ದಿನಾಂತ್ಯಕ್ಕೆ ಉತ್ತಮ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ

ನವದೆಹಲಿ, ಡಿಸೆಂಬರ್ 11: ಭಾರತದ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಲಾಭ- ನಷ್ಟದ ತೂಗುಯ್ಯಾಲೆಗೆ ಸಾಕ್ಷಿ ಆಗಬೇಕಾಯಿತು. ದಿನದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕವು ಐನೂರಕ್ಕೂ ಹೆಚ್ಚು ಅಂಶ ಹಾಗೂ ನಿಫ್ಟಿ ಸೂಚ್ಯಂಕವು ನೂರೈವತ್ತಕ್ಕೂ ಹೆಚ್ಚು ಅಂಶಗಳಷ್ಟು ಕುಸಿತ ಕಂಡಿತ್ತು.

ಆದರೆ, ದಿನದ ಕೊನೆಗೆ ಸೆನ್ಸೆಕ್ಸ್ 190.29 ಅಂಶಗಳು ಹಾಗೂ ನಿಫ್ಟಿ 60.7 ಅಂಶಗಳ ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿತು. ಬಿಜೆಪಿ ಅಧಿಕಾರದಲ್ಲಿದ್ದ ರಾಜಸ್ತಾನ ಹಾಗೂ ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯ ಭಾರೀ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್ ನಾಯಕ ಮಿಲಿಂದ್ ದೇವೋರಾ ಮಾತನಾಡಿ, ಹಲವು ಕೈಗಾರಿಕೋದ್ಯಮಿಗಳು ನನ್ನ ಜತೆ ಮಾತನಾಡಿದರು. ಕಾಂಗ್ರೆಸ್ ಪಕ್ಷವು ಗೆಲುವುದು ಸಾಧಿಸಿರುವುದು ಅವರಿಗೆ ಸಂತೋಷವಾಗಿದೆ. ಅದೇ ಅಭಿಪ್ರಾಯವು ಷೇರು ಮಾರುಕಟ್ಟೆಯ ಫಲಿತಾಂಶದ ಮೂಲಕ ಅಭಿವ್ಯಕ್ತಿಯಾಗಿದೆ ಎಂದು ಹೇಳಿದ್ದಾರೆ.

Sensex, nifty index Increased after early loss

ಯೆಸ್ ಬ್ಯಾಂಕ್, ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್, ಟೈಟಾನ್ ಕಂಪನಿ, ಝೀ ಎಂಟರ್ ಟೇನ್ ಮೆಂಟ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಉತ್ತಮ ಏರಿಕೆ ದಾಖಲಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+