ದೊಡ್ಡ ಟಿವಿಗಳ ಮೇಲೆ ಭರ್ಜರಿ ಆಫರ್ ನೀಡಿದ ಸ್ಯಾಮ್‌ಸಂಗ್

ನವದೆಹಲಿ, ಜನವರಿ 04: ಸ್ಯಾಮ್‌ಸಂಗ್ ಇಂಡಿಯಾ ತನ್ನ 55 ಇಂಚಿನ ಮತ್ತು ಅದಕ್ಕಿಂತ ಹೆಚ್ಚಿನ ಪ್ರೀಮಿಯಂ ಶ್ರೇಣಿಯ ಟಿವಿಗಳ ಮೇಲೆ ವಿಶೇಷ ಆಫರ್ ಘೋಷಿಸಿದೆ. ದೇಶದ ಎಲ್ಲ ಪ್ರಮುಖ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿಗಳಲ್ಲಿ ಈ ಆಫರ್‌ ಪಡೆಯಬಹುದು ಎಂದು ಹೇಳಿದ್ದು, ಸ್ಯಾಮ್‌ಸಂಗ್ ಬಿಗ್ ಟಿವಿ ಡೇಸ್ ಆಫರ್ ಜನವರಿ 31, 2021 ರವರೆಗೆ ಲಭ್ಯವಿರುತ್ತವೆ.

55 ಇಂಚು, 65 ಇಂಚು, 75 ಇಂಚು, 82 ಇಂಚು ಮತ್ತು 85 ಇಂಚಿನ ಕ್ಯೂಎಲ್‌ಇಡಿ ಟಿವಿಗಳು, ಕ್ರಿಸ್ಟಲ್ 4 ಕೆ ಯುಹೆಚ್‌ಡಿ, ಕ್ಯೂಎಲ್‌ಇಡಿ 8 ಕೆ ಟಿವಿಗಳು ದೊಡ್ಡ ಡಿಸ್‌ಪ್ಲೇ ಸ್ಯಾಮ್‌ಸಂಗ್ ಟಿವಿಗಳನ್ನು ಖರೀದಿಸುವಾಗ ಗ್ರಾಹಕರು ಆಫರ್ ಪಡೆಯಬಹುದು. ಹೆಚ್ಚುವರಿಯಾಗಿ, ಗ್ರಾಹಕರು ಶೇಕಡಾ 20ರಷ್ಟು ಕ್ಯಾಶ್‌ಬ್ಯಾಕ್ ಮತ್ತು ವಿಸ್ತೃತ ಖಾತರಿ ಕೊಡುಗೆಗಳನ್ನು ಕಡಿಮೆ ಇಎಂಐ 1,990 ರವರೆಗೆ ಪಡೆಯಬಹುದು.

ಈ ಅವಧಿಯಲ್ಲಿ, ಗ್ರಾಹಕರು 22,999 ರೂ. ಮೌಲ್ಯದ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎ 51 ಸ್ಮಾರ್ಟ್‌ಫೋನ್ ಅನ್ನು 65 ಇಂಚಿನ ಕ್ಯೂಎಲ್‌ಇಡಿ ಟಿವಿ ಮತ್ತು 75 ಇಂಚಿನ ಕ್ರಿಸ್ಟಲ್ 4 ಕೆ ಯುಹೆಚ್‌ಡಿ ಟಿವಿಗಳೊಂದಿಗೆ ಪಡೆಯುತ್ತಾರೆ. ಜೊತೆಗೆ 18,999 ರೂ. ಮೌಲ್ಯದ ಗ್ಯಾಲಕ್ಸಿ ಎ 31 ಸ್ಮಾರ್ಟ್‌ಫೋನ್ ಅನ್ನು 55 ಇಂಚಿನ ಕ್ಯೂಎಲ್‌ಇಡಿ ಟಿವಿಗಳು ಮತ್ತು 65 ಇಂಚಿನ ಕ್ರಿಸ್ಟಲ್ 4 ಕೆ ಯುಹೆಚ್‌ಡಿ ಟಿವಿಗಳೊಂದಿಗೆ ಪಡೆಯಲಿದ್ದಾರೆ.

Samsung Announces Big TV Offers: Know More

75 ಇಂಚಿನ, 82 ಇಂಚಿನ ಮತ್ತು 85 ಇಂಚಿನ ಕ್ಯೂಎಲ್‌ಇಡಿ ಟಿವಿಗಳನ್ನು ಖರೀದಿಸುವ ಗ್ರಾಹಕರು ಆಯ್ದ ಟಿವಿ ಮಾದರಿಗಳಲ್ಲಿ 48,990 ರೂಪಾಯಿ ಮೌಲ್ಯದ ಸೌಂಡ್‌ಬಾರ್ ಎಚ್‌ಡಬ್ಲ್ಯೂ-ಕ್ಯೂ 800 ಟಿ ಅಥವಾ 99,990 ಮೌಲ್ಯದ ಸೌಂಡ್‌ಬಾರ್ ಎಚ್‌ಡಬ್ಲ್ಯೂ-ಕ್ಯೂ 900 ಟಿ ಪಡೆಯುತ್ತಾರೆ.

ಇದರ ಜೊತೆಗೆ ಕ್ಯೂಎಲ್‌ಇಡಿ ಟಿವಿಗಳು 10 ವರ್ಷಗಳ ಸ್ಕ್ರೀನ್ ಬರ್ನ್ ಇನ್ ವಾರೆಂಟಿ ಮತ್ತು , ಒಂದು ವರ್ಷದ ಸಮಗ್ರ ವಾರೆಂಟಿ ಜೊತೆಗೆ ಒಂದು ವರ್ಷ ಹೆಚ್ಚುವರಿ ಪ್ಯಾನೆಲ್ ವಾರೆಂಟಿ ಕೂಡ ಸಿಗಲಿದೆ ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+