ಯಾರಿಗುಂಟು ಯಾರಿಗಿಲ್ಲ, 599 ರೂ. ಗೆ ವಿಮಾನ ಪ್ರಯಾಣ

ಮುಂಬೈ, , ಫೆ. 11: ವಿಮಾನ ಪ್ರಯಾಣ ದರ ರೈಲಿಗಿಂತ ಕಡಿಮೆ! ಕೇವಲ 599 ರೂ. ನೀಡಿ ದೇಶದ ಒಳಗೆ ವಿಮಾನದಲ್ಲಿ ಸಂಚರಿಸಬಹುದು. ಹೌದು... ಈ ಇಂಥದ್ದೊಂದು ಕೊಡುಗೆಯನ್ನು ಸ್ಪೈಸ್ ಜೆಟ್ ನೀಡಿದೆ.

ದರ ಸಮರಕ್ಕೆ ನಾಂದಿ ಹಾಡಿರುವ ಸ್ಪೈಸ್ ಜೆಟ್ ಕೇವಲ 599 ರೂ.ಗೆ ದೇಶದ ಒಳಗಡೆ ವಿಮಾನ ಪ್ರಯಾಣದ ಯೋಗ ನೀಡಿದೆ. ಈ ಹಿಂದೆ ಪ್ರೇಮಿಗಳ ದಿನಕ್ಕೆ 1,599 ರೂ. ನೀಡಿ ವಿಮಾನ ಏರಿ ಎಂದಿದ್ದ ಸಂಸ್ಥೆ ಈಗ ಒಂದು ಸಾವಿರ ರೂ. ಕಡಿಮೆ ಮಾಡಿ ಒನ್ ವೇ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. 3,499 ರೂ. ದೇಶದಿಂದ ದೇಶಕ್ಕೂ ಹಾರಾಡಬಹುದು.[ಪ್ರೇಮಿಗಳ ದಿನದಂದು ಸ್ಪೈಸ್ ಜೆಟ್ ನಲ್ಲಿ ಹಾರಾಡಿ]

spicejet,

ಟು ವೇ ಬುಕಿಂಗ್ ಗೆ ಮಾತ್ರ ವಿಮಾನಯಾನ ಕಂಪನಿಗಳು ರಿಯಾಯಿತಿ ನೀಡುತ್ತಿದ್ದವು. ಆದರೆ ಈಗ ಸ್ಪೈಸ್ ಜೆಟ್ ಎಲ್ಲ ದಾಖಲೆಗಳನ್ನು ಮುರಿದು ಹೊಸ ಸಂಪ್ರದಾಯ ಆರಂಭಿಸಿದೆ. ಜುಲೈ 1 ರಿಂದ ಅಕ್ಟೋಬರ್ 24 ರವರೆಗೆ ಪ್ರಯಾಣಿಸುವವರಿಗೆ ಈ ದರ ಲಭ್ಯವಾಗಲಿದೆ. ಟಿಕೆಟ್ ಬುಕಿಂಗ್ ಫೆಬ್ರವರಿ 13 ರವರೆಗೆ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.[1,499 ರೂ. ಕೊಟ್ಟರೆ ಇಂಡಿಗೋ ವಿಮಾನ ಏರಬಹುದು]

ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಹಕರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸಲು ವಿಮಾನ ಯಾನ ಸಂಸ್ಥೆಗಳು ದರ ಸಮರಕ್ಕೆ ಮುಂದಾಗಿದ್ದು ನಾಳೆ ಮತ್ತೊಂದು ಕಂಪನಿ ದರ ಕಡಿಮೆ ಮಾಡಿದರೂ ಆಶ್ಚರ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+