• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನಪ್ರಿಯಗೊಳ್ಳುತ್ತಿರುವ ರೊಪೊಸೋ ವಿಡಿಯೋ ಶೇರಿಂಗ್ ಆ್ಯಪ್

|

ಬೆಂಗಳೂರು, ಮೇ 25: ಭಾರತದಲ್ಲಿ ಮುಂಚೂಣಿಯಲ್ಲಿರುವ ವಿಡಿಯೋ-ಶೇರಿಂಗ್ ಸಾಮಾಜಿಕ ಜಾಲತಾಣವಾಗಿರುವ ರೊಪೊಸೋ ಇಂಗ್ಲೀಷ್ ಮತ್ತು 10 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ಇದು ಸಂಪೂರ್ಣವಾಗಿ ಭಾರತ ಮತ್ತು ಗ್ಲಾನ್ಸ್ ನ ಮಾಲೀಕತ್ವದ್ದಾಗಿದೆ. ಈ ರೊಪೊಸೋ ವಿಡಿಯೋ ಆ್ಯಪ್ ಗ್ರಾಹಕರು ಅಥವಾ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ತಮ್ಮ ಅನಿಸಿಕೆಗಳು ಮತ್ತು ಚಿಕ್ಕದಾದ ವಿಡಿಯೋ ಕಂಟೆಂಟ್ ಗಳನ್ನು ಹಂಚಿಕೊಳ್ಳಲು ನೆರವಾಗುತ್ತದೆ.

ರೊಪೊಸೋನಲ್ಲಿರುವ ಶಕ್ತಿಶಾಲಿ ವಿಡಿಯೋ ಕ್ರಿಯೇಷನ್ ಮತ್ತು ಎಡಿಟಿಂಗ್ ಟೂಲ್ ಗಳು ಬಳಕೆದಾರರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣ ಮಾಡಲು ಸಹಕಾರಿಯಾಗಿದೆ. ಇದರ ಜತೆಗೆ ತಮ್ಮದೇ ಭಾಷೆಯಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿದೆ. ಈ ಪ್ಲಾಟ್ ಫಾರ್ಮ್ ಈಗಾಗಲೇ 50 ದಶಲಕ್ಷ ಬಳಕೆದಾರರನ್ನು ಹೊಂದಿದ್ದು, ತಿಂಗಳೊಂದಕ್ಕೆ 5 ಬಿಲಿಯನ್ ವಿಡಿಯೋ ವೀಕ್ಷಣೆಗಳನ್ನು ಮಾಡಬಹುದಾದ ವಿಡಿಯೋಗಳನ್ನು ಹೊಂದಿದೆ. ಹೆಚ್ಚಿನ ವಿವರಗಳಿಗಾಗಿ www.roposo.com ಗೆ ಭೇಟಿ ನೀಡಬಹುದಾಗಿದೆ.

ಆರೋಗ್ಯ ಸೇತು ಅಪ್ಲಿಕೇಷನ್ ಬಳಸಲು 1921 ಡಯಲ್ ಮಾಡಿ

ಈ ಭಾಷೆಗಳಲ್ಲಿ ಲಭ್ಯ: ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ಕನ್ನಡ, ತಮಿಳು, ತೆಲುಗು, ಬೆಂಗಾಲಿ, ಮಲಯಾಳಂ, ಅರೇಬಿಕ್, ಅಸ್ಸಾಮೀಸ್, ಒಡಿಯಾ, ಉರ್ದು.

ರೊಪೊಸೋದ ಸಹ ಸಂಸ್ಥಾಪಕ, ಗ್ಲಾನ್ಸ್‌ ನ ಉಪಾಧ್ಯಕ್ಷ ಮಾನ್ಯಕ್‌ ಭಾಂಗಡಿಯಾ ಮಾತನಾಡಿ, ''ಯಾರಿಗೆ ಡ್ಯಾನ್ಸ್‌ ಬರುವುದಿಲ್ಲವೋ ಅವರಿಗೆ ಡ್ಯಾನ್‌ ಮಾಡುವಂತೆ ಮಾಡಬೇಡಿ ('If Pappu can't dance, don't make him'). ಬಳಕೆದಾರರಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಅತ್ಯದ್ಭುತವಾದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿವೆ. ವಿಶೇಷವಾಗಿ ಯುವ ಪೀಳಿಗೆಯಲ್ಲಿ ಸಾಮಾಜಿಕ ಮಾಧ್ಯಮದ ಗೀಳು ಹೆಚ್ಚಾಗಿದ್ದು, ತೀವ್ರ ರೀತಿಯ ಪರಿಣಾಮವನ್ನು ಬೀರುತ್ತಿದೆ'' ಎಂದರು.

ಡೇಟಿಂಗ್ ಆಪ್ ಬಳಸಿ ಜೀವನ ಸಂಗಾತಿ ಆಯ್ಕೆ ಬೆಂಗಳೂರಿಗರು ಮುಂದೆ

"ರೊಪೊಸೋದಲ್ಲಿ ನಾವು ಧನಾತ್ಮಕವಾದ ಕಂಟೆಂಟ್ ಮತ್ತು ಸ್ವಚ್ಛವಾದ ಮನೋರಂಜನೆಗೆ ಆದ್ಯತೆ ನೀಡುತ್ತಿದ್ದೇವೆ. ಆಕ್ಷೇಪಾರ್ಹವಾದ ವಿಷಯವನ್ನು ನೀಡುವುದು ಸವಾಲಿನದ್ದಾಗಿದೆ. ಆದರೆ ಇದು ರಾಕೆಟ್ ವಿಜ್ಞಾನವಲ್ಲ. ನಾವು ಸತತ ಮೂರು ವರ್ಷಗಳ ಕಾಲ ಬೇರುಮಟ್ಟದಿಂದ ಬೆಳೆಯಲು ಶ್ರಮ ವಹಿಸಿದ್ದೇವೆ. ಇದರ ಪರಿಣಾಮ ನಾವು ಈಗ 50 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿದ್ದೇವೆ.

ಇದರಲ್ಲಿ ನಾವು ನಮ್ಮ ಬಳಕೆದಾರರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣ ಮಾಡಿಕೊಳ್ಳುವ ವೇದಿಕೆಯನ್ನು ಕಲ್ಪಿಸಿದ್ದೇವೆ. ರೊಪೊಸೋದಲ್ಲಿರುವ ನಮ್ಮ ಕುಟುಂಬಗಳು ಮತ್ತು ಸ್ನೇಹಿತರು ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ವೇದಿಕೆಯನ್ನು ಎಲ್ಲಿಯೂ ಚ್ಯುತಿ ಬಾರದ ರೀತಿಯಲ್ಲಿ ಸ್ವಚ್ಛವಾಗಿ ಬಳಸಿಕೊಳ್ಳುತ್ತಿದ್ದಾರೆ'' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

English summary
Roposo Video Sharing Site available in Kannada and other 10 religional languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more