ಬಿಎಸ್ IV ವಾಹನಗಳ ನೋಂದಣಿಗೆ ನಿರ್ಬಂಧ ಹೇರಿದ ಸುಪ್ರೀಂ

ನವದೆಹಲಿ, ಜುಲೈ 31: ವಾಯುಮಾಲಿನ್ಯ ಪರಿಮಿತಿ ಮಾನದಂಡ ಬಿಎಸ್ IV ಜಾರಿಗೆ ಬರುವ ಹಿನ್ನೆಲೆಯಲ್ಲಿ ಬಿಎಸ್ IV ವಾಹನಗಳ ನೋಂದಣಿ ಮತ್ತು ಮಾರಾಟವನ್ನು ಮುಂದಿನ ಆದೇಶ ಬರುವವರೆಗೂ ಸುಪ್ರೀಂಕೋರ್ಟ್ ನಿಷೇಧಿಸಿದೆ.

ಮಾರ್ಚ್‌ ತಿಂಗಳಿನಲ್ಲಿ ಕೊರೊನಾವೈರಸ್ ನಿರ್ಬಂಧದ ನಡುವೆ, ಲಾಕ್ಡೌನ್ ಸಂದರ್ಭಗಳಲ್ಲಿ ಈ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಇದರಿಂದ ಗೊಂದಲ ಹೆಚ್ಚಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಬಿಎಸ್ -4 ವಾಹನಗಳ ನೋಂದಣಿ, ಮಾರಾಟಕ್ಕೆ ಮಾರ್ಚ್ 31 ಗಡುವು ನೀಡಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ಹಲವು ರಾಜ್ಯಗಳು ಪಶ್ನಿಸಿದ್ದವು. ಹೀಗಾಗಿ, ಲಾಕ್ ಡೌನ್ ನಂತರ ಮತ್ತೆ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಶೇಕಡಾ 10ರಷ್ಟು ವಾಹನಗಳ ಮಾರಾಟ ಮಾಡುವಂತೆ ಕೋರ್ಟ್ ನೀಡಿದ್ದ ಆದೇಶವನ್ನು ಗಾಳಿಗೆ ತೂರಲಾಗಿದೆ ಎಂದು ಕೋರ್ಟ್ ಗಮನಕ್ಕೆ ಬಂದಿದೆ. ಹೀಗಾಗಿ, ಬಿಎಸ್ IV ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿರ್ಬಂಧಿಸಲಾಗಿದೆ.

Supreme Court bars registration of BS-IV vehicles

17 ವರ್ಷ ಇದೇ ಮೊದಲ ಬಾರಿಗೆ ನಷ್ಟ ಅನುಭವಿಸಿದ ಮಾರುತಿ-ಸುಜುಕಿ

ಈ ಆದೇಶದ ಪ್ರಕಾರ, ಮಾರ್ಚ್ 31, 2020 ರ ನಂತರ ಮಾರಾಟವಾದ ಬಿಎಸ್ -4 ವಾಹನಗಳ ನೋಂದಣಿ ಸಾಧ್ಯವಿಲ್ಲ. ಜುಲೈ 9 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ಸರ್ಕಾರಗಳು ಬದ್ಧವಾಗಿ, ಪರಿಸರ ಹಿತದೃಷ್ಟಿಯಿಂದ ಹಳೆ ವಾಹನಗಳ ನೋಂದಣಿ, ಮಾರಾಟದ ಮೇಲೆ ನಿಯಂತ್ರಣ ಹೊಂದಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+