ಭಾರತೀಯ ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್ 1,300 ಪಾಯಿಂಟ್ಸ್ ಜಿಗಿತ
ಭಾರತೀಯ ಷೇರು ಮಾರುಟ್ಟೆಯಲ್ಲಿ ಗೂಳಿ ಓಟ ಮುಂದುವರಿದೆ. ಸೋಮವಾರ ಕೇಂದ್ರ ಬಜೆಟ್ ಮಂಡನೆ ಬಳಿಕ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಮಂಗಳವಾರವೂ ಜಿಗಿತ ಕಂಡಿದೆ. ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲೇ 1,300ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆಗೊಂಡಿದ್ದು, ನಿಫ್ಟಿ 350ಕ್ಕೂ ಅಧಿಕ ಪಾಯಿಂಟ್ಸ್ ಹೆಚ್ಚಾಗಿದೆ.
ಬೆಳಿಗ್ಗೆ 09.50ರ ಸುಮಾರಿಗೆ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 1370.51 ಪಾಯಿಂಟ್ಸ್ ಹೆಚ್ಚಾಗಿ 49,971.12 ಪಾಯಿಂಟ್ಸ್ ತಲುಪಿದೆ. ಇದಕ್ಕೂ ಮೊದಲು 50 ಸಾವಿರ ಗಡಿಯನ್ನು ಮುಟ್ಟಿತ್ತು. ಇನ್ನು ಎನ್ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 2.73ರಷ್ಟು ಅಥವಾ 389.6 ಪಾಯಿಂಟ್ಸ್ ಏರಿಕೆಗೊಂಡು 14,670 ಪಾಯಿಂಟ್ಸ್ಗೆ ತಲುಪಿದೆ.
ಆರಂಭದಲ್ಲಿ ಸುಮಾರು 1027 ಷೇರುಗಳು ಏರಿಕೆಗೊಂಡರೆ, 171 ಷೇರುಗಳು ಕುಸಿದವು, ಮತ್ತು 46 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆಟೊಮೊಬೈಲ್ ವಲಯದ ಷೇರುಗಳು, ಬ್ಯಾಂಕಿಂಗ್ ಹಾಗೂ ಟೆಕ್ಸ್ಟೈಲ್ಸ್ ಸಂಬಂಧಿತ ಷೇರುಗಳು ಏರಿಕೆಗೊಂಡಿವೆ.

ಸೋಮವಾರ ಸೆನ್ಸೆಕ್ಸ್ 2300 ಪಾಯಿಂಟ್ಸ್ ಜಿಗಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 646 ಪಾಯಿಂಟ್ಸ್ ಏರಿಕೆಗೊಂಡಿದೆ. ಇದೀಗ ಮಂಗಳವಾರ ಕೂಡ ಏರಿಕೆಗೊಂಡಿದ್ದು, ಜೊತೆಗೆ ಡಾಲರ್ ಏಳು ವಾರಗಳ ಗರಿಷ್ಠ ಮಟ್ಟಕ್ಕೆ ಏರಿದೆ. ರೂಪಾಯಿ ಪ್ರತಿ ಡಾಲರ್ಗೆ 73.05 ರಷ್ಟಿದೆ.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications