸಾಲ ಸಿಗುತ್ತದೆ.

ಹಲವಾರು ಸಂಕಷ್ಟಗಳನ್ನು ಎದುರಿಸಿದರೂ ತಾನೊಂದು ವ್ಯವಹಾರ ಅಥವಾ ಸ್ವಯಂ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸಬೇಕೆಂಬ ಛಲ ಮತ್ತು ಕನಸನ್ನು ಹೊಂದಿರುವವರಿಗೆ ನೆರವಾಗಲೆಂಬ ದೃಷ್ಟಿಯಿಂದಲೇ ಈ ವಿನೂತನವಾದ ಯೋಜನೆಯನ್ನು ಜಾರಿಗೆ ತರಲಾಗಿದೆ.

Tata Capital launches 'Salaam Loans'

ಯಾವುದೇ ಒಂದು ಆರ್ಥಿಕತೆ ಮತ್ತು ಜನರ ಅಭಿವೃದ್ಧಿಗೆ ಹಣಕಾಸು ಎಂಬುದು ಮೂಲಭೂತವಾದ ಅಗತ್ಯವಾಗಿದೆ. ಅಸಂಘಟಿತ ವೈಯಕ್ತಿಕ ಸಾಲಗಳು ಸಾಕಷ್ಟು ಲಾಭಗಳನ್ನು ತಂದುಕೊಡುತ್ತವೆ. ಆದರೆ, ಈಗಲೂ ಹಲವಾರು ಜನರು ಬ್ಯಾಂಕ್ ಖಾತೆಗಳ ಮೂಲಕ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ.

ಏಕೆಂದರೆ, ಅವರು ಸಾಲ ಪಡೆಯಲು ಸೂಕ್ತವಾದ ಹಣದ ವ್ಯವಹಾರ ಇರುವುದಿಲ್ಲ, ನಿಗದಿತ ಆದಾಯ ಇರುವುದಿಲ್ಲ ಅಥವಾ ಸೂಕ್ತ ರೀತಿಯ ದಾಖಲೆಗಳು ಇರುವುದಿಲ್ಲ.ಆದರೆ, ಸಲಾಂ ಲೋನ್ಸ್‌ನಲ್ಲಿ ಇಂತಹ ಯಾವುದೇ ಕಿರಿಕಿರಿ ಇರುವುದಿಲ್ಲ.

ಸಾಲ ಪಡೆಯಲು ಬಯಸುವವರು ತಾವು ಕೈಗೊಳ್ಳಲು ಉದ್ದೇಶಿಸಿರುವ ಸ್ವಯಂ ಉದ್ಯೋಗ ಅಥವಾ ಮತ್ತಿತರೆ ವ್ಯವಹಾರಗಳ ಬಗೆಗಿನ ಕತೆಯನ್ನು ವೆಬ್‌ಸೈಟ್ www.doright.in ಗೆ ಅಪ್‌ಲೋಡ್ ಮಾಡಿದರೆ ಸಾಕು. ಈ ಕತೆಗಳನ್ನು ಸಾಮಾಜಿಕ ಜಾಲತಾಣಗಳು ಅಥವಾ ಡಿಜಿಟಲ್ ಮಾಧ್ಯಮದ ಮೂಲಕ ದೇಶಾದ್ಯಂತ ಬಿತ್ತರಿಸಲಾಗುತ್ತದೆ.

ಇದರಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿರುತ್ತದೆ. ಏಕೆಂದರೆ, ಸಾರ್ವಜನಿಕರು ಈ ಕತೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲಿದ್ದಾರೆ. ಈ ಮೂಲಕ ಸಲಾಂ ಕಾರ್ಯಕ್ರಮಕ್ಕೆ ಶಿಫಾರಸು ಮಾಡಲಿದ್ದಾರೆ. ಒಮ್ಮೆ ಸಾರ್ವಕನಿಕರಿಂದ ಕತೆ ಮತ್ತು ವ್ಯಕ್ತಿ ಆಯ್ಕೆಯಾದ ನಂತರ ಸಾಲ ನೀಡಿಕೆಯ ಪ್ರಕ್ರಿಯೆಯನ್ನು ಟಾಟಾ ಕ್ಯಾಪಿಟಲ್ ಆರಂಭಿಸಲಿದೆ.

ಈ ಯೋಜನೆಯಡಿ ಒಂದು ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ದೊರೆಯಲಿದೆ. ಇದಕ್ಕೆ ಭಾರೀ ಪ್ರಮಾಣದ ರಿಯಾಯ್ತಿ ಇರುತ್ತದೆ. ಆಸಕ್ತಿ ಇರುವವರು ತಮ್ಮ ಉದ್ದೇಶಿತ ವ್ಯವಹಾರದ ಕತೆಗಳನ್ನು 56161561 ಸಂಖ್ಯೆಗೆ ಸಲಾಂ ಎಂದು ಎಸ್‌ಎಂಎಸ್ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+