Get Updates
Get notified of breaking news, exclusive insights, and must-see stories!

ಜೂನ್ 10ರಿಂದ 0.25 ಪರ್ಸೆಂಟ್ ಎಂಸಿಎಲ್‌ಆರ್‌ ಇಳಿಕೆ: ಎಸ್‌ಬಿಐ

ಬುಧವಾರ (ಜೂನ್‌ 10)ದಿಂದ ಜಾರಿಗೆ ಬರುವಂತೆ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್) ಬಡ್ಡಿದರವನ್ನು 0.25 ಪರ್ಸೆಂಟ್ ಇಳಿಕೆ ಮಾಡುವುದಾಗಿ ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಹೇಳಿದೆ.

ಎಸ್‌ಬಿಐನ ಈ ನಿರ್ಧಾರದಿಂದಾಗಿ ಕಳೆದ ಒಂದು ವರ್ಷದ ಎಂಸಿಎಲ್‌ಆರ್ 7.25 ಪರ್ಸೆಂಟ್‌ನಿಂದ 7 ಪರ್ಸೆಂಟ್‌ಗೆ ಇಳಿಕೆಯಾಗಿದೆ. ಇದರಿಂದಾಗಿ ಅರ್ಹ ಗೃಹ ಸಾಲದ 'ಇಎಂಐ' ಸಹ ಕಡಿಮೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆದಾಗ್ಯೂ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ದೇಶನದಂತೆ ಬ್ಯಾಂಕುಗಳು ಬಾಹ್ಯ ಮಾನದಂಡಕ್ಕೆ ಸ್ಥಳಾಂತರಗೊಂಡಾಗ, ಅಕ್ಟೋಬರ್ 1 ರ ನಂತರ ವಿತರಿಸಿದ ಚಿಲ್ಲರೆ ಸಾಲಗಳ ಮೇಲೆ ಎಂಸಿಎಲ್‌ಆರ್ ಕಡಿತವು ಪರಿಣಾಮ ಬೀರುವುದಿಲ್ಲ. ಬ್ಯಾಂಕುಗಳು ಈಗ ರೆಪೊ ದರ, ಅಥವಾ ಮೂರು ತಿಂಗಳ ಅಥವಾ ಆರು ತಿಂಗಳ ಖಜಾನೆ ಬಿಲ್‌ಗಳ ಮೇಲಿನ ಇಳುವರಿ ಅಥವಾ ಫೈನಾನ್ಷಿಯಲ್ ಬೆಂಚ್‌ಮಾರ್ಕ್ಸ್ ಇಂಡಿಯಾ ಪ್ರೈ.ಲಿ. ಪ್ರಕಟಿಸಿದ ಯಾವುದೇ ಮಾನದಂಡದ ದರಗಳ ನಡುವೆ ಆಯ್ಕೆ ಮಾಡಬಹುದು.

SBI Lower MCLR Rate By 25 Basis Points Effective June 10

ಇದೇ ವೇಳೆ ಜುಲೈ 1ರಿಂದ ಅನ್ವಯಿಸುವಂತೆ ರೆಪೊ ಆಧಾರಿತ ಸಾಲಗಳ ಮೇಲಿನ ಬಡ್ಡಿದರ (ಆರ್‌ಎಲ್ಎಲ್ಆರ್) ಮತ್ತು ಬಾಹ್ಯ ಮಾನದಂಡ (ಇಬಿಆರ್) ಆಧರಿಸಿದ ಬಡ್ಡಿದರ 0.40 ಪರ್ಸೆಂಟ್ ಕಡಿಮೆ ಮಾಡಿದೆ. ಇದರಿಂದಾಗಿ ಆರ್‌ಎಲ್‌ಎಲ್‌ಆರ್ ನೀಡಿಕೆ ದರ 6.65 ಪರ್ಸೆಂಟ್‌ ರಿಂದ 6.25 ಪರ್ಸೆಂಟ್‌ ಹಾಗೂ ಇಆರ್‌ಬಿ ನೀಡಿಕೆ ದರ 7.05 ಪರ್ಸೆಂಟ್‌ ರಿಂದ 6.65 ಪರ್ಸೆಂಟ್‌ಗೆ ತಲುಪಲಿದೆ.

ಆರ್‌ಬಿಐ ಇತ್ತೀಚೆಗೆ ರೆಪೊ ದರವನ್ನು 0.40 ಪರ್ಸೆಂಟ್ ಕಡಿತಗೊಳಿಸಿದ ಬಳಿಕ ಎಸ್‌ಬಿಐ ಇಆರ್‌ಬಿ ಮತ್ತು ಆರ್‌ಎಲ್ಎಲ್ಆರ್ ಕಡಿತ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+