ಮೊದಲು ಏರಿಕೆ, ನಂತರ ಸೆನ್ಸೆಕ್ಸ್ 337, ನಿಫ್ಟಿ 88 ಅಂಕ ಇಳಿಕೆ
ಮುಂಬೈ, ಆಗಸ್ಟ್, 26: ಬುಧವಾರ ಸಹ ಷೇರು ಮಾರುಕಟ್ಟೆ ಕೊಂಚ ಇಳಿಕೆಯಲ್ಲೇ ಮುಕ್ತಾಯಗೊಂಡಿತು. ಗ್ಲೋಬಲ್ ಮಾರುಕಟ್ಟೆಯ ಬದಲಾವಣೆ ಪರಿಣಾಮ ನೇರವಾಗಿ ಮುಂಬೈ ಮಾರುಕಟ್ಟೆ ಮೇಲೆ ಬಿದ್ದಿತ್ತು.
317 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್25,714ರಲ್ಲಿ ಅಂತ್ಯವಾದರೆ, 88 ಅಂಕ ಇಳಿಕೆ ಕಂಡ ನಿಫ್ಟಿ 7791 ಅಂಕದಲ್ಲಿ ಕೊನೆಯಾಯಿತು. ಚೀನಾದ ಶಾಂಘೈ ಮಾರುಕಟ್ಟೆಯಲ್ಲಿನ ಬದಲಾವಣೆ ದೇಶದ ಬಂಡವಾಳ ಹೂಡಿಕೆಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಬುಧವಾರವೂ ಅದರ ಪರಿಣಾಮ ಮುಂದುವರಿದಿತ್ತು.[ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ, ಲಕ್ಷ ಕೋಟಿ ರು ನಷ್ಟ]
ಯುರೋಪಿನ ಮಾರುಕಟ್ಟೆ ಸಹ ಇಳಿಮುಖವಾಗೇ ಸಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ದೊಡ್ಡ ನಷ್ಟ ಅನುಭವಿಸಿದವು.

ಹೀರೋ ಮೋಟಾರ್ ಕಾರ್ಪ್, ಮಹೀಂದ್ರಾ ಷೇರುಗಳು ನಿಫ್ಟಿಯಲ್ಲಿ ಹಿನ್ನಡೆ ಕಂಡವು. ಮಿಡ್ ಕ್ಯಾಪ್ ಷೇರುಗಳು ಅಸ್ತಿತ್ವ ಕಂಡುಕೊಳ್ಳಲು ಹೋರಾಟ ನಡೆಸಿದವು. ಟಾಟಾ ಪವರ್ ಷೇರುಗಳ ವಹಿವಾಟು ಜೋರಾಗಿತ್ತು.
ಆದರೆ ಲಾಜಿಸ್ಟಿಕ್ ಷೇರುಗಳು ಗಳಿಕೆ ಸಂಪಾದಿಸಿದವು. ಗೆಟ್ ವೇ ಮತ್ತು ವಿಆರ್ ಎಲ್ ಲಾಜಿಸ್ಟಿಕ್ ಷೇರುಗಳು ಗಳಿಕೆ ಸಂಪಾದನೆ ಮಾಡಿದವು. ಆಯಿಲ್ ಮತ್ತು ಗ್ಯಾಸ್ ಗೆ ಸಂಬಂಧಿಸಿದ ಷೇರುಗಳು ಕೊಂಚ ಗಳಿಕೆ ಕಂಡುಕೊಂಡವು.












Click it and Unblock the Notifications