ಅಮೆರಿಕಾ ಡಾಲರ್ ಎದುರು ರೂಪಾಯಿ ಜಿಗಿತ: 48 ಪೈಸೆ ಏರಿಕೆ
ನವದೆಹಲಿ, ಡಿಸೆಂಬರ್ 01: ಅಮೆರಿಕಾ ಡಾಲರ್ ಎದುರು ಭಾರತದ ರೂಪಾಯಿ ಮಂಗಳವಾರ ತೀವ್ರ ಜಿಗಿತ ಕಂಡಿದೆ. ಬಲವಾದ ದೇಶೀಯ ಷೇರುಗಳಲ್ಲಿನ ಹೂಡಿಕೆ ಮತ್ತು ವಿದೇಶಿ ನಿಧಿಯ ಒಳಹರಿವು ಹೆಚ್ಚಾಗಿದೆ.
ಅಮೆರಿಕಾ ಡಾಲರ್ ಎದುರು ರೂಪಾಯಿ ಮೌಲ್ಯವು ಇಂದು 48 ಪೈಸೆ ಏರಿಕೆಯಾಗಿ 73.57 ಕ್ಕೆ ತಲುಪಿದೆ. ಹಿಂದಿನ 74.05 ಕ್ಕೆ ಹೋಲಿಸಿದರೆ. ಪ್ರಸ್ತುತ, ಯುಎಸ್ ಡಾಲರ್ ವಿರುದ್ಧ ರೂಪಾಯಿ 73.60 ಕ್ಕೆ ವಹಿವಾಟು ನಡೆಸುತ್ತಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಆರ್ಥಿಕ ಅಂಶಗಳು ಹೊರಬಿದ್ದ ಬಳಿಕ ಹೂಡಿಕೆದಾರರ ಅಪಾಯದ ಭಾವನೆ ಸುಧಾರಿಸಿದೆ ಎಂದು ಎಂದು ವಿಶ್ಲೇಷಕರು ಹೇಳಿದ್ದಾರೆ. ವಿದೇಶಿ ಮಾರುಕಟ್ಟೆಯಲ್ಲಿ ಅಮೆರಿಕಾದ ಡಾಲರ್ ದುರ್ಬಲಗೊಂಡಿರುವುದು ರೂಪಾಯಿ ಮೌಲ್ಯದ ವರ್ಧನೆಯನ್ನು ಬೆಂಬಲಿಸಿದೆ.

ಶುಕ್ರವಾರ ಡಾಲರ್ ಎದುರು ರೂಪಾಯಿ 17 ಪೈಸೆ ಕುಸಿದು 74.05ಕ್ಕೆ ತಲುಪಿತ್ತು. ಸೋಮವಾರ ಗುರುನಾನಕ್ ಜಯಂತಿ ಪ್ರಯುಕ್ತ ಷೇರುಪೇಟೆ ಸೇರಿದಂತೆ ವಿದೇಶಿ ವಿನಿಯಮ ಮಾರುಕಟ್ಟೆ ಮುಚ್ಚಲಾಗಿತ್ತು.
ಇದರ ನಡುವೆ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡಿತು. ಉತ್ಪಾದನೆಯಲ್ಲಿ ಏರಿಕೆ ಕಂಡಿದ್ದು ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇಕಡಾ 7.5 ರಷ್ಟು ಕಡಿಮೆ ಸಂಕೋಚನಗೊಂಡಿತು. ಈ ಮೂಲಕ ಗ್ರಾಹಕರ ಬೇಡಿಕೆಯು ಮತ್ತೆ ಪುಟಿಯುವ ಭರವಸೆಯನ್ನು ಹೊಂದಿದೆ.












Click it and Unblock the Notifications