ರಿಲಯನ್ಸ್ ಡಿಜಿಟಲ್‌ನಲ್ಲಿ ಗ್ಯಾಲಕ್ಸಿ ಎಸ್ 10 ಲಾಂಚ್ ಮಾಡಿದ ಶ್ರುತಿ ಹಾಸನ್‌

ಮುಂದಿನ ತಲೆ ಮಾರಿನ ಫ್ಲ್ಯಾಗ್ ಶಿಪ್ ಎಂದೇ ಖ್ಯಾತಿ ಪಡೆದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 10 ಸ್ಮಾರ್ಟ್‌ಫೋನ್‌ ಅನ್ನು ಖ್ಯಾತ ನಟಿ ಶ್ರುತಿ ಹಾಸನ್ ರಿಲಯನ್ಸ್ ಡಿಜಿಟಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಮಂತ್ರಿ ಮಾಲ್‌ನಲ್ಲಿ ಸ್ಮಾರ್ಟ್‌ಫೋನ್ ಅನಾವರಣಗೊಳೀಸಿ ಮಾತನಾಡಿದ ಶೃತಿ ಹಾಸನ್, ಸ್ಯಾಮ್ಸಂಗ್ 10 ವರ್ಷಗಳಿಂದ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಗ್ಯಾಲಕ್ಸಿ ಎಸ್ 10 ಅನ್ನು ಪ್ರೀಮಿಯರ್ ಸ್ಮಾರ್ಟ್ಫೋನ್ ಬಯಸುವ ಗ್ರಾಹಕರಿಗೆ ವಿನ್ಯಾಸಗೊಂಡಿದೆ ಎಂದರು.

ರಿಲಯನ್ಸ್ ಡಿಜಿಟಲ್ & ಮೈ ಜಿಯೋ ಸ್ಟೋರ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ಮುಂಗಡವಾಗಿ ಬುಕ್ ಮಾಡಿದ ಗ್ರಾಹಕರು ಶ್ರುತಿ ಹಾಸನ್‌ ಅವರನ್ನು ಮಂತ್ರಿ ಮಾಲ್ ನಲ್ಲಿ ಭೇಟಿಯಾಗುವ ಅವಕಾಶವನ್ನು ಪಡೆದುಕೊಂಡಿದ್ದರು.

ರಿಲಯನ್ಸ್ ಡಿಜಿಟಲ್ ಯಾವಾಗಲೂ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೊಸ ಗ್ಯಾಜೆಟ್‌ಗಳನ್ನು ಶೀಘ್ರವೇ ಗ್ರಾಹಕರಿಗೆ ತಲುಪಿಸುತ್ತಿದೆ. ಗ್ರಾಹಕ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಭಾರತೀಯರಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 10 ಅನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಇದಲ್ಲದೇ ರಿಲಯನ್ಸ್ ಡಿಜಿಟಲ್ ನಲ್ಲಿ ಸ್ಯಾಮ್ಸಂಗ್ ಲಾಂಚ್ ಮಾಡಿರುವ ಎಲ್ಲಾ ಪೋನ್‌ಗಳನ್ನು ಕಾಣಬಹುದಾಗಿದೆ. ಹೊಸ ಫೋನ್‌ ಅನ್ನು ಗ್ರಾಹಕರು ಎಕ್ಸಿಪಿರೀಯನ್ಸ್ ಮಾಡಬಹುದಾಗಿದೆ.

ಎಲ್ಲೆಲ್ಲಿ ಗ್ಯಾಲಕ್ಸಿ ಎಸ್ 10 ಲಭ್ಯ

ಎಲ್ಲೆಲ್ಲಿ ಗ್ಯಾಲಕ್ಸಿ ಎಸ್ 10 ಲಭ್ಯ

ಎಲ್ಲಾ ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ಸ್ ಮತ್ತು reliancedigital ವೆಬ್ ಸೈಟಿನಲ್ಲಿ ಗ್ಯಾಲಕ್ಸಿ S10 e, ಗ್ಯಾಲಕ್ಸಿ S10 ಮತ್ತು ಗ್ಯಾಲಕ್ಸಿ S10 + ಲಭ್ಯವಿರುತ್ತವೆ. ಮಾರ್ಚ್ 8, 2019 ರಿಂದ ಮಾರಾಟ ಆರಂಭವಾಗಿದೆ.

ಲಭ್ಯತೆ - ಬೆಲೆ, ಬಣ್ಣಗಳು ಮತ್ತು ಆವೃತ್ತಿಗಳು

ಲಭ್ಯತೆ - ಬೆಲೆ, ಬಣ್ಣಗಳು ಮತ್ತು ಆವೃತ್ತಿಗಳು

1 TB, 512 GB ಮತ್ತು 128GB ಸ್ಟೋರೆಜ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S10 + ಲಭ್ಯವಿರುತ್ತದೆ. ಬೆಲೆಗಳು ಕ್ರಮವಾಗಿ ರೂ.1,17,900, ರೂ. 91,900 ಮತ್ತು ರೂ. 73,900 ಆಗಿದೆ. 1 TB ಮತ್ತು 512 GB ಆವೃತ್ತಿಗಳು ಕ್ರಮವಾಗಿ ಐಷಾರಾಮಿ ಸಿರಾಮಿಕ್ ವೈಟ್ ಮತ್ತು ಸೆರಾಮಿಕ್ ಬ್ಲಾಕ್ ಬಣ್ಣಗಳಲ್ಲಿ ದೊರೆಯುತ್ತಿದೆ. 128GB ರೂಪಾಂತರವು ಪ್ರಿಸ್ಮ್ ಬ್ಲಾಕ್, ಪ್ರಿಸ್ಮ್ ವೈಟ್ ಮತ್ತು ಪ್ರಿಸ್ಮ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ವಿವಿಧ ದರ ಶ್ರೇಣಿಯಲ್ಲಿ ಲಭ್ಯ

ವಿವಿಧ ದರ ಶ್ರೇಣಿಯಲ್ಲಿ ಲಭ್ಯ

ಗ್ಯಾಲಕ್ಸಿ ಎಸ್ 10 (512 GB) ರೂ.84,900ಕ್ಕೆ ಪ್ರಿಸ್ಮ್ ವೈಟ್ ಬಣ್ಣದಲ್ಲಿ ಲಭ್ಯವಿರುತ್ತದೆ.ಗ್ಯಾಲಕ್ಸಿ ಎಸ್ 10 (128 GB) ರೂ. 66,900ಕ್ಕೆ ಪ್ರಿಸ್ಮ್ ಬ್ಲಾಕ್, ಪ್ರಿಸ್ಮ್ ವೈಟ್ ಮತ್ತು ಪ್ರಿಸ್ಮ್ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ. ಗ್ಯಾಲಕ್ಸಿ S10 e ಗ್ಯಾಲಕ್ಸಿ S10e ರೂ, 55,900ಕ್ಕೆ ಪ್ರಿಸ್ಮ್ ಬ್ಲಾಕ್ ಮತ್ತು ಪ್ರಿಸ್ಮ್ ವೈಟ್ ಬಣ್ಣಗಳಲ್ಲಿ ಮಾರಾಟವಾಗಲಿದೆ.

ಗ್ಯಾಲಕ್ಸಿ ಎಸ್ 10 ಲಾಂಚಿಂಗ್ ಆಫರ್ ಏನಿದೆ?

ಗ್ಯಾಲಕ್ಸಿ ಎಸ್ 10 ಲಾಂಚಿಂಗ್ ಆಫರ್ ಏನಿದೆ?

ಲಾಂಚಿಂಗ್‌ ಆಫರ್ ನಲ್ಲಿ ಗ್ರಾಹಕರಿಗೆ ರೂ.4,999ಕ್ಕೆ ಗ್ಯಾಲೆಕ್ಸಿ ಬಡ್ಸ್‌ ದೊರೆಯಲಿದೆ. ಅಲ್ಲದೇ HDFC ಗ್ರಾಹಕರಿಗೆ ರೂ, 6,000 ರಷ್ಟು ಕ್ಯಾಷ್ ಬ್ಯಾಕ್ ದೊರೆಯಲಿದೆ ಅಲ್ಲದೇ ರೂ.15,000ರ ವರೆಗೆ ಆಪ್‌ಗ್ರೇಡ್ ಆಯ್ಕೆಯೂ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+