Google: ಗೂಗಲ್ ಉದ್ಯೋಗಿಗಳಿಗೆ ಪ್ರತಿದಿನ ರಾಜ ಔತಣ- ಯಾಕೆ ಗೊತ್ತಾ?
ವಿಶ್ವದಲ್ಲಿ ಗೂಗಲ್ ಮುಂಚೂಣಿಯಲ್ಲಿರುವ ಸರ್ಚ್ ಇಂಜಿನ್. ಗೂಗಲ್ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ. ಅಲ್ಲದೆ ಇದು ತನ್ನ ಉದ್ಯೋಗಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ. ಈ ಸೌಲಭ್ಯಗಳಲ್ಲಿ ಉದ್ಯೋಗಿಗಳಿಗೆ ಪ್ರತಿದಿನ ನೀಡುವ ರಾಜ ಔತಣ ಕೂಡ ಸೇರಿದೆ. ಹೀಗಾಗಿ ಇಲ್ಲಿ ಕೆಲಸ ಮಾಡಲು ಹಲವಾರು ಜನ ಆಸೆ ಪಡುತ್ತಾರೆ. ಅಷ್ಟಕ್ಕೂ ಗೂಗಲ್ ತನ್ನ ಉದ್ಯೋಗಿಗಳಿಗೆ ನಿತ್ಯವೂ ಉಚಿತ ರಾಜ ಔತಣ ನೀಡುವುದು ಯಾಕೆ? ಈ ಪ್ರಶ್ನೆಗೆ ಗೂಗಲ್‌ನ ಸಿಇಒ ಸುಂದರ್ ಪಿಚೈ ವಿಶೇಷ ರೀತಿಯಲ್ಲಿ ಉತ್ತರ ನೀಡಿದ್ದಾರೆ.
ತನ್ನ ಉದ್ಯೋಗಿಗಳಿಗೆ ನೀಡುವ ಉಚಿತ ಆಹಾರ ಕೂಪನ್‌ಗಳ ಕುರಿತು ಸುಂದರ್ ಪಿಚೈ ಮಹತ್ವದ ಹೇಳಿಕೆ ನೀಡಿದ್ದಾರೆ. ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರು ಆಹಾರ ಕೂಪನ್‌ಗಳನ್ನು ಒದಗಿಸುವ ಹಿಂದಿನ ಕಾರಣವನ್ನು ನೀಡಿದ್ದಾರೆ. "The David Rubenstein Show: Peer to Peer Conversation" ನಲ್ಲಿ ಗೂಗಲ್ ತನ್ನ ಉದ್ಯೋಗಿಗಳಿಗೆ ಉಚಿತ ಊಟವನ್ನು ಯಾಕೆ ನೀಡುತ್ತದೆ ಎಂಬುದರ ಕುರಿತು ಸುಂದರ್ ಪಿಚೈ ಅವರು ವಿವರಿಸಿದ್ದಾರೆ.

ಇಂದಿನ ಪೀಳಿಗೆಯಲ್ಲಿ ಚಿಕ್ಕ ಮಗುವಿಗೂ ಗೂಗಲ್ ಎಂದರೆ ಏನು ಅಂತ ಗೊತ್ತಿದೆ. ಗೂಗಲ್‌ನಲ್ಲಿ ಉದ್ಯೋಗ ಪಡೆಯಬೇಕು ಎಂಬುದು ಹಲವರ ಕನಸು. ಗೂಗಲ್ ಸಿಇಒ ಆಗಿರುವ ಸುಂದರ್ ಪಿಚೈ ಕೂಡ ನಮ್ಮ ಭಾರತೀಯ ಮೂಲದವರು. ಇವರು ಗೂಗಲ್ ಬಗ್ಗೆ ಕೆಲ ವಿಷಯಗಳನ್ನು ವಿವರಿಸಿದ್ದಾರೆ.
ಹೌದು.. ಗೂಗಲ್ ತನ್ನ ಉದ್ಯೋಗಿಗಳಿಗೆ ಉಚಿತ ಆಹಾರ ಕೂಪನ್‌ಗಳನ್ನು ಒದಗಿಸುತ್ತದೆ. ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸುತ್ತದೆ. ಇತ್ತೀಚೆಗೆ ಗೂಗಲ್ ಸಿಇಒ ಸುಂದರ್ ಪಿಚಾರ್ ಅವರು ಉಚಿತ ಆಹಾರದ ಆಧಾರದ ಮೇಲೆ ಎಲ್ಲಾ ಉದ್ಯೋಗಿಗಳು ಒಟ್ಟಾಗಿ ಕೆಫೆಯಲ್ಲಿ ಒಟ್ಟಿಗೆ ತಿನ್ನುವ ಪ್ರಯೋಜನಗಳನ್ನು ವಿವರಿಸಿದರು.
ಇತ್ತೀಚೆಗೆ, "The David Rubenstein Show: Peer to Peer Conversation" ನಲ್ಲಿ, ಸುಂದರ್ ಪಿಚೈ ಉದ್ಯೋಗಿಗಳಿಗೆ ಉಚಿತ ಊಟವನ್ನು ಒದಗಿಸುವುದು ದೊಡ್ಡ ವೆಚ್ಚವಲ್ಲ. ಆದರೆ ಇದು ಕಂಪನಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ ಎಂದು ಹೇಳಿದರು. ಉಚಿತ ಊಟವು ಉದ್ಯೋಗಿಗಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಅವರು ಪರಸ್ಪರ ಬಾಂಧವ್ಯಕ್ಕೆ ಅವಕಾಶವನ್ನು ನೀಡುತ್ತದೆ ಎಂದು ಅವರು ವಿವರಿಸಿದ್ದಾರೆ.
ಜೊತೆಗೆ ಕೆಫೆಯಲ್ಲಿ ಸ್ನೇಹಿತರ ಜೊತೆ ಹರಟೆ ಹೊಡೆಯುವುದರಿಂದ ಹೊಸ ಐಡಿಯಾಗಳು ಬರುತ್ತವೆ ಎಂದರು. ಈ ಆಲೋಚನೆಗಳು ಸಂಸ್ಥೆಗೆ ಪ್ರಯೋಜನವನ್ನು ನೀಡುತ್ತವೆ ಮತ್ತು ಈ ಆಲೋಚನೆಗಳು ಉಚಿತ ಆಹಾರ ನೀಡುವ ವೆಚ್ಚವನ್ನು ಮೀರಿಸುತ್ತದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ತಾನು ಕೂಡ ಕೆಫೆಗಳಿಗೆ ಹೋಗಿ ಜನರೊಂದಿಗೆ ಮಾತನಾಡುತ್ತಿದ್ದೆ ಮತ್ತು ಆ ಮೂಲಕ ಹಲವು ವಿಚಾರಗಳನ್ನು ಪಡೆದುಕೊಂಡಿದ್ದೇನೆ ಎಂದು ಸುಂದರ್ ಪಿಚೈ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದರಿಂದ ಸೃಜನಶೀಲತೆಯೂ ಹೆಚ್ಚುತ್ತದೆ ಎಂದಿದ್ದಾರೆ.
ಅಲ್ಲದೆ ಅವರು ಇದೇ ವೇಳೆ ಸುಮಾರು 90% ಅರ್ಜಿದಾರರಿಗೆ ಗೂಗಲ್‌ನಲ್ಲಿ ಉದ್ಯೋಗಾವಕಾಶಗಳನ್ನು ನೀಡಲಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಕಂಪ್ಯೂಟರ್ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವ ಮತ್ತು ಡೀಬಗ್ ಮಾಡುವುದು ಹಾಗೂ ಸುಧಾರಿಸುವುದು ಹೇಗೆ ಎಂದು ತಿಳಿದಿರುವವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
ಗೂಗಲ್ ಸೂಪರ್‌ಸ್ಟಾರ್ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಹುಡುಕುತ್ತಿದೆ. ಕ್ರಿಯಾತ್ಮಕ ಮತ್ತು ಸ್ಪರ್ಧಾತ್ಮಕ ತಂಡದ ಪರಿಸರದಲ್ಲಿ ಉತ್ತಮ ಸಾಧನೆ ಮಾಡುವವರನ್ನು ಗೂಗಲ್ ಗೌರವಿಸುತ್ತದೆ. ಹಾಗೆ ಮಾಡುವ ಮೂಲಕ, ಪ್ರಮುಖ ದೊಡ್ಡ ಟೆಕ್ ಕಂಪನಿಗಳಲ್ಲಿ ಉದ್ಯೋಗಾಕಾಂಕ್ಷಿಗಳು ಏನನ್ನು ಕಂಡುಕೊಳ್ಳುತ್ತಾರೆ ಎಂಬ ಕಲ್ಪನೆಗಳ ಆಧಾರದ ಮೇಲೆ Google ನೇಮಕಾತಿ ಮಾಡಿಕೊಳ್ಳುತ್ತದೆ ಎಂದಿದ್ದಾರೆ.












Click it and Unblock the Notifications