Budget 2024: ಷೇರುಮಾರುಕಟ್ಟೆಗೆ ಆಘಾತ; ಆರಂಭದಲ್ಲೇ ಭಾರಿ ಕುಸಿತ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವಾಗಲೇ ಎಸ್&ಪಿ ಬಿಎಸ್‌ಇ ಸೆನ್ಸೆಕ್ಸ್ 1150 ಅಂಕಗಳ ಕುಸಿತ ಕಂಡಿದ್ದು, ಎನ್‌ಎಸ್‌ಇ ನಿಫ್ಟಿ 50 300 ಅಂಕಗಳ ಕುಸಿತ ಕಂಡಿದೆ.

ಬಜೆಟ್ ದಿನದಂದು ಷೇರು ಮಾರುಕಟ್ಟೆ ಆರಂಭದಿಂದಲೂ ಏರಿಳಿತ ಕಾಣುತ್ತಿದೆ. 1150 ಅಂಕಗಳಷ್ಟು ಕುಸಿತ ಕಂಡಿದ್ದ ಸೆನ್ಸೆಕ್ಸ್ ಬಳಿಕ ಸುಧಾರಿಸಿಕೊಂಡಿದ್ದು, ಬಳಿಕ 650 ಅಂಕಗಳು ಕುಸಿಯಿತು. 80,000 ಅಂಕಗಳ ಒಳಗಡೆಗೆ ಕುಸಿದಿದ್ದು, 12.30ರ ವೇಳೆಗೆ 79,865.20 ಅಂಕಗಳಿಷ್ಟಿದೆ.

Sensex Plummets Over 1 000 Points Amid Union Budget Presentation

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ರೂ.ಗಳ ಹಂಚಿಕೆಯನ್ನು ಘೋಷಿಸುತ್ತಿದ್ದಂತೆ, ಕೃಷಿ ಷೇರುಗಳು ಶೇಕಡಾ 10 ರಷ್ಟು ಏರಿಕೆ ಕಂಡವು. ಕಾವೇರಿ ಸೀಡ್ ಕಂಪನಿ ಲಿಮಿಟೆಡ್, ಕೋರಮಂಡಲ್ ಆಗ್ರೋ ಪ್ರಾಡಕ್ಟ್ಸ್ ಮತ್ತು ಆಯಿಲ್ಸ್ ಲಿಮಿಟೆಡ್, ಧನುಕಾ ಅಗ್ರಿಟೆಕ್ ಲಿಮಿಟೆಡ್, ಮತ್ತು ನೋವಾ ಅಗ್ರಿಟೆಕ್ ಲಿಮಿಟೆಡ್ ಲಾಭ ಕಂಡಿವೆ.

ಒಎನ್‌ಜಿಸಿ, ಶ್ರೀರಾಮ್ ಫೈನಾನ್ಸ್, ಹಿಂಡಾಲ್ಕೊ, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಬಿಪಿಸಿಎಲ್ ಮತ್ತು ರಿಲಯನ್ಸ್ ಷೇರು ಮಾರುಕಟ್ಟೆಗಳಲ್ಲಿ ಹೆಚ್ಚು ನಷ್ಟ ಅನುಭವಿಸಿವೆ. ಬಜೆಟ್ ಮಂಡಿಸುತ್ತಿದ್ದಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+