3 ನೇ ತ್ರೈಮಾಸಿಕ: ಎಸ್ ಬಿಎಂಗೆ 96 ಕೋಟಿ ರೂ. ಲಾಭ
ಬೆಂಗಳೂರು, ಜ. 22 : ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತನ್ನ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದು ಶೇ. 13 ರಷ್ಟು ಲಾಭ ಗಳಿಸಿದೆ. ಡಿಸೆಂಬರ್ 31 ಕ್ಕೆ ಕೊನೆಗೊಂಡ ವರದಿಯಂತೆ ನಿವ್ವಳ 96 ಕೋಟಿ ರೂ.ಲಾಭ ಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 85 ಕೋಟಿ ರೂ. ಲಾಭ ಗಳಿಸಿದ್ದು ಈ ಬಾರಿ ಹೆಚ್ಚುವರಿ 11 ಕೋಟಿ ಗಳಿಸಿದೆ. ಬ್ಯಾಂಕ್ ನ ಒಟ್ಟು ಆದಾಯದಲ್ಲೂ ಹೆಚ್ಚಳವಾಗಿದ್ದು ಕಳೆದ ವರ್ಷ 1,730 ಕೋಟಿ ರೂ. ಇದ್ದ ಆದಾಯ ಈ ಬಾರಿ 1,888 ಕೋಟಿ ರೂ. ಗೆ ತಲುಪಿದೆ.[ಬೆಂಗಳೂರು ಷೇರು ವಿನಿಮಯ ಕೇಂದ್ರದ ವಹಿವಾಟು ಬಂದ್]

ಅಲ್ಲದೇ ಆಪರೆಟಿಂಗ್ ಪ್ರಾಫಿಟ್ ಸಹ ಹೆಚ್ಚಾಗಿದ್ದು ಶೇ. 12.7 ರಷ್ಟು ಹೆಚ್ಚಾಗಿದೆ. ಬಡ್ಡಿ ಮರುಪಾವತಿಯಲ್ಲೂ ಏರಿಕೆ ಕಂಡುಬಂದಿದ್ದು ಶೇ. 6.6 ಲಾಭದೊಂದಿಗೆ 493 ಕೋಟಿ ರೂ. ಲಾಭವಾಗಿದೆ.
ಬ್ಯಾಂಕ್ ತನ್ನ ನಿಜ ಬಂಡವಾಳದಲ್ಲಿ ಕಳೆದ ವರ್ಷ ಇಳಿಕೆ ಮಾಡಿತ್ತು. ಅಲ್ಲದೇ ಎಸ್ ಬಿಎಂ ನ ಷೇರುಗಳ ಮುಖಬೆಲೆ ಮಾರುಕಟ್ಟೆಯಲ್ಲಿ 573.40 ರೂ. ಇದ್ದು ಹೆಚ್ಚಿನ ಲಾಭ ಗಳಿಸುತ್ತಿವೆ.












Click it and Unblock the Notifications