ಜಿಯೋ ಗ್ರಾಹಕರು ಇನ್ನು ವಾಯ್ಸ್ ಕಾಲ್ ಗೆ ದುಡ್ಡು ಕೊಡಬೇಕು, ಆದರೆ...

ನವದೆಹಲಿ, ಅಕ್ಟೋಬರ್ 9: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ದರ ವಿಧಿಸಲು ಮುಂದಾಗಿದೆ. ಜಿಯೋ ಹೊರತುಪಡಿಸಿ ಉಳಿದ ನೆಟ್ ವರ್ಕ್ ಗಳ ಸಿಮ್ ಕಾರ್ಡ್ ಬಳಸುತ್ತಿರುವ ಮೊಬೈಲ್ ಫೋನ್ ಗಳಿಗೆ ಕರೆ ಮಾಡಿದರೆ ಪ್ರತಿ ನಿಮಿಷದ ವಾಯ್ಸ್ ಕಾಲ್ ಗೆ ಆರು ಪೈಸೆ ದರ ವಿಧಿಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಅಷ್ಟೇ ಮೊತ್ತದ ಉಚಿತ ಡೇಟಾವನ್ನು ನೀಡಲಾಗುತ್ತದೆ.

ಈ ಬಗ್ಗೆ ಹೇಳಿಕೆ ನೀಡಿರುವ ಜಿಯೋ, ಇತರ ಜಿಯೋ ಬಳಕೆದಾರರಿಗೆ ಮಾಡುವ ಕರೆಗೆ, ದೂರವಾಣಿ ಕರೆಗೆ, ವಾಟ್ಸಾಪ್, ಫೇಸ್ ಟೈಮ್ ಇಂಥದರ ಮೂಲಕ ಮಾಡುವ ಕರೆಗಳಿಗೆ ದರ ಅನ್ವಯ ಆಗುವುದಿಲ್ಲ. ಇನ್ನು ಇತರ ನೆಟ್ ವರ್ಕ್ ಗಳಿಂದ ಒಳಬರುವ ಕರೆಗಳು ಮಾಮೂಲಿನಂತೆ ಉಚಿತವಾಗಿಯೇ ಇರುತ್ತವೆ.

ಯಾವಾಗ ಜಿಯೋ ಕಂಪೆನಿಯಿಂದ ಉಚಿತ ವಾಯ್ಸ್ ಕಾಲ್ ನೀಡಲು ಆರಂಭಿಸಲಾಯಿತೋ ಆಗಿನಿಂದ 13,500 ಕೋಟಿ ನಷ್ಟವನ್ನು ಜಿಯೋ ಭರಿಸಿದೆ. ಏಕೆಂದರೆ, ಟ್ರಾಯ್ ನಿಯಮದ ಪ್ರಕಾರ, ಇಂಟರ್ ಕನೆಕ್ಟ್ ಯೂಸೇಜ್ ಗೆ (ಐಯುಸಿ) ಎರಡು ವರ್ಷದ ಹಿಂದೆ ಹದಿನಾಲ್ಕು ಪೈಸೆಯಿಂದ ಆರು ಪೈಸೆ ಆಯಿತು. ಇದು ಮುಂದಿನ ವರ್ಷದ ಜನವರಿಗೆ ಕೊನೆ ಆಗಬಹುದು.

Reliance Jio Will Charge 6 Paise Per Minute For Rival Network Calls

ಟ್ರಾಯ್ ನಡೆಯಿಂದ ಆಗುವ ನಷ್ಟವನ್ನು ಸರಿದೂಗಿಸಲು ನಿರ್ಧರಿಸಿರುವ ಜಿಯೋ, ಪ್ರತಿಸ್ಪರ್ಧಿ ನೆಟ್ ವರ್ಕ್ ಗೆ ಮಾಡುವ ಪ್ರತಿ ಕರೆಗೆ ನಿಮಿಷಕ್ಕೆ ಆರು ಪೈಸೆ ದರ ವಿಧಿಸಲಿದೆ. ಇದೇ ಮೊದಲ ಬಾರಿಗೆ ಜಿಯೋ ಬಳಕೆದಾರರು ವಾಯ್ಸ್ ಕಾಲ್ ಗೆ ಹಣ ಪಾವತಿಸಲಿದ್ದಾರೆ. ಸದ್ಯಕ್ಕೆ ಜಿಯೋದಿಂದ ಡೇಟಾಗೆ ಮಾತ್ರ ದರ ವಿಧಿಸಲಾಗುತ್ತಿದೆ. ದೇಶದ ಎಲ್ಲಿಗೆ ಮತ್ತು ಯಾವುದೇ ನೆಟ್ ವರ್ಕ್ ಗೆ ಕರೆ ಮಾಡಿದರೂ ಉಚಿತ ಇದೆ.

ಜಿಯೋ ಗ್ರಾಹಕರು ಯಾರು ಬುಧವಾರದಿಂದ (ಅಕ್ಟೋಬರ್ 9) ರೀಚಾರ್ಜ್ ಮಾಡಿಸುತ್ತಾರೋ ಅಂಥವರು ಇತರ ನೆಟ್ ವರ್ಕ್ ಗೆ ಕರೆ ಮಾಡಿದಾಗ ನಿಮಿಷಕ್ಕೆ ಐಯುಸಿ ದರ ಆರು ಪೈಸೆ ಭರಿಸಬೇಕಾಗುತ್ತದೆ. ಮುಂದೆ ಟ್ರಾಯ್ ನಿಂದ ಐಯುಸಿ ದರ ಶೂನ್ಯ ಆಗುವ ತನಕ ಆ ದರ ಹಾಗೇ ಇರುತ್ತದೆ.

ಕಳೆದ ಮೂರು ವರ್ಷಗಳಲ್ಲಿ ಏರ್ ಟೆಲ್, ವೊಡಾಫೋನ್- ಐಡಿಯಾದಂಥ ಪ್ರತಿಸ್ಪರ್ಧಿ ನೆಟ್ ವರ್ಕ್ ಗಳ ಐಯುಸಿ ದರವನ್ನು ಹತ್ತಿರ ಹತ್ತಿರ 13,500 ಕೋಟಿ ರುಪಾಯಿಯನ್ನು ಜಿಯೋ ಭರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+