ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆ!
ನವದೆಹಲಿ, ಡಿಸೆಂಬರ್ 28 : ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು 20bpsರಷ್ಟು ಇಳಿಕೆ ಮಾಡಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಬ್ಯಾಂಕುಗಳು ತನ್ನ ಠೇವಣಿ ದರಗಳನ್ನು ಇಳಿಸಲು ಸಹಕಾರಿಯಾಗಲಿದೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಇಳಿಕೆ ಮಾಡಲಾಗಿದೆ. ಸಾರ್ವಜನಿಕ ಪಿಂಚಣಿ ಯೋಜನೆ(ಪಿ.ಪಿ.ಎಫ್.), ರಾಷ್ಟ್ರೀಯ ಉಳಿತಾಯ ಯೋಜನೆ(ಎನ್.ಎಸ್.ಎಸ್.), ಸುಕನ್ಯ ಸಮೃದ್ಧಿ ಯೋಜನೆ ಸೇರಿದಂತೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು 20ರಷ್ಟು ಮುಲಾಂಕದಷ್ಟು ಅಥವಾ ಶೇ 0.2ರಷ್ಟು ಇಳಿಕೆ ಮಾಡಲಾಗಿದೆ. 2018 ರ ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕಕ್ಕೆ ಇದು ಅನ್ವಯವಾಗಲಿದೆ.

1 ವರ್ಷದವರೆಗಿನ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ. 6.8 ರಿಂದ ಶೇ. 6.6ಕ್ಕೆ ಇಳಿಕೆ ಮಾಡಲಾಗಿದೆ. ಅದೇ ರೀತಿ 2 ವರ್ಷದ ಸಣ್ಣ ಉಳಿತಾಯದ ಠೇವಣಿಯ ಮೇಲಿನ ಬಡ್ಡಿ ದರವನ್ನು ಶೇ. 6.7ಕ್ಕೆ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಶೇ. 7.6 ವಿಧಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ 5 ವರ್ಷಗಳ ಅವಧಿಯ ಹೂಡಿಕೆಯ ಬಡ್ಡಿದರ ಶೇ 8.3 ರಷ್ಟು ನಿಗದಿಪಡಿಸಲಾಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಗೆ ಅನುಗುಣವಾಗಿ ಶೇ. 0.1ರಷ್ಟು ಬಡ್ಡಿದರವನ್ನು ಕಡಿಮೆ ಮಾಡಲಾಗಿತ್ತು.












Click it and Unblock the Notifications