• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಪ್ರಿಲ್‌ನಲ್ಲಿ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳ ಬೆಲೆ ಹೆಚ್ಚಳ ಸಾಧ್ಯತೆ

|

ನವದೆಹಲಿ, ಫೆಬ್ರವರಿ 11: ಸರಕುಗಳ ಬೆಲೆ ಹೆಚ್ಚಳದಿಂದಾಗಿ ಜನಪ್ರಿಯ ಬೈಕ್‌ಗಳಾದ ರಾಯಲ್‌ ಎನ್‌ಫೀಲ್ಡ್‌ ಬೆಲೆಯು ಏಪ್ರಿಲ್‌ನಿಂದ ಹೆಚ್ಚಾಗಬಹುದು ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಈಚರ್‌ ಮೋಟಾರ್ಸ್‌ನ ಭಾಗವಾಗಿರುವ ಈ ಕಂಪನಿಯು ಈಗಾಗಲೇ ಕಳೆದ ಆರು ತಿಂಗಳಲ್ಲಿ ಅನೇಕ ಬಾರಿ ಬೆಲೆಗಳನ್ನು ಹೆಚ್ಚಿಸಿದೆ. ಇದರ ನಡುವೆ ಮತ್ತೆ ಕಂಪನಿಯು ಮತ್ತೆ ಬೆಲೆ ಹೆಚ್ಚಳಕ್ಕೆ ಮುಂದಾಗಬಹುದು ಎನ್ನಲಾಗಿದೆ.

ಮುಂದಿನ 5 ವರ್ಷಗಳಲ್ಲಿ ಬಿಡುಗಡೆಯಾಗಲಿವೆ 50ಕ್ಕೂ ಹೆಚ್ಚು ಹೊಸ ಹೀರೋ ಬೈಕುಗಳು

"ಸರಕುಗಳ ಬೆಲೆಗಳು ಏರಿಕೆಯಾಗಿವೆ, ಕಳೆದ ಕೆಲವು ತಿಂಗಳುಗಳಲ್ಲಿ ಬೆಲೆ ಏರಿಕೆ ಸೇರಿದಂತೆ ಅನೇಕ ವಿಷಯಗಳಿಂದ ನಾವು ಅದನ್ನು ಸರಿದೂಗಿಸಲು ಪ್ರಯತ್ನಿಸಿದ್ದೇವೆ. ಉದ್ಯಮದ ಎಲ್ಲರಂತೆ ನಾವು ಏಪ್ರಿಲ್‌ನಲ್ಲಿ ಮತ್ತೆ ಬೆಲೆಗಳನ್ನು ಹೆಚ್ಚಿಸುತ್ತಿದ್ದೇವೆ" ಎಂದು ರಾಯಲ್ ಎನ್‌ಫೀಲ್ಡ್ ಸಿಇಒ ವಿನೋದ್ ಕೆ ದಸಾರಿ ಸುದ್ದಿಗಾರರಿಗೆ ತಿಳಿಸಿದರು.

ಇನ್ನು ಜಗತ್ತಿನ ಎಲ್ಲ ಸಂಬಂಧಿತ ಮಾರುಕಟ್ಟೆಗಳಲ್ಲಿ ಅಗ್ರಸ್ಥಾನದಲ್ಲಿರಲು ಬಯಸುತ್ತೇವೆ. ಮುಂದಿನ ದಶಕದಲ್ಲಿ ಮಧ್ಯಮ ಗಾತ್ರದ ಬೈಕು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವುದು ನಮ್ಮ ಗುರಿ ಎಂದು ಸಿಇಒ ವಿನೋದ್ ಹೇಳಿದ್ದಾರೆ.

ಕಂಪನಿಯು ಎಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನದ ಕುರಿತಾಗಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ತ್ವರಿತ ಯೋಜನೆಗಳಿಲ್ಲ ಎಂದು ಹೇಳಿದ್ದಾರೆ. 2020 ರ ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ರಾಯಲ್ ಎನ್‌ಫೀಲ್ಡ್ 1.99 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು 2019-20ರ ಅಕ್ಟೋಬರ್-ಡಿಸೆಂಬರ್‌ನಲ್ಲಿ 1.89 ಲಕ್ಷ ಯುನಿಟ್‌ಗಳಿಂದ ಶೇ 5 ರಷ್ಟು ಹೆಚ್ಚಾಗಿದೆ.

English summary
Niche bike maker Royal Enfield may look at hiking prices from April in view of rising commodity prices, a top company official said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X