ಹೊಸ ಕೊರೊನಾ ಸೋಂಕಿನ ಭಯ: ಸೆನ್ಸೆಕ್ಸ್ 1400 ಪಾಯಿಂಟ್ಸ್ ಕುಸಿತ

ನವದೆಹಲಿ, ಡಿಸೆಂಬರ್ 21: ಬ್ರಿಟನ್‌ನಲ್ಲಿ ಹೊಸ ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಭಾರತೀಯ ಷೇರುಪೇಟೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1406 ಪಾಯಿಂಟ್ಸ್ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 432.15 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕವಾದ ಸೆನ್ಸೆಕ್ಸ್ 1,406.73 ಪಾಯಿಂಟ್ಸ್ ಅಥವಾ ಶೇಕಡಾ 3ರಷ್ಟು ಇಳಿಕೆಗೊಂಡು 45,553.73 ಪಾಯಿಂಟ್ಸ್‌ಗೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 432.15 ಪಾಯಿಂಟ್ಸ್ ಅಥವಾ ಶೇಕಡಾ 3.14ರಷ್ಟು ಕುಸಿದು 13,328.40 ಪಾಯಿಂಟ್ಸ್‌ಗೆ ತಲುಪಿದೆ.

ಇಂದು ಷೇರುಪೇಟೆಯಲ್ಲಿ 580 ಷೇರುಗಳು ಲಾಭಗಳಿಸಿದರೆ, 2,381 ಷೇರುಗಳು ಕುಸಿತಗೊಂಡಿವೆ ಮತ್ತು 163 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

 Renewed Covid Fear: Sensex Falls 1400 points, Nifty Below 13,350 Points

ಒಎನ್‌ಜಿಸಿ, ಟಾಟಾ ಮೋಟಾರ್ಸ್, ಗೇಲ್, ಹಿಂಡಾಲ್ಕೊ ಮತ್ತು ಐಒಸಿ ನೇತೃತ್ವದಲ್ಲಿ ನಿಫ್ಟಿ 50 ನಲ್ಲಿನ ಎಲ್ಲಾ ಷೇರುಗಳು ಕುಸಿತಗೊಂಡಿವೆ. ಎಲ್ಲಾ ವಲಯ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಶೇ. 7 ರಷ್ಟು ಕುಸಿದಿದ್ದರೆ, ಮೆಟಲ್, ಇನ್ಫ್ರಾ, ಬ್ಯಾಂಕ್, ಆಟೋ ಮತ್ತು ಇಂಧನ ಸೂಚ್ಯಂಕಗಳು ಶೇಕಡಾ 4-5 ರಷ್ಟು ಕುಸಿದವು.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಭಾರಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ 21 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್‌ಗೆ 73.78 ಕ್ಕೆ ತಲುಪಿದೆ. ಇದು ಶುಕ್ರವಾರದ 73.57 ರ ವಿರುದ್ಧ 18 ಪೈಸೆ ಕಡಿಮೆಯಾಗಿ 73.75 ಕ್ಕೆ ವಹಿವಾಟು ಆರಂಭಿಸಿ 73.64-73.82 ವ್ಯಾಪ್ತಿಯಲ್ಲಿ ಉಳಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+