ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಚ್ಚಿ ಹೋದ ಇನ್ಫಿ ಷೇರು ಮೌಲ್ಯದ 30 ಸಾವಿರ ಕೋಟಿ, ಇದು ಸಿಕ್ಕಾ ಎಫೆಕ್ಟ್

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಇನ್ಫೋಸಿಸ್ ಷೇರುಗಳ ಬೆಲೆಯಲ್ಲಿ ಶುಕ್ರವಾರ ಭಾರೀ ಕುಸಿತವಾಗಿದೆ. ಸಿಇಒ ಹಾಗೂ ಎಂ.ಡಿ. ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ನಂತರ ಬಿಎಸ್ ಇ (ಮುಂಬೈ ಷೇರು ಮಾರುಕಟ್ಟೆ) ಯಲ್ಲಿ ಇನ್ಫೋಸಿಸ್ ವಾರ್ಷಿಕ ಕನಿಷ್ಠ ಮಟ್ಟವಾದ 884.40ಕ್ಕೆ ತಲುಪಿದೆ.

ನಾರಾಯಣ ಮೂರ್ತಿ ಕಿರಿಕಿರಿಯಿಂದಲೇ ಸಿಕ್ಕಾ ರಾಜಿನಾಮೆ: ಇನ್ಫೋಸಿಸ್ನಾರಾಯಣ ಮೂರ್ತಿ ಕಿರಿಕಿರಿಯಿಂದಲೇ ಸಿಕ್ಕಾ ರಾಜಿನಾಮೆ: ಇನ್ಫೋಸಿಸ್

ಕಂಪನಿಗೆ ವಿಶಾಲ್ ಸಿಕ್ಕಾ ಅವರು ರಾಜೀನಾಮೆ ನೀಡಿರುವುದಕ್ಕೆ ಹೂಡಿಕೆದಾರರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಕಂಪನಿಯ ಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್.ನಾರಾಯಣ ಮೂರ್ತಿಯವರು ಕಂಪನಿಯ ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಪದೇಪದೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಕಾರಣದಿಂದಲೇ ಇಂಥ ನಿರ್ಧಾರ ಬಂದಿದೆ ಎಂದು ಈಗಾಗಲೇ ಜಾಹೀರಾಗಿದೆ.

Sikka exit costs Infosys investors Rs 29K cr

ಸಿಕ್ಕಾ ರಾಜೀನಾಮೆ ಸುದ್ದಿಯಿಂದ ಇನ್ಫೋಸಿಸ್ ಷೇರುದಾರರ 30 ಸಾವಿರ ಕೋಟಿ ರುಪಾಯಿ ಕೊಚ್ಚಿಹೋಗಿದೆ. ಇನ್ನು ನಾರಾಯಣ ಮೂರ್ತಿ, ಪತ್ನಿ ಸುಧಾಮೂರ್ತಿ ಮತ್ತು ಇಬ್ಬರು ಮಕ್ಕಳ ಹೆಸರಿನಲ್ಲಿ ಒಟ್ಟು ಶೇ 3.44ರಷ್ಟು ಇನ್ಫಿ ಷೇರುಗಳಿದ್ದು, ಗುರುವಾರ ಹಾಗೂ ಶುಕ್ರವಾರ ಮಧ್ಯಾಹ್ನದ ವೇಳೆಗೆ ಒಟ್ಟಾರೆ ಒಂಬೈನೂರು ಕೋಟಿಗೂ ಹೆಚ್ಚು ನಷ್ಟವಾಗಿರುವ ಅಂದಾಜಿದೆ.

ಸದ್ಯಕ್ಕೆ ವಿವಿಧ ಷೇರು ಬ್ರೋಕರಿಂಗ್ ಕಂಪನಿಗಳು ಇನ್ಫೋಸಿಸ್ ಇನ್ನೂ ಹೆಚ್ಚು ಕುಸಿಯುವುದಿಲ್ಲ ಎಂಬ ಅಭಿಪ್ರಾಯ ಪಟ್ಟಿದ್ದು, ಈ ಹಂತದಲ್ಲಿ ಷೇರು ಖರೀದಿ ಮಾಡಬಹುದು ಎಂಬ ಸಲಹೆ ನೀಡಿದ್ದಾರೆ. ಸದ್ಯದಲ್ಲೇ ಇನ್ಫಿ ಷೇರು ಹಿಂತೆಗೆತ ಆರಂಭವಾಗುತ್ತದೆ. ಅದು ಈ ಕುಸಿತವನ್ನು ತಡೆಯುತ್ತದೆ ಎಂಬ ನಿರೀಕ್ಷೆ ಇದೆ.

English summary
After Vishal Sikka exit from Infosys, company shares fell more than 13 percent. Investors loses nearly 29 thousand crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X