• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೇಗದ ಇಂಟರ್ನೆಟ್: ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಯೋಜನೆಗಳ ಮಾಹಿತಿ ಇಲ್ಲಿದೆ

|

ನವದೆಹಲಿ, ನವೆಂಬರ್ 26: ಸದ್ಯ ಈಗೇನಿದ್ರೂ ವೇಗದ ಇಂಟರ್ನೆಟ್‌ ಕಡೆಗೆ ಗ್ರಾಹಕರು ಆಸಕ್ತಿಯನ್ನು ಹೆಚ್ಚಿಸಿದ್ದಾರೆ. ಅದರಲ್ಲೂ ವರ್ಕ್‌ ಫ್ರಮ್ ಹೋಮ್ ಹೆಚ್ಚಿದ ಮೇಲೆ ವೇಗದ ಇಂಟರ್ನೆಟ್‌ಗೆ ಡೇಟಾದ ಬೇಡಿಕೆ ಹೆಚ್ಚಿದೆ.

ನಾನಾ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ತಮ್ಮ ಹೊಸ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಘೋಷಿಸಿವೆ. ಟೆಲಿಕಾಂ ಕಂಪನಿಗಳು ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ಡೇಟಾ ಮತ್ತು ವಾಯ್ಸ್ ಕರೆಗಳಂತಹ ಮೂಲ ಸೌಲಭ್ಯಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸುತ್ತವೆ. ಹೀಗಾಗಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವಾ ಪೂರೈಕೆದಾರರಲ್ಲಿ ಸ್ಪರ್ಧೆಯು ಗಮನಾರ್ಹವಾಗಿ ಹೆಚ್ಚಾಗಿದೆ.

ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?

1000 ರೂ.ಗಿಂತ ಕಡಿಮೆ ಬ್ರಾಡ್‌ಬ್ಯಾಂಡ್ ಯೋಜನೆ

1000 ರೂ.ಗಿಂತ ಕಡಿಮೆ ಬ್ರಾಡ್‌ಬ್ಯಾಂಡ್ ಯೋಜನೆ

ಗ್ರಾಹಕರು ಯಾವಾಗಲೂ ಕಡಿಮೆ ಬೆಲೆಗೆ ಹೆಚ್ಚಿನ ಲಾಭದ ಕೊಡುಗೆಯನ್ನು ಪಡೆಯಲು ಬಯಸುತ್ತಾರೆ. ಹೀಗಾಗಿಯೇ ಏರ್‌ಟೆಲ್‌ ಗ್ರಾಹಕರನ್ನು ಸೆಳೆಯಲು ಎಕ್ಸ್‌ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಕಟಿಸಿದೆ.

ಜಿಯೋ ಫೈಬರ್, ಬಿಎಸ್‌ಎನ್‌ಎಲ್ ಸೇರಿದಂತೆ ಇತರ ಸ್ಥಳೀಯ ಇಂಟರ್ನೆಟ್ ಪೂರೈಕೆದಾರರಿಂದ 1000 ರೂ.ಗಿಂತ ಕಡಿಮೆ ಬ್ರಾಡ್‌ಬ್ಯಾಂಡ್ ಯೋಜನೆಗಳಿಗಿಂತ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬ್ರಾಡ್‌ಬ್ಯಾಂಡ್‌ನತ್ತ ಗ್ರಾಹಕರು ಮುಖ ಮಾಡಿದ್ದಾರೆ.

ಏರ್‌ಟೆಲ್‌ನಿಂದ ಐದು ವಿಭಿನ್ನ ಯೋಜನೆಗಳು

ಏರ್‌ಟೆಲ್‌ನಿಂದ ಐದು ವಿಭಿನ್ನ ಯೋಜನೆಗಳು

ಪ್ರಸ್ತುತ ಭಾರತದಲ್ಲಿ ಏರ್‌ಟೆಲ್ ಎಕ್ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯ 5 ವಿಭಿನ್ನ ಯೋಜನೆಗಳು ಲಭ್ಯವಿದೆ. ಅದರಲ್ಲಿ ಆರಂಭಿಕ ಯೋಜನೆ 499 ರೂ ಮತ್ತು ನಂತರ 799, 999, 1,499 ರೂ ಆಗಿದ್ದು ಗರಿಷ್ಠ 3,999 ಟಾಪ್ ಯೋಜನೆ ಆಗಿದೆ.

ರಿಲಯನ್ಸ್ ಜಿಯೋ ಕೂಡ ಇದೇ ರೀತಿಯ ಯೋಜನೆಯನ್ನು ನೀಡುತ್ತದೆ. ಮೂಲ ಬಳಕೆದಾರರಿಗೆ 499 ಮತ್ತು 799 ರೂ ಮಾಸಿಕ ಯೋಜನೆಗಳನ್ನು ಹೊಂದಿದೆ. ಪ್ರೈಮ್ ವಿಡಿಯೋ ಸೇರಿದಂತೆ ಇತರ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆಯನ್ನು ಬಯಸುವವರಿಗೆ 999 ರೂ.ಗಳ ಬ್ರಾಡ್‌ಬ್ಯಾಂಡ್ ಯೋಜನೆ ಸೂಕ್ತವಾಗಿದೆ.

ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ 999 ರೂ ಯೋಜನೆ ಪ್ರಯೋಜನ

ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ 999 ರೂ ಯೋಜನೆ ಪ್ರಯೋಜನ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್‌ನ 999 ರೂ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ, ಬಳಕೆದಾರರು 200Mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದೊಂದಿಗೆ ಅನ್‌ಲಿಮಿಟೆಡ್ ಡೇಟಾವನ್ನು ಪಡೆಯುತ್ತಾರೆ. ಆದಾಗ್ಯೂ, ಬಳಕೆದಾರರು ಪ್ರತಿ ತಿಂಗಳು 3300 ಜಿಬಿ ಡೇಟಾವನ್ನು ಮಾತ್ರ ಪಡೆಯುತ್ತಾರೆ. ಇದರೊಂದಿಗೆ ಬಳಕೆದಾರರು ಲ್ಯಾಂಡ್‌ಲೈನ್ ಮೂಲಕ ಅನಿಯಮಿತ ಟಾಕ್‌ಟೈಮ್ ಪಡೆಯಬಹುದು.

ಇವೆಲ್ಲವುಗಳ ಜೊತೆಗೆ, ಬಳಕೆದಾರರು ಏರ್‌ಟೆಲ್ ಡಿಜಿಟಲ್ ಟಿವಿ ಎಚ್‌ಡಿ ಪ್ಯಾಕ್ ಚಂದಾದಾರಿಕೆಯನ್ನು ಒಂದು ತಿಂಗಳು, ಜಿ 5 ಪ್ರೀಮಿಯಂ ಚಂದಾದಾರಿಕೆಯನ್ನು 999 ರೂಗಳಿಗೆ, ಅಮೆಜಾನ್ ಚಂದಾದಾರಿಕೆಯನ್ನು 999 ರೂಗಳಿಗೆ ಮತ್ತು ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತಾರೆ.

ಜಿಯೋಫೈಬರ್ ಯೋಜನೆ 999 ರೂ

ಜಿಯೋಫೈಬರ್ ಯೋಜನೆ 999 ರೂ

ಜಿಯೋ ಫೈಬರ್‌ನ 999 ರೂ.ಗಳ ಯೋಜನೆಗೆ ಗೋಲ್ಡ್‌ ಎಂದು ಹೆಸರಿಸಲಾಗಿದೆ. ಈ ಯೋಜನೆಯಡಿಯಲ್ಲಿ ಗ್ರಾಹಕರು 150Mbps ವೇಗದಲ್ಲಿ ಇಂಟರ್ನೆಟ್ ಪಡೆಯುತ್ತಾರೆ. ವಿಶೇಷವೆಂದರೆ ಡೌನ್‌ಲೋಡ್ ಮತ್ತು ಅಪ್‌ಲೋಡ್ ಮಾಡುವ ವೇಗ ಎರಡೂ ಸಮಾನವಾಗಿರುತ್ತದೆ. ಜಿಎಸ್‌ಟಿಯೊಂದಿಗೆ ಈ ಯೋಜನೆಗೆ 1,178 ರೂ. ಆಗಿದ್ದು ವ್ಯಾಲಿಡಿಟಿ 30 ದಿನಗಳು. 3,300 ಜಿಬಿ ಡೇಟಾದ ಹೊರತಾಗಿ, ಈ ಯೋಜನೆಯು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಜಿ 5 ಪ್ರೀಮಿಯಂ, ಸೋನಿಲೈವ್, ಜಿಯೋ ಸಿನೆಮಾ ಮತ್ತು ಜಿಯೋ ಸಾವ್ನ್‌ನಂತಹ ಅನೇಕ ಅಪ್ಲಿಕೇಶನ್‌ಗಳಿಗೆ ಅನಿಯಮಿತ ಕರೆ ಮತ್ತು ಚಂದಾದಾರಿಕೆಯನ್ನು ನೀಡುತ್ತದೆ.

English summary
In this article explained Airtel xstream broadband Different plans. explained data, price, and benefits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X