ಶೆಲ್ ಲ್ಯೂಬ್ರಿಕೆಂಟ್ಸ್ ಬೈಕ್ ಮೆಕ್ಯಾನಿಕ್‍ಗಳಿಗೆ ತರಬೇತಿ
ಬೆಂಗಳೂರು, ಸೆ.15: ಸಿದ್ಧ ಲ್ಯೂಬ್ರಿಕೆಂಟ್ ತಯಾರಿಕ ಸಂಸ್ಥೆಯಾಗಿರುವ ಶೆಲ್ ಲ್ಯೂಬ್ರಿಕೆಂಟ್ಸ್ ಇದೇ ಮೊದಲ ಬಾರಿಗೆ ಬೈಕ್ ಮೆಕ್ಯಾನಿಕ್‍ಗಳಿಗೆ ಮತ್ತು ಇಂಡಿಪೆಂಡೆಂಟ್ ವರ್ಕ್‍ಶಾಪ್ ಓನರ್ (ಐಡಬ್ಲ್ಯೂಎಸ್)ಗಳಿಗೆ ಲ್ಯೂಬ್ರಿಕೆಂಟ್‍ಗಳ ಬಗ್ಗೆ ತರಬೇತಿ ನೀಡುವ ಸಲುವಾಗಿ ಮಾಸ್ಟರ್ ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಮೂಲಕ ಶೆಲ್‍ನ ತಂತ್ರಜ್ಞಾನ ಮತ್ತು ಬದ್ಧತೆ ಯಾವ ರೀತಿ ಅತ್ಯುತ್ತಮ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು. ಈ ರೀತಿಯ ತರಬೇತಿ ಕಾರ್ಯಕ್ರಮವನ್ನು ದೇಶಾದ್ಯಂತ 16 ನಗರಗಳಲ್ಲಿ ಆಯೋಜಿಸಿದ್ದು, ಸುಮಾರು 7000 ಕ್ಕೂ ಅಧಿಕ ಮೆಕ್ಯಾನಿಕ್‍ಗಳು ಮತ್ತು ಐಡಬ್ಲ್ಯೂಎಸ್‍ಗಳು ಪಾಲ್ಗೊಂಡಿದ್ದರು.
ಬೆಂಗಳೂರಿನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಶೆಲ್‍ನ ತಾಂತ್ರಿಕ ಪರಿಣತರನ್ನು ನೇರವಾಗಿ ಭೇಟಿ ಮಾಡಿ ಅವರಿಂದ ಭವಿಷ್ಯದ ದ್ವಿಚಕ್ರ ವಾಹನಗಳ ತಂತ್ರಜ್ಞಾನ, ತಮ್ಮ ವ್ಯವಹಾರದಲ್ಲಿ ಸಾಧ್ಯವಿರುವ ಬದಲಾವನೆ ಮತ್ತು ಅತ್ಯುತ್ತಮ ಕಾರ್ಯಕ್ಕೆ ಪ್ರಮಾಣ ಪತ್ರಗಳು ಮತ್ತು ಮಾನ್ಯತೆ ಪಡೆಯುವ ಬಗೆ ಹೇಗೆಂಬುದನ್ನು ತಿಳಿದುಕೊಳ್ಳುವ ಅವಕಾಶವನ್ನು ಮೆಕ್ಯಾನಿಕ್‍ಗಳು ಮತ್ತು ಐಡಬ್ಲ್ಯೂಎಸ್‍ಗಳಿಗೆ ಒದಗಿಸಿಕೊಡಲಾಗಿತ್ತು.
ಈ ಬಗ್ಗೆ ಮಾತನಾಡಿದ ಶೆಲ್ ಲ್ಯೂಬ್ರಿಕೆಂಟ್ಸ್ ಇಂಡಿಯಾದ ಕಂಟ್ರಿ ಹೆಡ್ ಮಾನ್ಸಿ ತ್ರಿಪಾಠಿ ಅವರು, "ಇತ್ತೀಚಿನ ಉದ್ಯಮ ಅಭಿವೃದ್ಧಿಗಳು, ತಂತ್ರಜ್ಞಾನಗಳು ಮತ್ತು ಅತ್ಯುತ್ತಮವಾದ ಪದ್ಧತಿ, ವಿಧಾನಗಳನ್ನು ನಮ್ಮ ಮೌಲ್ಯಾಧಾರಿತ ಪಾಲುದಾರರಿಗೆ ತಿಳಿಸಿಕೊಡುವುದು ನಮ್ಮ ಆದ್ಯತೆಯಾಗಿದೆ. ನಮ್ಮ ಮೌಲ್ಯವರ್ಧಿತ ವ್ಯವಹಾರಕ್ಕೆ ಈ ಮೆಕ್ಯಾನಿಕ್ ಸಮುದಾಯವು ಅತ್ಯಂತ ಪ್ರಮುಖವಾದ ಭಾಗವಾಗಿದೆ ಮತ್ತು ಖರೀದಿದಾರರು ಖರೀದಿಸುವ ಉತ್ಪನ್ನವನ್ನು ಈ ಸಮುದಾಯವೇ ನಿರ್ಧಾರ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮೆಕ್ಯಾನಿಕ್ ಸಮುದಾಯ ನಮಗೆ ಅತ್ಯಂತ ಪ್ರಮುಖವಾದ ಅಂಗವಾಗಿದೆ. ಬೈಕ್‍ನ ಲ್ಯೂಬ್ರಿಕೆಂಟ್ ಬ್ರ್ಯಾಂಡ್ ಆಗಿರುವ ಶೆಲ್ ಅಡ್ವಾನ್ಸ್ ಮೆಕ್ಯಾನಿಕ್‍ಗಳಿಗೆ ಮೇಲ್ದರ್ಜೆಯ ಕೌಶಲ್ಯಗಳನ್ನು ಒದಗಿಸುತ್ತಿದೆ. ಇದಲ್ಲದೇ ಆಟೋಮೋಬೈಲ್ ಕ್ಷೇತ್ರದಲ್ಲಿ ಆಧುನೀಕತೆಯನ್ನು ಕಾಲಕಾಲಕ್ಕೆ ತಿಳಿದುಕೊಳ್ಳಲು ನಾವು ಅವರಿಗೆ ನೆರವಾಗುತ್ತಿದ್ದೇವೆ. ಈ ದಿಸೆಯಲ್ಲಿ ಮೆಕ್ಯಾನಿಕ್‍ಗಳಿಗೆ ಸೂಕ್ತ ತರಬೇತಿ ನೀಡುತ್ತಿರುವ ಪರಿಣತ ತಂಡಕ್ಕೆ ನಾವು ಧನ್ಯವಾದಗಳನ್ನು ಹೇಳುತ್ತೇವೆ" ಎಂದು ತಿಳಿಸಿದರು.

ಮಾಸ್ಟರ್ ಕ್ಲಾಸ್ ಗೆ ಆಗಮಿಸಿದ್ದ ಮೆಕ್ಯಾನಿಕ್ ನಾರಾಯಣ್ ಅವರು ಮಾತನಾಡಿ, "ಈ ಜ್ಞಾನಾಧಾರಿತ ವೇದಿಕೆಗೆ ಆಹ್ವಾನಿಸಿ ನಮಗೆ ಸೂಕ್ತವಾದ ತರಬೇತಿ ಮತ್ತು ಮಾಹಿತಿ ನೀಡಿದ್ದಕ್ಕಾಗಿ ಶೆಲ್ ಲ್ಯೂಬ್ರಿಕೆಂಟ್ಸ್‍ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಉದ್ಯಮದಲ್ಲಿ ಹೊಸ ಪೀಳಿಗೆಯ ವಾಹನಗಳು, ಉನ್ನತ ಮಟ್ಟದ ಸಾಮಥ್ರ್ಯಗಳು ಮತ್ತು ಪರಿಣಾಮಕಾರಿ ಅಂಶಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಈ ತರಬೇತಿ ಕಾರ್ಯಕ್ರಮ ನನಗೆ ನಿರ್ಣಾಯಕವಾಗಿತ್ತು. ಭಾರತದಲ್ಲಿ ಮೆಕ್ಯಾನಿಕ್ ಸಮುದಾಯವನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಶೆಲ್ ಕೈಗೊಂಡಿರುವ ಈ ಕಾರ್ಯಕ್ರಮ ಸ್ವಾಗತಾರ್ಹವಾಗಿದೆ. ಇದಲ್ಲದೇ, ಸ್ಥಳೀಯ ಭಾಷೆಯಲ್ಲಿಯೇ ಮಾಹಿತಿಗಳನ್ನು ಮತ್ತು ತರಬೇತಿಯನ್ನು ನೀಡಿದ್ದು ಸಂತಸ ತಂದಿದೆ" ಎಂದರು.
ಮತ್ತೋರ್ವ ಮೆಕ್ಯಾನಿಕ್ ಕುಮಾರ್ ಅವರು ಮಾತನಾಡಿ, "ಸ್ಥಳೀಯ ಭಾಷೆಯಲ್ಲಿಯೇ ತರಬೇತಿ ಮತ್ತು ಮಾಹಿತಿಗಳನ್ನು ನೀಡಿದ್ದು ಪ್ರಮುಖವಾಗಿತ್ತು ಮತ್ತು ನಮಗೆಲ್ಲರಿಗೂ ಪ್ರಯೋಜನಕಾರಿಯಾಗಿತ್ತು. ಈ ತರಬೇತಿ ಪೂರ್ಣಗೊಳಿಸಿದ ನಂತರ ಶೆಲ್‍ನಿಂದ ನಾನು ಪ್ರಮಾಣಪತ್ರವನ್ನು ಪಡೆದಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ಇದು ನಾನು ಗ್ರಾಹಕರ ನಂಬಿಕೆಯನ್ನು ಗಳಿಸಲು ಪ್ರಯೋಜನವಾಗಲಿದೆ"ಎಂದು ತಿಳಿಸಿದರು.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain












Click it and Unblock the Notifications