ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರಕ್ಕೆ ಅಮೆರಿಕದ ಸಿರಿವಂತರು ತತ್ತರ; 2ನೇ ಸ್ಥಾನದತ್ತ ಅದಾನಿ

|
Google Oneindia Kannada News

ನವದೆಹಲಿ, ಸೆ. 14: ಅಮೆರಿಕದಲ್ಲಿ ಹಣದುಬ್ಬರ ಇಳಿಯುತ್ತದೆ ಎಂದು ನಿರೀಕ್ಷಿಸಿದ್ದವರಿಗೆ ಆಘಾತ ಎನಿಸುವಂತೆ ಹಣದುಬ್ಬರ ಏರಿದೆ. ಪರಿಣಾಮವಾಗಿ ಅಮೆರಿಕದ ಷೇರುಪೇಟೆಯಲ್ಲಿ ಸಂಚಲನ ಉಂಟಾಗಿದ್ದು, ಹಲವು ಪ್ರಮುಖ ಷೇರುಗಳ ಮೌಲ್ಯ ಕಡಿಮೆ ಆಗಿದೆ. ಇದರ ಪರಿಣಾಮವಾಗಿ ಅಮೆರಿಕದ ಕೋಟಿಕೋಟಿ ಅಧಿಪತಿಗಳ ಸಂಪತ್ತು ತುಸು ಕರಗಿದೆ.

ಒಂದು ಅಂದಾಜು ಪ್ರಕಾರ, ಅಮೆರಿಕದ ಅತ್ಯಂತ ಶ್ರೀಮಂತರು 93 ಬಿಲಿಯನ್ ಡಾಲರ್ (ಸುಮಾರು 7.4 ಲಕ್ಷ ಕೋಟಿ ರೂಪಾಯಿ) ಹಣ ಕಳೆದುಕೊಂಡಿದ್ದಾರೆ. ಒಂದೇ ದಿನದಲ್ಲಿ ಆದ ನಷ್ಟ ಇದು.

ಅಮೇಜಾನ್ ಸಂಸ್ಥಾಪಕ, ಉದ್ಯಮಿ ಜೆಫ್ ಬೇಜೋಸ್ ಅವರ ಸಂಪತ್ತು 9.8 ಬಿಲಿಯನ್ ಡಾಲರ್‌ನಷ್ಟು (ಸುಮಾರು 78 ಸಾವಿರ ಕೋಟಿ ರೂ) ಕರಗಿದೆ. ಈಗ ಅವರ ಬಳಿ 150 ಬಿಲಿಯನ್ ಡಾಲರ್ (11.9 ಲಕ್ಷ ಕೋಟಿ ರೂ) ಮೌಲ್ಯದಷ್ಟು ಸಂಪತ್ತು ಇದೆ.

Americas Richest Persons Lose USD 93 Billion In One Day, As Gautam Adani Close The Gap For 2nd Place

ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ 8.35 ಬಿಲಿಯನ್ ಡಾಲರ್ (ಸುಮಾರು 66 ಸಾವಿರ ರೂಪಾಯಿ) ಹಣ ಕಳೆದುಕೊಂಡಿದ್ದಾರೆ. ಬರ್ನಾರ್ಡ್ ಆರ್ನಾಲ್ಟ್, ಬಿಲ್ ಗೇಟ್ಸ್, ವಾರೆನ್ ಬಫೆಟ್ ಮೊದಲಾದವರೂ ಒಂದೇ ದಿನದಲ್ಲಿ ಬಹಳಷ್ಟು ಹಣ ಕಳೆದುಕೊಂಡಿದ್ದಾರೆ.

ಅದಾನಿ, ಅಂಬಾನಿ ಸಂಪತ್ತು ಏರಿಕೆ
ಇಲ್ಲಿ ಕುತೂಹಲದ ಅಂಶ ಇದೆ. ಅತಿಶ್ರೀಮಂತರ ಟಾಪ್-10 ಪಟ್ಟಿಯಲ್ಲಿ ಏಳು ಮಂದಿ ಅಮೆರಿಕನ್ನರೇ ಇದ್ದಾರೆ. ಫ್ರಾನ್ಸ್‌ನ ಒಬ್ಬರು ಹಾಗೂ ಭಾರತದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಇದ್ದಾರೆ. ಈ ಅಗ್ರ ಹತ್ತರಲ್ಲಿ ಇರುವವರ ಪೈಕಿ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಮಾತ್ರ ಸಂಪತ್ತು ಹೆಚ್ಚಿಸಿಕೊಂಡಿರುವುದು.

ಗೌತಮ್ ಅದಾನಿ 1.58 ಬಿಲಿಯನ್ ಡಾಲರ್‌ನಷ್ಟು (ಸುಮಾರು 12 ಸಾವಿರ ಕೋಟಿ ರೂ) ಸಂಪತ್ತು ಏರಿಸಿಕೊಂಡಿದ್ದಾರೆ. ಈಗ ಅವರ ಒಟ್ಟು ಆಸ್ತಿ ಮೌಲ್ಯ 147 ಬಿಲಿಯನ್ ಡಾಲರ್ (11.68 ಲಕ್ಷ ಕೋಟಿ ರೂ) ಇದೆ. ಸದ್ಯ ವಿಶ್ವದ ನಂಬರ್ ಮೂರನೇ ಶ್ರೀಮಂತ ಎನಿಸಿರುವ ಅವರ ಆಸ್ತಿ ಹೀಗೇ ಹೆಚ್ಚಾದಲ್ಲಿ ಅತಿಶೀಘ್ರದಲ್ಲೇ ಎರಡನೇ ಸ್ಥಾನಕ್ಕೆ ಜಿಗಿಯುತ್ತಾರೆ. ಎರಡನೇ ಸ್ಥಾನದಲ್ಲಿರುವ ಜೆಫ್ ಬೇಜೋಸ್ ಮತ್ತು ಮೂರನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಮಧ್ಯೆ ಇರುವ ಅಂತರ 3 ಬಿಲಿಯನ್ ಡಾಲರ್ ಮಾತ್ರ.

ಇನ್ನು ಮುಕೇಶ್ ಅಂಬಾನಿ ಆಸ್ತಿ ಮೌಲ್ಯ 1.23 ಬಿಲಿಯನ್ ಡಾಲರ್‌ನಷ್ಟು (ಸುಮಾರು 9773 ಕೋಟಿ ರೂ) ಏರಿಕೆ ಆಗಿದೆ. ಸಿರಿವಂತರ ಪಟ್ಟಿಯಲ್ಲಿ ಇವರು 9ನೇ ಸ್ಥಾನಕ್ಕೆ ನೆಗೆದಿದ್ದಾರೆ.

Americas Richest Persons Lose USD 93 Billion In One Day, As Gautam Adani Close The Gap For 2nd Place

ಟಾಪ್-10 ಶ್ರೀಮಂತರು
1) ಎಲಾನ್ ಮಸ್ಕ್: 256 ಬಿಲಿಯನ್ ಡಾಲರ್
2) ಜೆಫ್ ಬೇಜೋಸ್: 150 ಬಿಲಿಯನ್ ಡಾಲರ್
3) ಗೌತಮ್ ಅದಾನಿ: 147 ಬಿಲಿಯನ್ ಡಾಲರ್
4) ಬೆರ್ನಾರ್ಡ್ ಅರ್ನಾಲ್ಟ್: 135 ಬಿಲಿಯನ್ ಡಾಲರ್
5) ಬಿಲ್ ಗೇಟ್ಸ್: 115 ಬಿಲಿಯನ್ ಡಾಲರ್
6) ವಾರೆನ್ ಬಫೆಟ್: 97 ಬಿಲಿಯನ್ ಡಾಲರ್
7) ಲ್ಯಾರಿ ಪೇಜ್: 96 ಬಿಲಿಯನ್ ಡಾಲರ್
8) ಲ್ಯಾರಿ ಎಲಿಸನ್: 94.9 ಬಿಲಿಯನ್ ಡಾಲರ್
9) ಮುಕೇಶ್ ಅಂಬಾನಿ: 93.7 ಬಿಲಿಯನ್ ಡಾಲರ್
10) ಸೆರ್ಗೇ ಬ್ರಿನ್: 91.9 ಬಿಲಿಯನ್ ಡಾಲರ್

ಅನಿರೀಕ್ಷಿತ ಹಣದುಬ್ಬರ ಏರಿಕೆ
ಅಮೆರಿಕದಲ್ಲಿ ಸಿಪಿಐ ಹಣದುಬ್ಬರ ಶೇ. 8.3ರಷ್ಟು ವಾರ್ಷಿಕ ವೇಗದಲ್ಲಿ ಏರಿದೆ. ಆರ್ಥಿಕ ತಜ್ಞರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಏರಿಕೆ ಆಗಿರುವುದು ಷೇರುಪೇಟೆಯನ್ನು ತಲ್ಲಣಗೊಳಿಸಿದೆ. ಈ ಕಾರಣದಿಂದ ಅಮೆರಿಕದ ಕೋಟ್ಯಾಧಿಪತಿಗಳ ಸಂಪತ್ತು ಒಂದೇ ದಿನದಲ್ಲಿ ಇಷ್ಟು ಕರಗಿಹೋಗಿರುವುದು.

ಡಾಲರ್ ಜಿಗಿತ
ಸೋಜಿಗ ಎಂದರೆ ಅಮೆರಿಕದ ಹಣದುಬ್ಬರ ಏರಿಕೆ ಆಗಿದ್ದ ಡಾಲರ್ ಮೌಲ್ಯ ಏರಲು ಕಾರಣವಾಗಿದೆ. ಯಾವಾಗ ಹಣದುಬ್ಬರ ಅನಿರೀಕ್ಷಿತವಾಗಿ ಏರಿತೋ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಶೇ. 0.75 ರಷ್ಟು ಬಡ್ಡಿ ದರ ಹೆಚ್ಚಿಸಬಹುದು ಎಂಬ ನಿರೀಕ್ಷೆಯೂ ಗರಿಗೆದರಿದೆ. ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ಏಷ್ಯಾದ ಷೇರುಪೇಟೆಗಳು ಅಲುಗಾಡಿವೆ. ಇದರ ಪರಿಣಾಮವಾಗಿ ಅಮೆರಿಕದ ಡಾಲರ್ ಕರೆನ್ಸಿ ಮೌಲ್ಯ ಹೆಚ್ಚಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 41 ಪೈಸೆಯಷ್ಟು ಕಡಿಮೆ ಆಗಿದೆ. ಸದ್ಯ ಬುಧವಾರದ ವಹಿವಾಟಿನಲ್ಲಿ ಒಂದು ಡಾಲರ್‌ಗೆ 79.58 ರೂ ದರ ಇದೆ.

(ಒನ್ಇಂಡಿಯಾ ಸುದ್ದಿ)

English summary
Richest persons of America suffered a loss of USD 93 billion in a day due to unexpected increase of inflation. India's billionaire Gautam Adani's wealth increased, to push him near to 2nd place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X