Get Updates
Get notified of breaking news, exclusive insights, and must-see stories!

ಬೆಂಗಳೂರು-ವಿಜಯವಾಡ ಸೇರಿದಂತೆ ಸ್ಪೈಸ್ ಜೆಟ್ ಹೊಸ ಮಾರ್ಗಗಳು

ನವದೆಹಲಿ, ಫೆಬ್ರವರಿ 27: ದೇಶದ ಪ್ರಮುಖ ವಿಮಾನಯಾನ ಸ್ಪೈಸ್ ಜೆಟ್ ಹೊಸ ದೇಶಿ ಮಾರ್ಗಗಳ ಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ ತಿಂಗಳಿನಲ್ಲಿ ಈ ಹೊಸ ಮಾರ್ಗಗಳಲ್ಲಿ ವಿಮಾನಯಾನ ಸೌಲಭ್ಯ ಒದಗಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಬೆಂಗಳೂರು- ವಿಜಯವಾಡ, ಶ್ರೀನಗರ-ಮುಂಬೈ ಸೇರಿದಂತೆ 11 ಹೊಸ ದೇಶಿ ವಿಮಾನಯಾನ ಸಂಪರ್ಕವನ್ನು ಸ್ಪೈಸ್ ಜೆಟ್ ಒದಗಿಸಲಿದೆ.

ಮಾರ್ಚ್ ತಿಂಗಳಿನಿಂದ ಮುಂಬೈ-ಲೆಹ್, ಲೆಹ್-ಶ್ರೀನಗರ ಹಾಗೂ ಶ್ರೀನಗರ -ಮುಂಬೈ ಮಾರ್ಗದಲ್ಲಿ ನಾನ್ ಸ್ಟಾಪ್ ವಿಮಾನ ಸಂಚರಿಸಲಿದೆ. ಇದಲ್ಲದೆ ಮುಂಬೈ -ರಾಜ್ ಕೋಟ್, ದೆಹಲಿ-ಧರ್ಮಶಾಲ, ಬೆಂಗಳೂರು- ವಿಜಯವಾಡ ವಿಭಾಗದಲ್ಲೂ ಹೊಸ ಮಾರ್ಗ ಆರಂಭವಾಗಲಿದೆ.

ಒಟ್ಟಾರೆ, ಮಾರ್ಚ್ 29ರ ವೇಳೆಗೆ ಒಟ್ಟು 11 ಹೊಸ ಮಾರ್ಗಗಳಲ್ಲಿ ವಿಮಾನ ಸಂಚರಿಸಲಿದೆ, ಎಲ್ಲಾ ವಿಮಾನಗಳು ಪ್ರತಿದಿನ ಪ್ರಯಾಣಿಕರಿಗೆ ಲಭ್ಯವಿರಲಿದೆ, ಬೆಂಗಳೂರು-ವಿಜಯವಾಡ ವಿಮಾನ ಬುಧವಾರದಂದು ಮಾತ್ರ ಲಭ್ಯವಿರುವುದಿಲ್ಲ ಎಂದು ಸ್ಪೈಸ್ ಜೆಟ್ ಹೇಳಿದೆ.

SpiceJet to start 11 new flights in March

ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಬೋಯಿಂಗ್ 737 ಹಾಗೂ ಬಾಂಬಾರ್ಡಿಯರ್ ಕ್ಯೂ 400 ಏರ್ ಕ್ರಾಫ್ಟ್ ಗಳನ್ನು ಈ ಮಾರ್ಗಗಳಲ್ಲಿ ಬಳಸಲಿದೆ. ಮಾರ್ಚ್ ತಿಂಗಳಿನಲ್ಲಿ ಈ ಹೊಸ 11 ಮಾರ್ಗ ಸೇರಿದಂತೆ 20 ಹೊಸ ಮಾರ್ಗಗಳಲ್ಲಿ ವಿಮಾನಗಳನ್ನು ಕಳಿಸಲು ಸಂಸ್ಥೆ ಮುಂದಾಗಿದೆ.

ಕಡಿಮೆ ಬಜೆಟ್ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ 63 ತಾಣಗಳಿಗೆ ಪ್ರತಿದಿನ 600 ವಿಮಾನಗಳನ್ನು ಕಳಿಸುತ್ತಿದ್ದು, ಈ ಪೈಕಿ 54 ದೇಶಿ ನಿಲ್ದಾಣಗಳಿವೆ.(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+