ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಖಾತೆದಾರರಿಗೆ ಒಂದೊಳ್ಳೆ ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 03: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಉಳಿತಾಯ ಖಾತೆಯ ಠೇವಣಿಯ ಕನಿಷ್ಟ ದರವನ್ನು ಇಳಿಕೆ ಮಾಡಿದ ಬಳಿಕ ಮತ್ತೊಂದು ಹಿತಕರ ಸುದ್ದಿ ನೀಡಿದೆ.

ಎಸ್ಬಿಐ ಉಳಿತಾಯ ಖಾತೆ ಕನಿಷ್ಟ ಠೇವಣಿ ದರ ಇಳಿಕೆಎಸ್ಬಿಐ ಉಳಿತಾಯ ಖಾತೆ ಕನಿಷ್ಟ ಠೇವಣಿ ದರ ಇಳಿಕೆ

ಉಳಿತಾಯ ಖಾತೆ ಸ್ಥಗಿತಗೊಳಿಸುವುದಕ್ಕೆ ವಿಧಿಸುತ್ತಿದ್ದ ದುಬಾರಿ ಶುಲ್ಕವನ್ನು ರದ್ದು ಮಾಡಿರುವುದಾಗಿ ಘೋಷಿಸಿದೆ. ಈ ಹೊಸ ನಿಯಮವು ಅಕ್ಟೋಬರ್‌ 1ರಿಂದಲೇ ಜಾರಿಗೆ ಬರಲಿದೆ.

SBI waives closure charges for savings Bank accounts

ಆದರೆ, ಖಾತೆ ಆರಂಭಿಸಿ ಕನಿಷ್ಟ ಒಂದು ವರ್ಷವಾದರೂ ಆಗಿರಬೇಕು. ಖಾತೆ ತೆರೆದ 14 ದಿನಗಳ ನಂತರ ಮತ್ತು ಖಾತೆಗೆ ಒಂದು ವರ್ಷ ಪೂರ್ಣವಾಗುವ ಮೊದಲೇ ಸ್ಥಗಿತಗೊಳಿಸಿದರೆ 500 ರು ಮತ್ತು ಜಿಎಸ್‌ಟಿ ಶುಲ್ಕ ವಸೂಲಿ ಅನ್ವಯವಾಗಲಿದೆ.

ಎಸ್ ಬಿಐನ ಅಧೀನ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮಹತ್ವ ಸೂಚನೆಎಸ್ ಬಿಐನ ಅಧೀನ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮಹತ್ವ ಸೂಚನೆ

ಹೊಸ ನಿಯಮದಡಿ, ಒಂದು ವರ್ಷದಷ್ಟು ಹಳೆಯದಾಗಿದ್ದರೆ ಮಾತ್ರ ಶುಲ್ಕ ರದ್ದತಿ ವಿಧಿಸಲಾಗುವುದಿಲ್ಲ. ಮೂಲ ಉಳಿತಾಯ ಬ್ಯಾಂಕ್‌ ಖಾತೆಗಳನ್ನು (ಬಿಎಸ್‌ಬಿಡಿ) ಸ್ಥಗಿತಗೊಳಿಸಿದರೂ ಅದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಬ್ಯಾಂಕ್ ಪ್ರಕಟಿಸಿದೆ.

ಉಳಿತಾಯ ಖಾತೆ ಸ್ಥಗಿತಗೊಳಿಸಿದ ಗ್ರಾಹಕರಿಂದ 500 ರು ಮತ್ತು ಜಿಎಸ್‌ಟಿ ತೆರಿಗೆ ವಸೂಲಿ ಮಾಡಲಾಗುತ್ತಿತ್ತು.ಆದರೆ, ಮೃತಪಟ್ಟ ಗ್ರಾಹಕರ ಖಾತೆ ಸ್ಥಗಿತಕ್ಕೆ ವಿಧಿಸಲಾಗುತ್ತಿದ್ದ ಶುಲ್ಕವನ್ನೂ ರದ್ದುಪಡಿಸಲಾಗಿದೆ.

English summary
State Bank of India (SBI), has waived off closing charges for savings account holders. The closure fee waiver is applicable for accounts which are at least 1 year old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X