ಗುಪ್ತನಿಧಿ ಇಡಲು ಸ್ವಿಸ್ ಬ್ಯಾಂಕೇ ಬೆಸ್ಟ್
ನವದೆಹಲಿ, ನ.13: ವಾಣಿಜ್ಯ ವ್ಯವಹಾರಗಳನ್ನು ಗುಪ್ತವಾಗಿ ನಡೆಸಿಕೊಟ್ಟು ಗ್ರಾಹಕರ ಮೆಚ್ಚುಗೆ ಪಾತ್ರವಾಗುವ ದೇಶಗಳ ಪೈಕಿ ಸ್ಚಿಡ್ಜರ್ಲೆಂಡ್ ಮತ್ತೆ ಅಗ್ರಸ್ಥಾನ ಪಡೆದಿದೆ. ಜಾಗತಿಕ ಪಟ್ಟಿಯಲ್ಲಿ ಭಾರತ 32ನೇ ಸ್ಥಾನದಲ್ಲಿದೆ.
ಸ್ವಿಸ್ ಬ್ಯಾಂಕ್ ಅನೇಕ ದೇಶಗಳ ಕಪ್ಪು ಹಣಗಳ ಸಂಗ್ರಹಿತ ನಿಧಿ ಹೊಂದಿದೆ ಎಂದು ಬ್ಯಾಂಕ್ ಸುರಕ್ಷಿತ ಗೋಡೆ ಕೆಡವಲು ಭಾರತ ಸೇರಿದಂತೆ ಅನೇಕ ದೇಶಗಳು ಯತ್ನಿಸಿದರೂ ಸಫಲವಾಗಿಲ್ಲ. ಸ್ವಿಸ್ ಬ್ಯಾಂಕ್ ಇಂದಿಗೂ ಬೆಸ್ಟ್ ಎನಿಸಿದೆ. ನಂತರದ ಸ್ಥಾನಗಳಲ್ಲಿ ಲಕ್ಸೆಂಬರ್ಗ್, ಹಾಂಗ್ ಕಾಂಗ್, ಕೇಮಾನ್ ದ್ವೀಪ, ಸಿಂಗಪುರ, ಯುಎಸ್, ಲೆಬನಾನ್, ಜರ್ಮನಿ, ಜೆರ್ಸಿ ಹಾಗೂ ಜಪಾನ್ ದೇಶದ ಬ್ಯಾಂಕುಗಳು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಜಾಗತಿಕ ಫೈನಾನ್ಸ್ ಸೀಕ್ರೆಸಿ ಇಂಡೆಕ್ಸ್ ಪ್ರಥಮ ಬಾರಿಗೆ ಈ ಪಟ್ಟಿಯನ್ನು ಹೊರ ಹಾಕಿದೆ.
2012ರಲ್ಲಿ 2.8 ಟ್ರಿಲಿಯನ್ ಯುಎಸ್ ಡಾಲರ್ ಆಸ್ತಿಯನ್ನು ಸ್ವಿಡ್ಜರ್ಲೆಂಡ್ ಸಮರ್ಥವಾಗಿ ನಿರ್ವಹಿಸಿತ್ತು. ಭಾರತದ ವಿಷಯಕ್ಕೆ ಬಂದರೆ 32ನೇ ಶ್ರೇಯಾಂಕ ಪಡೆದಿದೆ. ರಹಸ್ಯ ಕಾಯುವಲ್ಲಿ 100ಕ್ಕೆ 46 ಅಂಕ ಗಳಿಸಿರುವ ಭಾರತ ಇನ್ನೂ ಸಾಗರೋತ್ತರ ವ್ಯವಹಾರ ನಿರ್ವಹಣೆ ಮಟ್ಟಕ್ಕಿಂತ ಶೇ 2 ರಷ್ಟು ಕೆಳಗಿನ ಸ್ಥಾನದಲ್ಲಿದೆ. ಅದರೂ ಭಾರತದಲ್ಲೂ ಪಾರದರ್ಶಕ ವಾಣಿಜ್ಯ ವ್ಯವಹಾರ ಸಾಧ್ಯವಿದೆ ಎಂದು ವರದಿ ಹೇಳಿದೆ.













Click it and Unblock the Notifications