ಸ್ಪೈಸ್ ಜೆಟ್ ನಿಂದ ಸಕತ್ ಆಫರ್ ಬಂದಿದೆ

ಬೆಂಗಳೂರು, ಆ.25: ದೇಶಿ ನಾಗರೀಕ ವಿಮಾನಯಾನದಲ್ಲಿ ಮತ್ತೊಮ್ಮೆ ಬೆಲೆ ಸಮರ ಆರಂಭವಾಗುವ ಲಕ್ಷಣಗಳು ಕಂಡು ಬಂದಿದೆ. ಸ್ಪೈಸ್ ಜೆಟ್ ಸಂಸ್ಥೆಯ ವಿಮಾನ ಪ್ರಯಾಣ ದರಗಳು 1,888(ತೆರಿಗೆ ಸೇರಿ) ರುಪಾಯಿಯಿಂದ ಆರಂಭ ಮಾಡುತ್ತಿದೆ.

ಆದರೆ, ಇಷ್ಟು ಕಡಿಮೆ ದರದಲ್ಲಿ ವಿಮಾನದ ಟಿಕೆಟ್ ಪಡೆಯಲು ಕೆಲ ನಿಯಮಗಳನ್ನು ಹಾಕಲಾಗಿದೆ. ಸಂಸ್ಥೆಯ ಪ್ರಕಟಣೆ ಪ್ರಕಾರ ಆಗಸ್ಟ್ 25 ರಿಂದ ಆಗಸ್ಟ್ 27,2014ರ ತನಕ ಈ ಸೌಲಭ್ಯ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಮಾತ್ರ ಟಿಕೆಟ್ ಬುಕ್ ಮಾಡಬಹುದಾಗಿದೆ. ಆಗ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ.

ನಿಯಮದ ಪ್ರಕಾರ ಬುಕ್ಕಿಂಗ್ ಆಗಿದ್ದರೆ ನೀವು ನಿಮ್ಮ ಪ್ರಯಾಣವನ್ನು ಸೆಪ್ಟಂಬರ್ 25ರಿಂದ ಜನವರಿ 15ರೊಳಗೆ ಮಾಡಬಹುದಾಗಿದೆ. ಈ ಸೌಲಭ್ಯ ಸೀಮಿತ ಸಂಖ್ಯೆಯ ಟಿಕೆಟ್ ಗಳಿಗೆ ಮಾತ್ರ ಲಭ್ಯವಿರುವುದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಸ್ಪೈಸ್ ಜೆಟ್ ಹೇಳಿದೆ. ಅಲ್ಲದೆ ಗ್ರೂಪ್ ಬುಕಿಂಗ್ ಗೂ ಅವಕಾಶ ನೀಡಲಾಗಿಲ್ಲ. ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯದ ಪರಿಚಯ ಹಾಗೂ ಅದರ ಕೊಡುಗೆಗಳನ್ನು ಗ್ರಾಹಕರಿಗೆ ತಲುಪಿಸಲು ಈ ಕ್ರಮ ಕೈಗೊಂಡಿರುವುದಾಗಿ ಸಂಸ್ಥೆ ಹೇಳಿದೆ.

SpiceJet offers new passenger scheme

ಮೈಸೂರಿನ ವಿಮಾನ ರದ್ದು: ದಸರಾ ನೋಡಲು ಸ್ಪೈಸ್ ಜೆಟ್ ಏರಲು ಸಿದ್ಧರಾಗಿದ್ದ ಪ್ರಯಾಣಿಕರಿಗೆ ಕಹಿ ಸುದ್ದಿ ಕಾದಿದೆ. ದಸರಾ ಸಿದ್ಧತೆಯಲ್ಲಿ ತೊಡಗಿರುವ ಮೈಸೂರಿನ ಜನರಿಗೆ ಕಹಿ ಸುದ್ದಿ ಕಾದಿದೆ. ಬೆಂಗಳೂರು-ಮೈಸೂರು ನಡುವೆ ವಿಮಾನಯಾನ ಸೇವೆ ನೀಡುತ್ತಿರುವ ಸ್ಪೈಸ್ ಜೆಟ್ ಸೆ.1ರಿಂದ ತನ್ನ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಸೆ.25ರಿಂದ ಅ.4ರ ತನಕ ಈ ಬಾರಿಯ ದಸರಾ ಉತ್ಸವ ನಡೆಯಲಿದೆ. ವಿಮಾನಯಾನ ಸೇವೆ ಸ್ಥಗಿತಗೊಂಡರೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ತೊಂದರೆ ಉಂಟಾಗಲಿದೆ ಎಂದು ಗ್ರಾಹಕರಿಂದ ಮನವಿ ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಸ್ಪೈಸ್ ಜೆಟ್ ಮೈಸೂರು ಸೇವೆಯನ್ನು ಸ್ಥಗಿತಗೊಳಿಸಿದೆ. [ಮೈಸೂರು ವಿಮಾನ ನಿಲ್ದಾಣದ ಕಥೆ] (ಐಎಎನ್ ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+