ಡಾಲರ್ ಎದುರು ರೂಪಾಯಿ ಮೌಲ್ಯ 72.66ಕ್ಕೆ ಕುಸಿತ

ನವದೆಹಲಿ, ಸೆಪ್ಟೆಂಬರ್ 10: ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ ಮತ್ತೆ ತೀವ್ರ ಕುಸಿತ ಕಂಡಿದ್ದು, ಅದನ್ನು ನಿಯಂತ್ರಿಸುವ ಪ್ರಯತ್ನಗಳು ಫಲ ನೀಡುತ್ತಿಲ್ಲ.

ಸೋಮವಾರ ಪ್ರತಿ ಡಾಲರ್‌ಗೆ ರೂಪಾಯಿ ಮೌಲ್ಯ 72.66 ಕ್ಕೆ ತಲುಪಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ.

ಹಿಂದಿನ ದಿನ 71.73 ರೂ.ನೊಂದಿಗೆ ಅಂತ್ಯಗೊಂಡಿದ್ದ ರೂಪಾಯಿ ಮೌಲ್ಯ, ಸೋಮವಾರ 72.15 ರೂ.ದೊಂದಿಗೆ ಆರಂಭಗೊಂಡಿತು.

ಇತರೆ ವಿದೇಶಿ ಕರೆನ್ಸಿಗಳ ಎದುರು ಡಾಲರ್ ಬಲಗೊಂಡಿದ್ದು, ಅಮೆರಿಕದ ಕರೆನ್ಸಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ರೂಪಾಯಿ ಮೌಲ್ಯದಲ್ಲಿ ಭಾರಿ ಕುಸಿತವಾಗುತ್ತಿದೆ.

ಅಮರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಸಂಬಂಧಿಸಿದ ಕೆಲವು ಅಂಶಗಳು ಇಲ್ಲಿವೆ.

ಅಮೆರಿಕದ ಡಾಲರ್‌ಗೆ ಬೇಡಿಕೆ

ಅಮೆರಿಕದ ಡಾಲರ್‌ಗೆ ಬೇಡಿಕೆ

ವಿದೇಶಿ ವಿನಿಮಯ ಡೀಲರ್‌ಗಳ ಪ್ರಕಾರ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೈಲ ಆಮದುದಾರರು, ಮುಖ್ಯವಾಗಿ ಸಂಸ್ಕರಣಾಗಾರಗಳು ಅಮೆರಿಕದ ಡಾಲರ್‌ಗೆ ಹೆಚ್ಚು ಬೇಡಿಕೆ ಇರಿಸಿದ್ದಾರೆ. ಅಲ್ಲದೆ, ಬಂಡವಾಳ ಹೂಡಿಕೆ, ವಿದೇಶಿ ನಿಧಿ ಹೊರಹೋಗುವಿಕೆ ಕಾರಣದಿಂದ ದೇಶಿ ಕರೆನ್ಸಿ ಮೇಲೆ ಭಾರ ಹೆಚ್ಚಾಗಿದೆ.

ರಿಸರ್ವ್ ಬ್ಯಾಂಕ್ ಪ್ರಯತ್ನ

ರಿಸರ್ವ್ ಬ್ಯಾಂಕ್ ಪ್ರಯತ್ನ

ಅಮೆರಿಕ-ಚೀನಾ ನಡುವೆ ವ್ಯಾಪಾರ ಸಂಘರ್ಷವನ್ನು ತೀವ್ರವಾಗುವ ಭೀತಿ ಮೂಡಿರುವುದರಿಂದ ಅಮೆರಿಕ ಡಾಲರ್ ತನ್ನ ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ ಬಲಗೊಂಡಿದೆ. ಇದು ರೂಪಾಯಿ ಮೇಲೆಯೂ ಒತ್ತಡ ಸೃಷ್ಟಿಸಿದೆ.

ಶುಕ್ರವಾರದ ನಡೆಗೆ ವಿರುದ್ಧವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ಗಳ ಮಾರಾಟವನ್ನು ನಿಧಾನಗೊಳಿಸಿದೆ ಎಂದು ಡೀಲರ್‌ಗಳು ತಿಳಿರುವುದಾಗಿ ವರದಿಯಾಗಿದೆ.

ಶೇ 8.12ಕ್ಕೆ ತಲುಪಿದ ಬಾಂಡ್ ಯೀಲ್ಡ್

ಶೇ 8.12ಕ್ಕೆ ತಲುಪಿದ ಬಾಂಡ್ ಯೀಲ್ಡ್

ಕಚ್ಚಾ ತೈಲದ ಬೆಲೆ ಏರಿಕೆ ಸಮಸ್ಯೆ ಮತ್ತು ರೂಪಾಯಿ ಮೌಲ್ಯ ದುರ್ಬಲದ ಕಾರಣಗಳಿಂದ ಹಣದುಬ್ಬರ ಉಂಟಾಗುವ ಭಯ ಮೂಡಿದ್ದು, 10 ವರ್ಷಗಳ ಬಾಂಡ್ ಯೀಲ್ಡ್ 2014ರಿಂದ ಅತ್ಯಧಿಕ ಮಟ್ಟಕ್ಕೆ ತಲುಪಿದೆ.

* 10 ವರ್ಷದ ಬಾಂಡ್ ಯೀಲ್ಡ್ ಶೇ 8.12ಕ್ಕೆ ತಲುಪಿದೆ. 2018ರ ನವೆಂಬರ್ 28ರಿಂದ ಇದುವರೆಗಿನ ಅತ್ಯಧಿಕ ಮಟ್ಟವಾಗಿದೆ. 10 ವರ್ಷದ ಬಾಂಡ್ ಯೀಲ್ಡ್ ಶುಕ್ರವಾರ ಶೇ 8.03ನೊಂದಿಗೆ ಅಂತ್ಯಗೊಂಡಿತ್ತು.

26 ಪಾಯಿಂಟ್‌ ಏರಿಕೆ

26 ಪಾಯಿಂಟ್‌ ಏರಿಕೆ

ಶುಕ್ರವಾರ ಡಾಲರ್ ಎದುರು ರೂಪಾಯಿ 26 ಪಾಯಿಂಟ್‌ಗಳಷ್ಟು ಏರಿಕೆಯಾಗಿ 71.76 ದರಕ್ಕೆ ತಲುಪಿತ್ತು. ಏಳು ದಿನಗಳ ಇಳಿಕೆ ಬಳಿಕ ಅಮೆರಿಕದ ಕರೆನ್ಸಿ ಎದುರು ರೂಪಾಯಿ ಮೌಲ್ಯ ತುಸು ಚೇತರಿಸಿಕೊಂಡಿತ್ತು.

* ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ರಿಸರ್ವ್ ಬ್ಯಾಂಕ್ ತೀವ್ರ ಮಧ್ಯಪ್ರದೇಶ ಮಾಡಿತು. ಡಾಲರ್ ಮೊತ್ತದ ಎದುರು ರೂಪಾಯಿ ಮೌಲ್ಯ 72ಕ್ಕಿಂತ ಹೆಚ್ಚಾಗದಂತೆ ತಡೆಯಲು ಪ್ರಯತ್ನ ನಡೆಸಿತ್ತು.

ಷೇರು ಮಾರುಕಟ್ಟೆ ವಹಿವಾಟು ಕುಸಿತ

ಷೇರು ಮಾರುಕಟ್ಟೆ ವಹಿವಾಟು ಕುಸಿತ

ಏಷ್ಯಾದ ಕರೆನ್ಸಿಗಳ ನಕಾರಾತ್ಮಕ ಸ್ಥಿತಿಯ ನಡುವೆಯೇ ಈಕ್ವಿಟಿ ಇಂಡಿಸೆಸ್ ವಾರವನ್ನು ಹಿನ್ನಡೆಯೊಂದಿಗೆ ಆರಂಭಿಸಿದೆ. ಬೆಳಿಗ್ಗೆ 9.45ರ ಸಮಯದಲ್ಲಿ ಎಸ್‌ ಆಂಡ್ ಪಿ ಬಿಎಸ್‌ಇ ಸೆನ್ಸೆಕ್ಸ್ 38,218.03 ವಹಿವಾಟಿನೊಂದಿಗೆ 171.79 ಅಂಶಗಳಷ್ಟು ಅಂದರೆ, ಶೇ 0.45 ರಷ್ಟು ಕುಸಿತ ಕಂಡಿತು. 11,539.75 ರಲ್ಲಿದ್ದ ನಿಫ್ಟಿ, 49.35 ಅಂಶಗಳಷ್ಟು (ಶೇ 0.43) ಇಳಿಕೆ ಕಂಡಿತು.

ಅಮೆರಿಕ-ಚೀನಾ ವ್ಯಾಪಾರ ಸಂಘರ್ಷ

ಅಮೆರಿಕ-ಚೀನಾ ವ್ಯಾಪಾರ ಸಂಘರ್ಷ

ಡಾಲರ್‌ ಬೇಡಿಕೆ ಹೆಚ್ಚುತ್ತಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದೊಂದಿಗೆ ವ್ಯಾಪಾರ ವಿವಾದದ ಕಾವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇದರಿಂದ ಸತತ ಎಂಟನೇ ದಿನ ಏಷ್ಯಾದ ಕರೆನ್ಸಿಗಳು ಕುಸಿತದೊಂದಿಗೆ ಆರಂಭವಾಗಿವೆ.

* ಇರಾನ್‌ನ ಕಚ್ಚಾ ತೈಲದ ರಫ್ತಿನ ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳು ನವೆಂಬರ್‌ನಿಂದ ಜಾರಿಯಾಗುತ್ತಿದ್ದು, ಈ ಪರಿಸ್ಥಿತಿಯ ಮೇಲೆ ದೇಶಿ ಮಾರುಕಟ್ಟೆಗಳು ಕಣ್ಣಿಟ್ಟಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+