ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರೀ ಬಿಡ್ ಪೈಪೋಟಿ: ಮೊಬೈಲ್ ಕರೆ ದುಬಾರಿ?

|
Google Oneindia Kannada News

ನವದೆಹಲಿ, ಫೆ 15: ಮೊಬೈಲ್ ತರಂಗಾಂತರಂಗದ (ಸ್ಪೆಕ್ಟ್ರಂ) ಸರಕಾರೀ ಹರಾಜಿನಲ್ಲಿ ನಂಬರ್ ಒನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ದೇಶದ ಮೂರು ಪ್ರಮುಖ ಮೊಬೈಲ್ ಕಂಪೆನಿಗಳ ಮೇಲಾಟದಿಂದಾಗಿ ಮೊಬೈಲ್ ಕರೆಗಳು ದುಬಾರಿಯಾಗುವ ಸಾಧ್ಯತೆಗಳಿವೆ.

ದೇಶದ ಮೂರು ಪ್ರತಿಷ್ಠಿತ ಮೊಬೈಲ್ ಕಂಪೆನಿಗಳಾದ ಭಾರ್ತಿ ಏರ್ ಟೆಲ್ ಲಿಮಿಟೆಡ್, ರಿಲಯನ್ಸ್ ಜಿಯೋ ಇನ್ಫೋಕಾಂ ಮತ್ತು ವೋಡೊಫೋನ್ ಸಂಸ್ಥೆಗಳು ಸರಕಾರೀ ತರಂಗಾಂತರಂಗದ (1800 Mhz band) ಮೇಲೆ ಭಾರೀ ಪ್ರಮಾಣದ ಬಿಡ್ ಮಾಡುತ್ತಿರುವುದರಿಂದ ಅದರ ನೇರ ಪರಿಣಾಮ ಗ್ರಾಹಕರಿಗೆ ಬೀಳಲಿದೆ.

ಕೇಂದ್ರ ಬೊಕ್ಕಸಕ್ಕೆ ಸುಮಾರು ಅರವತ್ತು ಸಾವಿರ ಕೋಟಿ ಆದಾಯ ತಂದು ಕೊಡಬಹುದೆಂದು ನಿರೀಕ್ಷಿಸಲಾಗಿರುವ ಈ ಹರಾಜಿನಲ್ಲಿ ಎರಡು ಕಂಪೆನಿಗಳು ಪೈಪೋಟಿಗೆ ಬಿದ್ದಂತೆ ಬಿಡ್ ಮಾಡುತ್ತಿರುವುದು ಗ್ರಾಹಕರನ್ನು ಆತಂಕಕ್ಕೆ ದೂಡಿದೆ.

Spectrum auction battle, mobile usage tariff may go up

ಬಿಡ್ ಮೊತ್ತದ ಶೇ. 30ರಷ್ಟನ್ನು ಸರಕಾರಕ್ಕೆ ಕೂಡಲೇ ಪಾವತಿಸ ಬೇಕಾಗಿರುವುದರಿಂದ, ಈ ಹೆಚ್ಚಿನ ಹೊರೆ ಗ್ರಾಹಕರ ಮೇಲೆ ಸದ್ಯದಲ್ಲೇ ಬೀಳುವ ನಿರೀಕ್ಷೆಯಿದೆ.

ಈ ಹೆಚ್ಚುವರಿ ಹೂಡಿಕೆಯನ್ನು ಸರಿದೂಗಿಸಲು ಮೊಬೈಲ್ ಕಂಪೆನಿಗಳು ಒಂದೋ ತಮಗೆ ಬರುತ್ತಿದ್ದ ನಿವ್ವಳ ಲಾಭದ ಮೂಲಕ ಸರಿದೂಗಿಸಬೇಕು, ಇಲ್ಲವೇ ಮೊಬೈಲ್ ದರವನ್ನು ಹೆಚ್ಚಿಸ ಬೇಕಾದ ಅನಿವಾರ್ಯತೆಯಲ್ಲಿದೆ. (11300 ಕೋಟಿ ರೂ ಸ್ಪೆಕ್ಟ್ರಂ ಹರಾಜು: ಆದಾಯ ಯಾರಿಗೆ)

ಸರಕಾರಕ್ಕೆ ಪಾವತಿಸ ಬೇಕಾದ ಹರಾಜು ಹಣವನ್ನು ಸರಿದೂಗಿಸಲು ಕಂಪೆನಿಯ ಆದಾಯ ಮತ್ತು ದರ ಹೆಚ್ಚಿಸುವ ಮೂಲಕ ಸರಿದೂಗಿಸ ಬೇಕಾಗುತ್ತದೆ ಎಂದು ಭಾರ್ತಿ ಏರ್ ಟೆಲ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಫೆಬ್ರವರಿ ಮೂರರಿಂದ ಆರಂಭವಾಗಿರುವ ಈ ಹರಾಜು ಪ್ರಕ್ರಿಯೆಯಲ್ಲಿ ದೇಶದ ಎಂಟು ಟೆಲೆಕಾಂ ಸಂಸ್ಥೆಗಳು ಭಾಗಿಯಾಗಿವೆ.

English summary
Spectrum auction battle for 1800 Mhz band from leading three companies. Mobile usage tariff may go up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X