ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಸಾಲದ ರೀಫೈನಾನ್ಸ್ ಪಡೆಯಬೇಕಾ? ಈ 10 ಅಂಶಗಳನ್ನು ಪರಿಗಣಿಸಿ

|
Google Oneindia Kannada News

ಗೃಹಸಾಲದ ಮೇಲೆ ಹೆಚ್ಚಿನ ಬಡ್ಡಿ ಕಟ್ಟಿ ಹೈರಾಣಾಗಿದ್ದೀರಾ? ನಿಮಗೆ ಸಾಲ ನೀಡಿದ ಕಂಪೆನಿ ಅಥವಾ ಸಂಸ್ಥೆ ಎಲ್ಲಕ್ಕೂ ಶುಲ್ಕ ವಿಧಿಸುತ್ತಾ ಹೊರೆ ಹಾಕುತ್ತಿದೆಯಾ ಮತ್ತು ಸರಿಯಾದ ಸೇವೆ ಒದಗಿಸುತ್ತಿಲ್ಲವಾ? ನೀವು ತೆಗೆದುಕೊಂಡ ಗೃಹಸಾಲದ ರೀಫೈನಾನ್ಸ್ ಪಡೆಯುವುದಕ್ಕೆ ಇದು ನಿಮಗೆ ಸೂಕ್ತ ಸಮಯ.

ಹೌಸಿಂಗ್ ಲೋನ್ ರೀ ಫೈನಾನ್ಸ್ ಅನ್ನೋದು ಸಾಲ ಪಡೆದವರು ಹೊಸ ಸಾಲ ನೀಡುವವರೆಡೆಗೆ ಬದಲಾಗುವುದಷ್ಟೇ ಅಲ್ಲ. ಬಡ್ಡಿದರದಲ್ಲಿ ವ್ಯತ್ಯಾಸ ಆಗುವುದೊಂದೇ ಅಲ್ಲ, ಜತೆಗೆ ಇತರ ಅನುಕೂಲಗಳು ಇವೆ.

Should you Refinance your Housing Loan? 10 Things to Consider First!

ಅದರಲ್ಲಿ ದೀರ್ಘಾವಧಿ ಸಾಲ ಹಾಗೂ ಕಡಿಮೆ ಬಡ್ಡಿದರ, ಉತ್ತಮ ಗ್ರಾಹಕ ಸೇವೆ ಮತ್ತು ಹೆಚ್ಚು ಪಾರದರ್ಶಕವಾದ ಶುಲ್ಕ ವಿಧಿಸುವುದು ಕೂಡ ಸೇರಿವೆ. ಆದರೆ ಹೌಸಿಂಗ್ ರೀ ಫೈನಾನ್ಸ್ ಗೆ ನೀವು ಪ್ರಯತ್ನಿಸುವ ಮುಂಚೆ ವಿವಿಧ ಆರ್ಥಿಕ ವಿಚಾರಗಳ ಕಡೆ ಗಮನ ಹರಿಸಬೇಕು. ಇದರಿಂದ ನಿಮ್ಮ ನಡೆ ಸಲೀಸಾಗುತ್ತದೆ. ನೀವಂದುಕೊಂಡ ಕೆಲ ಫಲಿತಾಂಶವೂ ಸಿಗುತ್ತವೆ.

ಹೌಸಿಂಗ್ ಲೋನ್ ರೀಫೈನಾನ್ಸ್ ಗೆ ಹೋಗುವ ಮುನ್ನ ಗಮನಿಸಬೇಕಾದ 10 ಅಂಶಗಳಿವು

1. ಆದಾಯ ಮತ್ತು ಪಡೆಯುವ ಸಾಲದ ಪ್ರಮಾಣ ಪರಿಶೀಲಿಸಿ: ಸಾಲ ಪಡೆದ ಮೊತ್ತ ಹಾಗೂ ಪ್ರತಿ ತಿಂಗಳ ಆದಾಯದ ಪ್ರಮಾಣ ಇದು. ಈ ವಿಚಾರದಲ್ಲಿ ಸೂಕ್ತವಾದ ಪ್ರಮಾಣ ಅಂದರೆ 3:7. ಹೀಗಂದರೆ ನೀವು ತೆಗೆದುಕೊಳ್ಳುವ ಪ್ರತಿ ಮೂರು ಸಾಲವನ್ನು ಪಾವತಿಸುವುದಕ್ಕೆ ಏಳು ಕಡೆಯಿಂದ ಆದಾಯ ಇರಬೇಕು.

ಇದು ನೀವು ಗುರಿಯಾಗಿ ಇರಿಸಿಕೊಳ್ಳಬಹುದಾದ ಅತ್ಯಂತ ಸುರಕ್ಷಿತ ಪ್ರಮಾಣ. ಆದ್ದರಿಂದ ಹೌಸಿಂಗ್ ರೀಫೈನಾನ್ಸ್ ಗೆ ಹೋಗುವ ಮುನ್ನ ಈ ಪ್ರಮಾಣವನ್ನು ವಿಶ್ಲೇಷಣೆ ಮಾಡಿ. ಸದ್ಯಕ್ಕೆ ನೀವು ಸಾಲ ಪಡೆದ ಕಂಪೆನಿ ಅಥವಾ ಸಂಸ್ಥೆಯಲ್ಲಿ ಬಡ್ಡಿದರ ತೀರಾ ಹೆಚ್ಚಿದ್ದು ಸಾಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೆ, ನಿಮ್ಮ ಆದಾಯದ ಹೆಚ್ಚಿನ ಪಾಲು ಗೃಹಸಾಲದ ಮರುಪಾವತಿಗೆ ಹೋಗುತ್ತಿದ್ದರೆ ಗೃಹಸಾಲದ ಬಾಕಿ ಮೊತ್ತದ ವರ್ಗಾವಣೆಗೆ ಇದು ಸೂಕ್ತ ಸಮಯ.

2. ರೀಫೈನಾನ್ಸ್ ಸಂದರ್ಭದಲ್ಲಿ ಎದುರಾಗುವ ವಿವಿಧ ವೆಚ್ಚಗಳನ್ನು ಲೆಕ್ಕ ಹಾಕಿ: ರೀಫೈನಾನ್ಸಿಂಗ್ ಗೆ ಹೋಗುವಾಗ ಅದರ ಜತೆಗೆ ಹಲವು ವೆಚ್ಚಗಳು ಜೊತೆಯಾಗುತ್ತವೆ. ಪ್ರೊಸೆಸಿಂಗ್ ಶುಲ್ಕ, ಅರ್ಜಿ ಶುಲ್ಕ, ಕಾನೂನಾತ್ಮಕ ವೆಚ್ಚಗಳು ಮತ್ತು ಪೂರ್ವಪಾವತಿಯ ದಂಡ ಹೀಗೆ ನಾನಾ ವೆಚ್ಚಗಳು ಒಳಗೊಂಡಿರುತ್ತವೆ.

ಇವೆಲ್ಲದರ ಬಗ್ಗೆ ತಿಳಿದುಕೊಂಡು ಎಷ್ಟು ಹಣ ಪಾವತಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಆ ನಂತರ ಅಚ್ಚರಿ ಆಗುವ ಪ್ರಮೇಯ ಇರುವುದಿಲ್ಲ. ಬಾಕಿ ವರ್ಗಾವಣೆ ಮಾಡುವುದರಿಂದ ನಿಮಗಾಗುವ ಲಾಭಕ್ಕಿಂತ ಈ ಶುಲ್ಕಗಳಿಗೆ ಹೆಚ್ಚಿನ ಮೊತ್ತ ಆಗುವುದಿಲ್ಲ (ನೀವು ಉಳಿಸುವ ಮೊತ್ತ) ಎಂಬುದನ್ನು ಮುಖ್ಯವಾಗಿ ಖಾತ್ರಿ ಮಾಡಿಕೊಳ್ಳಿ.

3. ಬಡ್ಡಿದರ ಮತ್ತು ಕಾಲಾವಧಿ: ಗೃಹಸಾಲದ ಬಾಕಿ ವರ್ಗಾವಣೆಗೆ ಕಾರಣವಾಗುವ ಮುಖ್ಯ ಅಂಶ ಬಡ್ಡಿದರ. ಸಾಲ ಪಾವತಿಸಬೇಕಾದ ಉಳಿದ ಅವಧಿಯ ಇಎಂಐ ಮೇಲೆ ಅದು ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಗೃಹ ಸಾಲದ ಮೊತ್ತ ವರ್ಗಾವಣೆಗೆ ಮುನ್ನ ಹೊಸ ಬಡ್ಡಿದರ ಮತ್ತು ಕಾಲಾವಧಿಯನ್ನು ಮೌಕ್ಯಮಾಪನ ಮಾಡಿ.

ಒಂದು ವೇಳೆ ಸಾಲದ ಅವಧಿ ಕಡಿಮೆ ಮಾಡಿಕೊಂಡು, ಹೆಚ್ಚಿನ ಇಎಂಐ ಕಟ್ಟಲು ಬಯಸಿದ್ದರೆ ಅಥವಾ ಇಎಂಐ ಕಡಿಮೆ ಮಾಡಿಕೊಂಡು ಹೆಚ್ಚಿನ ಕಾಲಾವಧಿ ಮಾಡಿಸಿಕೊಳ್ಳಲು ಬಯಸಿರಬಹುದು. ಆಗ ಒಟ್ಟಾರೆ ಮೊತ್ತದ ಮೇಲೆ ಬಡ್ಡಿ ಹೆಚ್ಚಾಗುತ್ತದೆ. ನಿಮಗೆ ಅನುಕೂಲವಾಗುವಂಥ ಎರಡು ಆಯ್ಕೆಗಳ ಪೈಕಿ ಯಾವುದನ್ನಾದರೂ ಆರಿಸಿಕೊಳ್ಳಲು ಸಾಧ್ಯವಿದೆ. ನಿರ್ಧಾರವನ್ನು ಹುಷಾರಾಗಿ ತೆಗೆದುಕೊಳ್ಳಿ.

4. ಆದಾಯದ ಮೇಲಿನ ತೆರಿಗೆ: ಪ್ರತಿ ತಿಂಗಳ ನಿಮ್ಮ ಗೃಹಸಾಲದ ಬಡ್ಡಿ ಪಾವತಿ ಆಧಾರದ ಮೇಲೆ ನಿಮ್ಮ ಆದಾಯ ತೆರಿಗೆ ಹೆಚ್ಚು ಅಥವಾ ಕಡಿಮೆ ಕಡಿತ ಮಾಡಲಾಗುತ್ತದೆ. ಗೃಹಸಾಲದ ಬಾಕಿ ಮೊತ್ತ ವರ್ಗಾವಣೆ ಮಾಡುವ ವೇಳೆ ಕಡಿಮೆ ಬಡ್ಡಿದರವನ್ನು ಆಯ್ಕೆ ಮಾಡಿಕೊಂಡರೆ ಆದಾಯ ತೆರಿಗೆ ಉಳಿತಾಯವೂ ಕಡಿಮೆ ಆಗುತ್ತದೆ.

ನಿಮ್ಮ ಆದಾಯ ತೆರಿಗೆ ಮೇಲೆ ಗೃಹಸಾಲ ರೀಫೈನಾನ್ಸ್ ಹೇಗೆ ಪರಿಣಾಮ ಬೀರುತ್ತದೆ ಅಂತ ತಿಳಿದುಕೊಳ್ಳಲು ಚಾರ್ಟರ್ಡ್ ಅಕೌಂಟೆಂಟ್ ಅಥವಾ ಟ್ಯಾಕ್ಸ್ ಕನ್ಸಲ್ಟಂಟ್ ರ ಬಳಿ ಪರಿಶೀಲಿಸಿಕೊಳ್ಳಿ. ಸಾಲದ ಮೊತ್ತ ವರ್ಗಾವಣೆ ಮಾಡುವ ಮುನ್ನ ಸರಿಯಾಗಿ ತಿಳಿದುಕೊಳ್ಳಿ.

5. ಕ್ರೆಡಿಟ್ ಸ್ಕೋರ್: ಕ್ರೆಡಿಟ್ ಸ್ಕೋರ್ ಅನ್ನೋದು ನೀವು ಎಷ್ಟು ಸಾಲ ಪಡೆಯುವುದಕ್ಕೆ ಅರ್ಹರಿದ್ದೀರಿ ಎಂದು ನಿರ್ಧಾರ ಮಾಡುವುದಕ್ಕೆ ಇರುವ ಮಾನದಂಡ. ಕಡಿಮೆ ಅಂಕಗಳಿದ್ದರೆ ನಿಮ್ಮ ಆಯ್ಕೆಯ ಸಾಲ ಸಿಗುವುದು ಕಷ್ಟವಾಗುತ್ತದೆ. ಹೆಚ್ಚಿನ ಸ್ಕೋರ್ ಇದ್ದರೆ ಸುಲಭವಾಗಿ ಸಾಲ ಮಂಜೂರು ಆಗುತ್ತದೆ.

ಸಾಲದ ಮೊತ್ತ ವರ್ಗಾವಣೆಗೆ ಮುನ್ನ ಕ್ರೆಡಿಟ್ ಸ್ಕೋರ್ ಪರಿಶೀಲಿಸಿಕೊಳ್ಳಿ. ಒಂದೋ ಒಳ್ಳೆ ಕ್ರೆಡಿಟ್ ಸ್ಕೋರ್ ಇದೆಯಾ ಖಾತ್ರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಆ ಸ್ಕೋರ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ಕೆಟ್ಟ ಅಂಕವಿದ್ದರೆ ನಿಮಗೆ ಸಾಲ ಸಿಗದಿರುವ ಸಾಧ್ಯತೆ ಇದೆ. ಅಥವಾ ಹೆಚ್ಚಿನ ಬಡ್ಡಿ ಬೀಳುತ್ತದೆ.

6. ಗ್ರಾಹಕ ಸೇವೆ: ನೀವು ಯಾರ ಬಳಿ ಸಾಲ ಪಡೆಯಲಿದ್ದೀರೋ ಅಂದರೆ ಆ ಸಂಸ್ಥೆ ಅಥವಾ ಕಂಪೆನಿಯ ಗ್ರಾಹಕ ಸೇವೆ ಹೇಗಿದೆ ಎಂಬ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಮಾಡಿ. ಸಾಲ ನೀಡುವವರು ತಮ್ಮ ಗ್ರಾಹಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಮತ್ತು ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ ಎಂಬುದು ಗ್ರಾಹಕ ಸೇವೆ.

ಗ್ರಾಹಕ ಸೇವೆ ಹೇಗಿದೆ ಎಂಬುದನ್ನು ಆನ್ ಲೈನ್ ವಿಮರ್ಶೆಗಳ ಮೂಲಕ ತಿಳಿಯಬಹುದು. ಸದ್ಯಕ್ಕೆ ಇರುವ ಗ್ರಾಹಕರನ್ನು ಮಾತನಾಡಿಸಿ, ತಿಳಿದುಕೊಳ್ಳಬಹುದು. ಬಾಯಿ ಮಾತಿನ ಪ್ರಚಾರದಿಂದಲೂ ಗೊತ್ತಾಗುತ್ತದೆ. ಒಳ್ಳೆ ಮಾತುಗಳು ಯಾವ ಸಂಸ್ಥೆ ಅಥವಾ ಕಂಪೆನಿ ಬಗ್ಗೆ ಬಂದಿದೆಯೋ ಅದನ್ನು ಆರಿಸಿಕೊಳ್ಳಿ.

7.ಮನೆಯ ಮೌಲ್ಯ: ಬಾಕಿ ವರ್ಗಾವಣೆಗೆ ಮುನ್ನ ನಿಮ್ಮ ಮನೆಯ ಆರ್ಥಿಕ ಮೌಲ್ಯವನ್ನು ತಿಳಿದುಕೊಳ್ಳುವುದು ಮುಖ್ಯ. ಬೆಲೆ ಕಡಿಮೆ ಆದರೆ ಅದರಿಂದ ಹೆಚ್ಚಿನ ಇಎಂಐ ಕಟ್ಟುವಂತೆ ಆಗುತ್ತದೆ. ಗೃಹ ಸಾಲದ ರೀಫೈನಾನ್ಸಿಂಗ್ ಸಾಧ್ಯವೆ ಆಗುವುದಿಲ್ಲ.ಮನೆಯ ಆರ್ಥಿಕ ಮೌಲ್ಯ ಹೆಚ್ಚಾದರೆ ಸಾಲ ಪಡೆಯುವಲ್ಲಿ ಯಶಸ್ಸು ಸಿಗುವ ಸಾಧ್ಯತೆಯೂ ಹೆಚ್ಚು.

8.ಬಡ್ಡಿದರದ ಅಂಶಗಳಲ್ಲಿ ವ್ಯತ್ಯಾಸ: ಅಂಶಗಳು ಅಂದರೆ ಶೀಘ್ರವಾಗಿ ಬದಲಾಗುತ್ತಿರುವ ಬಡ್ಡಿದರ. ಈ ಅಂಶಗಳು ಹೆಚ್ಚಿರಬಹುದು ಅಥ ಕಡಿಮೆ ಇರಬಹುದು. ಆದರೆ ಅದು ಸಾಲ ನೀಡುವವರ ಬಡ್ಡಿದರ ವ್ಯವಸ್ಥೆ ಮೇಲೆ ಅವಲಂಬನೆ ಆಗಿರುತ್ತದೆ.

ಕಾಲಾಂತರದಲ್ಲಿ ಬಡ್ಡಿದರ ಹೇಗೆ ವ್ಯತ್ಯಾಸ ಆಗುತ್ತದೆ ಎಂಬುದನ್ನು ತೋರಿಸುವುದು ಈ ಅಂಶಗಳು. ಭವಿಷ್ಯದಲ್ಲಿ ಬಡ್ಡಿದರ ಹೆಚ್ಚಾಗುತ್ತದೋ ಅಥವಾ ಕಡಿಮೆ ಆಗುತ್ತದೋ ಎಂಬುದರ ಅಂದಾಜು ಮಾಡಲು ನೆರವಾಗುತ್ತದೆ. ಯಾರ ಬಳಿ ಬಡ್ಡಿದರ ಅಂಶ ಕಡಿಮೆ ಇರುತ್ತದೋ ಅಂಥದ್ದನ್ನು ಆಯ್ಕೆ ಮಾಡಿಕೊಳ್ಳಿ.

ಹೆಚ್ಚಿನ ಬಡ್ಡಿದರ ಅಂಶ ಇರುವ ಕಡೆ ಬಡ್ಡಿಯೂ ಹೆಚ್ಚಾಗುತ್ತದೆ. ಆಗ ರೀಫೈನಾನ್ಸ್ ನಿಂದಲೂ ಯಾವುದೇ ಅನುಕೂಲ ಆಗುವುದಿಲ್ಲ.

9.ಬ್ರೇಕ್ ಈವನ್ ಪಾಯಿಂಟ್: ಗೃಹ ಸಾಲದ ವರ್ಗಾವಣೆಯಿಂದ ಒಂದೋ ಲಾಭವಾಗಬೇಕು. ಅಥವಾ ಲಾಭ-ನಷ್ಟ ಎರಡೂ ಅಲ್ಲದ ಒಂದು ಬಿಂದುವನ್ನು ಮುಟ್ಟಬೇಕು. ವರ್ಗಾವಣೆಗೆ ಮುನ್ನ ಎಲ್ಲ ವೆಚ್ಚ ಮತ್ತು ಉಳಿತಾಯವನ್ನು ಲೆಕ್ಕ ಹಾಕಿಕೊಳ್ಳಬೇಕು. ಈ ಪ್ರಕ್ರಿಯೆಯಿಂದ ನಿಮಗೆ ತಗುಲುವು ವೆಚ್ಚ ಬ್ರೇಕ್ ಈವನ್ (ಲಾಭ-ನಷ್ಟ ಎರಡೂ ಅಲ್ಲ) ಅಥವಾ ಲಾಭ ಆಗುವಂತಿದ್ದರೆ ಮಾತ್ರ ಮುಂದುವರಿಯಬೇಕು.

10.ಸ್ಥಿರ ಮತ್ತು ಬದಲಾಗುವ ಬಡ್ಡಿದರ: ಮಾರುಕಟ್ಟೆಯಲ್ಲಿ ಸಾಲ ನೀಡುವವರು ಫ್ಲೋಟಿಂಗ್ (ಬದಲಾಗುವ ಬಡ್ಡಿ ದರ) ಮತ್ತು ಫಿಕ್ಸೆಡ್ (ಸ್ಥಿರವಾದ ಬಡ್ಡಿದರ) ಎರಡೂ ರೀತಿಯನ್ನೂ ಅನುಸರಿಸುತ್ತಾರೆ. ಬದಲಾಗುವ ಬಡ್ಡಿದರ ಮಾರುಕಟ್ಟೆ ಮೇಲೆ ಅವಲಂಬನೆ ಆಗಿರುತ್ತದೆ. ನಾನಾ ಸಮಯದಲ್ಲಿ ಹೆಚ್ಚು ಅಥವಾ ಕಡಿಮೆ ಆಗುತ್ತದೆ.

ಸ್ಥಿರ ಬಡ್ಡಿದರ ಸ್ವಲ್ಪ ಬದಲಾಗುತ್ತದೆ ಅಥವಾ ಬದಲಾಗುವುದೇ ಇಲ್ಲ. ಅದು ಮೂಲದರದ ಮೇಲೆ ಅವಲಂಬಿಸಿರುತ್ತದೆ. ಮಾರುಕಟ್ಟೆಯನ್ನು ಅಧ್ಯಯನ ಮಾಡಿ, ಎಲ್ಲಿ ಸಾಲ ಪಡೆದರೆ ನಿಮ್ಮ ಆರ್ಥಿಕ ಸ್ಥಿತಿಗೆ ಅನುಕೂಲವೋ ಅದನ್ನು ಆರಿಸಿಕೊಳ್ಳಿ. ಸಾಲ ಪಡೆಯುವವರು ಆರಂಭದ ವರ್ಷಗಳಲ್ಲಿ ಸ್ಥಿರ ಬಡ್ಡಿದರ ಇರಲಿ ಎಂದುಕೊಳ್ಳುತ್ತಾರೆ.

ನಂತರದ ಕೆಲವು ವರ್ಷಗಳಲ್ಲಿ ಬದಲಾಗುವ ಬಡ್ಡಿದರಕ್ಕೆ ಬದಲಾವಣೆ ಮಾಡಿಕೊಳ್ಳುತ್ತಾರೆ.

ಒಂದು ಸಲ ನೀವು ಈ ಎಲ್ಲ ಅಂಶಗಳನ್ನು ವಿಶ್ಲೇಷಣೆ ಮಾಡಿದ ಮೇಲೆ, ಮತ್ತು ಹೌಸಿಂಗ್ ರೀಫೈನಾನ್ಸ್ ನಿಂದ ಆಗುವ ಆರ್ಥಿಕ ಅನುಕೂಲವನ್ನು ಗಮನಿಸಿ, ಇನ್ನೂ ಹೆಚ್ಚು ಕಾಲ ಕಾಯಬೇಡಿ. ಬಜಾಜ್ ಫೈನಾನ್ಸ್ ಸರ್ವೀಸ್ ಬಳಿ ಗೃಹಸಾಲ ಪಡೆಯಿರಿ.

ಇದು ಒಳ್ಳೆ ಬಡ್ಡಿದರದಲ್ಲಿ ಮಾತ್ರವಲ್ಲ, ಅದರ ಜತೆಗೆ ಅನುಕೂಲಕರ ಟಾಪ್ ಅಪ್ ಲೋನ್ ಅವಕಾಶ ನೀಡುತ್ತದೆ.

English summary
Are you tired of paying high interest on your home loan? Is your lender overburdening you with charges and fees for everything and giving you unsatisfactory service? Perhaps it is time for you to seek a house refinance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X