ಈರುಳ್ಳಿ ಬೆಲೆ ಏರಿಕೆ, ಹೋಟೆಲ್, ಚಾಟ್ಸ್ ಅಂಗಡಿಗಳಿಗೆ ಪರದಾಟ

ಬೆಂಗಳೂರು, ನವೆಂಬರ್ 29: ಒಂದು ಕಾಲದಲ್ಲಿ ಬೇಡಿಕೆಯೇ ಇಲ್ಲದೆ 20 ರೂಪಾಯಿಗೆಲ್ಲ ಚೀಲದ ತುಂಬ ಸಿಗುತ್ತಿದ್ದ ಈರುಳ್ಳಿ ಇಂದು ಒಂದು ಕೆಜಿಗೆ ಕನಿಷ್ಠ 100 ರೂಪಾಯಿ ಆಗಿದೆ. ಮುಂಬೈ, ಬೆಂಗಳೂರಿನ ಹೋಟೆಲ್, ಚಾಟ್ಸ್ ಅಂಗಡಿಗಳಲ್ಲಿ ಪರದಾಟ ಶುರುವಾಗಿದೆ.

ಈರುಳ್ಳಿ ದೋಸೆ, ಬೇಲ್ ಪುರಿ, ಗೋಬಿ ಇನ್ನಿತರ ಮಂಚೂರಿಯನ್ ಮೇಲೆ ಎಕ್ಸ್ಟ್ರಾ ಈರುಳ್ಳಿ ಈಗ ದುಬಾರಿ. ಬೆಂಗಳೂರಲ್ಲಿ ಕೆಲವು ಹೋಟೆಲ್ ಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸುವುದೇ ಇಲ್ಲ ಹೀಗಾಗಿ ಅವರಿಗೆ ಈ ಸುದ್ದಿ ಸಂಬಂಧಿಸಿಲ್ಲ.

ಎಕ್ಸ್ಟ್ರಾ ಈರುಳ್ಳಿಗೆ ಹೆಚ್ಚು ದುಡ್ಡು
ಎಕ್ಸ್ಟ್ರಾ ಈರುಳ್ಳಿ ಕೆಲವು ಕಡೆ ಕೊಡುವುದಿಲ್ಲ ಎನ್ನುತ್ತಿದ್ದರೆ, ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ಬೇರೆ ಇದೆ. ಹೆಚ್ಚು ಈರುಳ್ಳಿ ಬೇಕಾದರೆ 10-15 ರು ಹೆಚ್ಚುವರಿಯಾಗಿ ತೆರಬೇಕಾಗುತ್ತದೆ. ಇದು ಮುಂಬೈ ಹೋಟೆಲ್ ಮಾಲೀಕರಿಂದ ಬೆಂಗಳೂರಿನ ಉಡುಪಿ ಹೋಟೆಲ್ (ಈರುಳ್ಳಿ ಬಳಸುವ ಹೋಟೆಲ್ ಸಮೂಹ) ಗಳ ಗುಂಪಿಗೆ ರವಾನೆಯಾಗಿದ್ದು, ಸದ್ಯದಲ್ಲೇ ಬೆಂಗಳೂರಿನಲ್ಲೂ ಜಾರಿಗೆ ಬರಲಿದೆ ಎಂದು ಮುಂಬೈನ ಭಾರತ್ ಲಂಚ್ ಹೋಂನ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.

Soaring onion prices make restaurant food costlier

ಬೆಲೆ ಏರಿಕೆಯ ಬಿಸಿಯನ್ನು ಹೋಟೆಲ್ ನವರು ಈಗ ಗ್ರಾಹಕರಿಗೆ ವರ್ಗಾಯಿಸುತ್ತಿದ್ದು, ಈರುಳ್ಳಿ ಬಳಸುವ ತಿಂಡಿ, ಪದಾರ್ಥಗಳ ಮೇಲಿನ ಬೆಲೆಯನ್ನು ಏರಿಸುವುದು ಅನಿವಾರ್ಯ ಎಂದಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದೆ ಎಂಬ ಮಾತಿದೆ. ಈರುಳ್ಳಿ ಬೆಲೆ ಏರಿಕೆಗೆ ಕೇವಲ ಪ್ರವಾಹ ಮತ್ತು ಮಳೆಯಷ್ಟೇ ಕಾರಣವಲ್ಲ. ಸಾಲು ಸಾಲು ಹಬ್ಬಗಳು ಸಹ ಈರುಳ್ಳಿ ಬೆಲೆ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗಿದೆ. ಆದರೆ ಹಬ್ಬಗಳು ಮುಗಿದ ನಂತರವೂ ಬೆಲೆ ಮಾತ್ರ ಕಡಿಮೆಯಾಗದಿರುವುದು ಗ್ರಾಹಕನಿಗೆ ಭಾರೀ ತಲೆನೋವೆನ್ನಿಸಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+