ಜಿಯೋ ದಾಖಲೆ: ಒಂದೇ ತಿಂಗಳಿನಲ್ಲಿ 72 ಮಿಲಿಯನ್ ಗ್ರಾಹಕರು
ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್(ಜಿಯೋ), ಕೇವಲ ಒಂದು ತಿಂಗಳಲ್ಲಿ ಸುಮಾರು 72ದಶಲಕ್ಷ(ಈ ಸಂಖ್ಯೆ ಇನ್ನೂ ಮುಂದುವರಿಯುತ್ತಿದೆ!) ಜಿಯೋ ಗ್ರಾಹಕರು ಜಿಯೋ ಪ್ರೈಮ್ ಸದಸ್ಯತ್ವ ಪಡೆದಿರುವುದಾಗಿ ಘೋಷಿಸಿದೆ.
ಬೆಂಗಳೂರು, ಏಪ್ರಿಲ್ 02: ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್(ಜಿಯೋ), ಕೇವಲ ಒಂದು ತಿಂಗಳಲ್ಲಿ ಸುಮಾರು 72ದಶಲಕ್ಷ(ಈ ಸಂಖ್ಯೆ ಇನ್ನೂ ಮುಂದುವರಿಯುತ್ತಿದೆ!) ಜಿಯೋ ಗ್ರಾಹಕರು ಜಿಯೋ ಪ್ರೈಮ್ ಸದಸ್ಯತ್ವ ಪಡೆದಿರುವುದಾಗಿ ಘೋಷಿಸಿದೆ.
ಇದು ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಉಚಿತದಿಂದ ಪಾವತಿ ಸೇವೆಗೆ ಆಗಿರುವಂಥ ಅತಿದೊಡ್ಡ ವಲಸೆಯಾಗಿದೆ. ಜಿಯೋ ಪ್ರೈಮ್ ಸದಸ್ಯತ್ವಕ್ಕಾಗಿ ಹಾಗೂ ಮೊದಲ ರೀಚಾರ್ಜ್ ಮಾಡುವುದಕ್ಕಾಗಿ ಅಭೂತಪೂರ್ವ ಬೇಡಿಕೆ ಬರುತ್ತಿರುವುದನ್ನು ಪರಿಗಣಿಸಿ, ಜಿಯೋದ 303 ರೂ. (ಹಾಗೂ ಇತರೆ) ಪ್ಲ್ಯಾನ್‌ಗಳನ್ನು ಖರೀದಿಸಲು ನೀಡಲಾಗಿದ್ದ ಗಡುವನ್ನು ಏಪ್ರಿಲ್ 15ರವರೆಗೆ ವಿಸ್ತರಿಸಲಾಗಿದೆ. ಈ ವಿಸ್ತರಣೆಯು ಉಚಿತದಿಂದ ಪಾವತಿ ಸೇವೆಗೆ ವರ್ಗಾವಣೆಯಾಗುವ ಸಂದರ್ಭದಲ್ಲಿ ಉಂಟಾಗುವ ಸೇವಾ ತೊಡಕುಗಳಿಂದ ಮುಕ್ತವಾಗಲು ಗ್ರಾಹಕರಿಗೆ ನೆರವಾಗುತ್ತದೆ.[ಜಿಯೋ ಪ್ರೈಮ್ vs ಏರ್ ಟೆಲ್, ವೋಡಾಫೋನ್, ಐಡಿಯಾ]

ಹೊಸ ಯೋಜನೆ: ಜಿಯೋ ಪ್ರೈಮ್ ಸದಸ್ಯರಿಗಾಗಿ ಜಿಯೋ ಇದೀಗ ಹೊಸ ಜಿಯೋ ಬೇಸಗೆಯ ಅಚ್ಚರಿ(ಜಿಯೋ ಸಮ್ಮರ್ ಸರ್ಪ್ರೈಸ್) ಯನ್ನೂ ಘೋಷಿಸಿದೆ. ಏಪ್ರಿಲ್ 15 ರೊಳಗೆ ಜಿಯೋದ 303 ರೂ.ಗಳ ಪ್ಲ್ಯಾನ್(ಅಥವಾ ಅಧಿಕ ಮೊತ್ತದ ಬೇರೆ ಪ್ಲ್ಯಾನ್) ಬಳಸಿ ತನ್ನ ಮೊದಲ ಪಾವತಿ ರೀಚಾರ್ಜ್ ಮಾಡುವ ಪ್ರತಿಯೊಬ್ಬ ಜಿಯೋ ಪ್ರೈಮ್ ಸದಸ್ಯನಿಗೂ, ಮೊದಲ 3 ತಿಂಗಳ ಸೇವೆಯನ್ನು ಉಚಿತವಾಗಿ ನೀಡಲಾಗುವುದು. [ಹ್ಯಾಪಿ ನ್ಯೂ ಇಯರ್ ಯೋಜನೆ ವಿಸ್ತರಣೆ?]
ಹೀಗಾಗಿ, ನೀವು ಈಗಾಗಲೇ ಪಾವತಿಸಿದ ಟ್ಯಾರಿಫ್ ಪ್ಲ್ಯಾನ್ ಜುಲೈ ತಿಂಗಳ ನಂತರವೇ ಅಂದರೆ, ಈ ಕಾಂಪ್ಲಿಮೆಂಟರಿ ಸೇವೆಯ ಅವಧಿ ಮುಗಿದ ಬಳಿಕವೇ ಅನ್ವಯವಾಗುತ್ತದೆ. ಜಿಯೋ ಪ್ರೈಮ್ ಸದಸ್ಯರಿಗೆ ನೀಡಲಾಗುವ ಹಲವು ಅಚ್ಚರಿಗಳಲ್ಲಿ ಈ ಜಿಯೋ ಬೇಸಗೆಯ ಅಚ್ಚರಿ ಮೊದಲನೆಯದ್ದು.
ಜಿಯೋ ಸೇವೆಗೆ ವರ್ಗಾವಣೆಗೊಂಡರೂ ತಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಯನ್ನೇ ಉಳಿಸಿಕೊಳ್ಳುವ ಮೊಬೈಲ್ ನಂಬರ್ ಪೋರ್ಟೆಬಿಲಿಟಿ(ಎಂಎನ್ ಪಿ) ಸೌಲಭ್ಯವು ದೇಶಾದ್ಯಂತ ಎಲ್ಲ ಗ್ರಾಹಕರಿಗೂ ಲಭ್ಯವಿದೆ. ಲಕ್ಷಾಂತರ ಗ್ರಾಹಕರು ಈಗಾಗಲೇ ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ, ಜಿಯೋದ ಇಂಟರ್ ನ್ಯಾಷನಲ್ ರೋಮಿಂಗ್ ಸೇವೆಯು ವಿಶ್ವಾದ್ಯಂತ ಲಭ್ಯವಿದೆ. ಅಲ್ಲದೆ, ಇದು ಇಡೀ ಇಂಡಸ್ಟ್ರಿಯಲ್ಲೇ ಅತ್ಯುತ್ತಮ ವಾಯ್ಸ್ ಮತ್ತು ಡಾಟಾ ದರವನ್ನು ಹೊಂದಿದೆ.












Click it and Unblock the Notifications