ಸಾಲ ಪಡೆಯುವುದು ಒಂದು ಅದ್ಭುತ ಕಲೆ

ಸಾಲ ಪಡೆಯುವುದು ಇವತ್ತಿನ ದಿನಮಾನಗಳಲ್ಲಿ ಒಂದು ಬಹುಮುಖ್ಯ ಬಂಡವಾಳ ಮೂಲ. ಆದರೆ ಪಡೆದ ಸಾಲಕ್ಕೊಂದು ಜವಾಬ್ದಾರಿ ಇಲ್ಲದಿದ್ದರೆ, ಸಾಲವೇ ಶೂಲವಾದೀತು... ತಪ್ಪದೇ ಓದಿ..

ಬೇಕಿದ್ದರೆ ನೀವು ಗಮನಿಸಿ ನೋಡಿ. ಪ್ರಾಮಾಣಿಕರು, ನಿಜವಾಗಿಯೂ ಕಷ್ಟದಲ್ಲಿರುವವರು, ಕೊಟ್ಟಮಾತಿಗೆ ಬದ್ಧರಾಗಿರುವವರು, ಪಡೆದ ಸಾಲವನ್ನು ಸಕಾಲಕ್ಕೆ ತೀರಿಸಬಲ್ಲವರಿಗೆ ಸಾಲ ದೊರೆಯುವುದಿಲ್ಲ. ಆದರೆ ಅಪ್ರಾಮಾಣಿಕರು, ಮಾತು ತಪ್ಪುವವರಿಗೆ ಎಲ್ಲಿಂದಲೋ ಸಾಲ ಗಿಟ್ಟಿಬಿಡುತ್ತದೆ.

ಒಂದು ಬ್ಯಾಂಕ್ ನಿಂದಾಗಿ ಸಹಕಾರ ಸಂಘದಿಂದಾಗಲಿ ಅಥವಾ ಪರಿಚಯಸ್ಥರಿಂದ ಕೈಸಾಲವನ್ನಾಗಲಿ ಪಡೆಯುವುದು ಒಂದು ಅದ್ಭುತ ಕಲೆ. ಇವತ್ತಿಗೂ ನನಗೆ ಒಂದು ನೂರು ರೂಪಾಯಿಯನ್ನು ಸಹ ಸಾಲ ಕೇಳಿ ಪಡೆಯುವುದು ಭಾರಿ ಮುಜಗರದ ವಿಷಯ; ಸಾಲ ಪಡೆಯುವಲ್ಲಿ ನಾನು ಗೆಲುವು ಸಾಧಿಸಿದ್ದು ತೀರಾ ಅಪರೂಪ. ಅಷ್ಟೇ ಅಲ್ಲ, ಯಾರಾದರೂ ನನ್ನಲ್ಲಿ ಸಾಲ ಕೇಳಿದರೆ, ಕೊಡದೇ ಇರುವುದು ಕೂಡಾ ನನಗೆ ತುಂಬಾ ತ್ರಾಸದಾಯಕ.

ಆದರೆ ಕೆಲವರು ಮಾತ್ರ ಸಾಲ ಪಡೆಯುವ ಹಾಗೂ ಸಾಲಕ್ಕೆ ಶೂರಿಟಿ ಹಾಕಿಸುವ ಕಲೆಯಲ್ಲಿ ಪಳಗಿರುತ್ತಾರೆ. ಸಾಲ ಪಡೆಯುವಾಗ ಅವರಾಡುವ ಮಾತುಗಳು, ಮಾಡುವ ಉಪಚಾರ, ತೋರುವ ಪ್ರದರ್ಶನ ಇವುಗಳನ್ನೆಲ್ಲಾ ನೋಡಬೇಕು! ಸಾಲ ಪಡೆದ ಮರುಘಳಿಗೆಯೇ ಆಸಾಮಿ ನಾಪತ್ತೆ!

Taking loan or debt is an art

ನಾನು ದಾವಣಗೆರೆಯಲ್ಲಿ ವರದಿಗಾರನಾಗಿದ್ದಾಗ ನನ್ನ ಸಹೋದ್ಯೋಗಿಯೊಬ್ಬ ಸಾಲ ಪಡೆಯುವಲ್ಲಿ ನಿಸ್ಸೀಮನಾಗಿದ್ದ, ಸಾಲ ಕೇಳುತ್ತಿದ್ದ ನಮೂನೆಯದೇ ಒಂದು ಚಂದ.

ಹಲೋ ಮಿಸ್ಟರ್, ಇಲ್ಲೇ ರಿಂಗ್ ರೋಡ್ ಹತ್ರ ಇದೇನೆ. ಲೋನ್ ಅಂತಾ ತಿಳ್ಕಂಡೇ ಸದ್ಯಕ್ಕೆ ಒಂದೆರಡು ಲ್ಯಾಕ್ಖ್ ತಂದ್‍ಕೊಟ್ಟಿರಿ; ಇನ್ನೂ ಬೇಕಾದ್ರೆ ಮುಂದೆ ಫೋನ್ ಮಾಡ್ತೇನೆ' ಎಂದು ಆತ ತನ್ನದೇ ವರಸೆಯಲ್ಲಿ ಸಾಲ ಕೇಳುವ ಬಗ್ಗೆ ಈಗಲೂ ನಮ್ಮ ಮಿತ್ರರ ವಲಯದಲ್ಲಿ ಹಲವು ಕಥನಗಳಿವೆ.

'ತೊಟ್ಟ ಬಾಣವ ಮರಳಿ ತೊಡೆನು' ಎಂಬುದು ದಾನಶೂರ ಕರ್ಣನ ಶಪಥವಾದರೆ, 'ಒಮ್ಮೆ ಕೇಳಿದ ಶೈಲಿಯಲ್ಲಿ ಮತ್ತೆ ಕೇಳೆನು' ಎಂಬುದು ಈ ಸಾಲಶೂರನ ಶಪಥವಾಗಿದ್ದಿತು.

ಇದನ್ನು ಇಲ್ಲಿ ಏಕೆ ಹೇಳಿದೆನೆಂದರೆ, ಪರಿಚಯವಾದ ಕ್ಷಣದಿಂದ ಇರಿಟೇಟಿಂಗ್ ಫೆಲೊ ಎನಿಸಿದ ಆತನನ್ನ ಕಂಡರೆ ನನಗೆ ಅಷ್ಟಕಷ್ಟೇ ಆಗಿದ್ದರೂ, ಸಹಕಾರ ಸಂಘವೊಂದರಿಂದ ಸಾಲಕ್ಕಾಗಿ ನನ್ನ ಶೂರಟಿ ಹಾಕಿಸುವಲ್ಲಿ ಆತ ಯಶಸ್ವಿಯಾಗಿಬಿಟ್ಟ. ಆತನ ತಾಕತ್ತೇ ಅಂಥದು.

ಆದರೀಗ, ಕಳೆದೆರಡು ವರ್ಷಗಳಿಂದ ಆತ ಬಡ್ಡಿಯೂ ಕಟ್ಟಿಲ್ಲ, ಅಸಲೂ ಕೊಟ್ಟಿಲ್ಲ ಎಂದು ಸಂಘ ಶೂರಿಟಿ ಹಾಕಿದ ನನಗೆ ನೋಟಿಸ್ ಕಳಿಸಿದೆ. 'ಕೋರ್ಟಿಗೆ ಹಾಕಿದರೆ ನೀವೂ ಕಟಕಟೆಗೆಬರಬೇಕಾಗುತ್ತೆ' ಎಂದಿದೆ ನೋಟೀಸು. ಪತ್ರಿಕೆ ಕಟ್ಟುವ ಕಾರ್ಯದೊತ್ತಡದ ನಡುವೆ ಇಂಥ ಅನಗತ್ಯ ಕಿರಿಕಿರಿಗಳನ್ನೂ ಮೈಮೇಲೆಳೆದುಕೊಂಡುಬಿಡುತ್ತೇವೆ ನೋಡಿ ನಾವು... ಅಂದಹಾಗೆ, ಇಂಥವರಿಗೆ ಸಾಲದ ಶೂರಿಟಿ ಹಾಕುವ ಮುನ್ನ ಒಂದಿಷ್ಟು ಯೋಚಿಸಿ...ತೀರಿಸುವ ಬಲ ಇಲ್ಲದಿದ್ದರೆ ಸಾಲವೇ ಶೂಲವಾದೀತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+