Get Updates
Get notified of breaking news, exclusive insights, and must-see stories!

ಷೇರುಪೇಟೆ: ಸೆನ್ಸೆಕ್ಸ್ 549 ಪಾಯಿಂಟ್ಸ್ ಕುಸಿತ, ನಿಫ್ಟಿ 161 ಪಾಯಿಂಟ್ಸ್ ಇಳಿಕೆ

ನವದೆಹಲಿ, ಜನವರಿ 15: ನಾಗಾಲೋಟದಲ್ಲಿ ಸಾಗುತ್ತಿದ್ದ ಭಾರತೀಯ ಷೇರುಪೇಟೆ ಶುಕ್ರವಾರ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 549 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 161 ಪಾಯಿಂಟ್ಸ್ ಕುಸಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 549 ಪಾಯಿಂಟ್ಸ್ ಅಥವಾ ಶೇಕಡಾ 1.11ರಷ್ಟು ಇಳಿಕೆಗೊಂಡು 49,034.67 ಪಾಯಿಂಟ್ಸ್‌ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 161.9 ಪಾಯಿಂಟ್ಸ್‌ ಅಥವಾ ಶೇಕಡಾ 1.11ರಷ್ಟು ಇಳಿಕೆಗೊಂಡು 14,433.70 ಪಾಯಿಂಟ್ಸ್ ತಲುಪಿದೆ.

ಇಂದು ಸುಮಾರು 1070 ಷೇರುಗಳು ಏರಿಕೆಗೊಂಡರೆ, 1897 ಷೇರುಗಳು ಕುಸಿದಿವೆ ಮತ್ತು 139 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Sensex Falls 549 Points: Nifty Ends Below 14450

ಟೆಕ್ ಮಹೀಂದ್ರಾ, ಗೇಲ್, ಎಚ್‌ಸಿಎಲ್ ಟೆಕ್, ವಿಪ್ರೊ ಮತ್ತು ಒಎನ್‌ಜಿಸಿ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಟಾಟಾ ಮೋಟಾರ್ಸ್, ಭಾರ್ತಿ ಏರ್‌ಟೆಲ್, ಯುಪಿಎಲ್, ಐಟಿಸಿ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಏರಿಕೆಗೊಂಡ ಷೇರುಗಳಾಗಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 73.12 ಕ್ಕೆ ಕೊನೆಗೊಂಡಿದೆ. ಇದು ಗುರುವಾರ ಪ್ರತಿ ಡಾಲರ್‌ಗೆ 73.08 ಕ್ಕೆ ಇಳಿದು 73.04 ಕ್ಕೆ ತಲುಪಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+